ಹೆಣ್ಣುಮಕ್ಕಳ ಶಾಪ ತಟ್ಟಿದರೆ ಏನಾಗತ್ತೆ ಅನ್ನೋದಕ್ಕೆ ದರ್ಶನ್‌ ಕೇಸ್‌ ಸಾಕ್ಷಿ: ವಿ. ಮನೋಹರ್

ಎಷ್ಟೋ ಸಾವಿರಾರು ಹೆಣ್ಣುಮಕ್ಕಳ ಶಾಪ ತಟ್ಟಿದಾಗ ಏನಾಗತ್ತೆ ಅನ್ನೋದನ್ನ ಈ ಘಟನೆಯಿಂದ ತಿಳಿದುಕೊಳ್ಳಬೇಕು.;

Update: 2024-07-03 13:42 GMT
ವಿ. ಮನೋಹರ್
Click the Play button to listen to article

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ  ದರ್ಶನ್ ಅರೆಸ್ಟ್ ಆಗಿದ್ದಾರೆ. ದರ್ಶನ್ ಕೇಸ್ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಮೌನವಹಿಸಿದ್ದಾರೆ. ಇದೀಗ ಸಂಗೀತ ಸಂಯೋಜಕ ವಿ. ಮನೋಹರ್ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ.

ಸಂಗೀತ ನಿರ್ದೇಶಕ ವಿ ಮನೋಹರ್ ಮಾತನಾಡಿ ʻʻಇದೊಂದು ಆಕಸ್ಮಿಕ.ಇದು ಬೇಕು ಅಂತ ಯಾರು ಮಾಡಿರಲ್ಲ. ಎಷ್ಟೋ ಸಾವಿರಾರು ಹೆಣ್ಣುಮಕ್ಕಳ ಶಾಪ ತಟ್ಟಿದಾಗ ಏನಾಗತ್ತೆ ಅನ್ನೋದನ್ನ ಈ ಘಟನೆಯಿಂದ ತಿಳಿದುಕೊಳ್ಳಬೇಕು. ಹೆಣ್ಣು ಮಕ್ಕಳು ಅಂದರೆ ಅಷ್ಟು ಕೇವಲವೇ? ಒಂದೊಂದು ಮೆಸೇಜಸ್ ನೋಡಿದರೆ ತುಂಬಾ ಕೆಟ್ಟ ಮೆಸೇಜಸ್. ರೇಣುಕಾಸ್ವಾಮಿ ತರ ಇನ್ನೂ ಒಂದಷ್ಟು ಜನ ಇದ್ದಾರೆ. ನಾನು ಸೈಬರ್ ಕ್ರೈಂ ಪೊಲೀಸರಲ್ಲಿ ಮನವಿ ಮಾಡ್ತೇನೆ. ಇಂತವರನ್ನು ಹುಡುಕಿ ಶಿಕ್ಷೆ ಕೊಡಿ. ಆಗ ಈ ತರಹದ ಘಟನೆಗಳು ತಪ್ಪುತ್ತದೆ. . ಈ ಘಟನೆಯಲ್ಲಿ ಕೊಲೆಯಾಗಿರುವ ರೇಣುಕಾಸ್ವಾಮಿ ವಿರುದ್ಧ ಮೂರು ತಿಂಗಳ ಹಿಂದೆಯೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಪೊಲೀಸರು ಯಾಕೆ ಆಕ್ಷನ್ ತೆಗೆದುಕೊಂಡಿಲ್ಲ ಅನ್ನೋದು ವಿಚಿತ್ರ.

ಮೊದಲೇ ಆಕ್ಷನ್ ತೆಗೆದುಕೊಂಡಿದ್ದರೆ ಒಳ್ಳೆಯದಿರುತ್ತಿತ್ತು. ಅವನ ಪಾಪದ ಕೊಡ ತುಂಬಿತು ಅವನು ಸರಿಯಾಗಿ ಅನುಭವಿಸಿದ. ದರ್ಶನ್ ಅವರ ಜೀವನದಲ್ಲಿ ಇದು ಆಗಬಾರದಿತ್ತು. ಸ್ನೇಹಿತರಾಗಿ ನಾನು ದರ್ಶನ್ ಅವರಿಗೆ ಈ ಕಳಂಕದಿಂದ ಹೊರಗೆ ಬರಲಿ ಅಂತ ಹಾರೈಸುತ್ತೇನೆ. ಮತ್ತೆ ಮೊದಲಿನಂತೆ ಇನ್ನೊಂದು ಅಷ್ಟು ಸಿನಿಮಾಗಳು ಮಾಡಲಿ. ದರ್ಶನ್ ಸಿನಿಮಾ ಅಂದರೆ ನೂರಾರು ಜನ ಕೆಲಸ ಮಾಡುತ್ತಾರೆ. ನೂರಾರು ಜನಕ್ಕೆ ಅನ್ನ ಸಿಗತ್ತದೆ ಎಂದು ಹೇಳಿದ್ದಾರೆ.

ಈ ಘಟನೆ ನಂಬೋಕೆ ಆಗ್ತಿಲ್ಲ ಎಂದ ನಟ ಸಾಯಿ ಕುಮಾರ್​

ಇನ್ನು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ದರ್ಶನ್‌ ಬಗ್ಗೆ ಡೈಲಾಗ್​ ಕಿಂಗ್​ ಸಾಯಿ ಕುಮಾರ್​ ಅವರು ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು‌. ಈ ಘಟನೆ ನಂಬಲು ಸಾಧ್ಯವಿಲ್ಲ. ದರ್ಶನ್ ಒಳ್ಳೆ ವ್ಯಕ್ತಿ. ಆತನ ಸಿನಿಮಾ ನೋಡಿ ನಾನು, ರವಿ ಸಾಕಷ್ಟು ಮಾತಾಡಿದ್ದೀವಿ. ಕುರುಕ್ಷೇತ್ರದಲ್ಲಿ ನಾನು ಅರ್ಜುನ ಪಾತ್ರ ಮಾಡಬೇಕಿತ್ತು. ಅಡ್ವಾನ್ಸ್ ಕೂಡ ತೆಗೆದುಕೊಂಡಿದ್ದೆ. ಕೊನೆಗೆ ನಾನೇ ಈ ಪಾತ್ರದಿಂದ ದೂರ ಉಳಿದೆ. ಅರ್ಜುನನಿಗೆ ಬೇಕಾದ ಫಿಸಿಕ್ ನನಗೆ ಇರಲಿಲ್ಲ‌. ಕಾನೂನಿನ ಮುಂದೆ ಎಲ್ಲರೂ ಸಮಾನರು. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ‌ ಎಂದು ಹೇಲಿದ್ದಾರೆ.

Tags:    

Similar News