Cinema Lovers Day 2024 | ಕೇವಲ 99 ರೂಪಾಯಿ ಕೊಟ್ಟು ಸಿನಿಮಾ ನೋಡಿ!
ಇಂದು ಮೇ 31 ʻ ಸಿನಿಮಾ ಲವರ್ಸ್ ಡೇʼ. ಈ ನಿಟ್ಟಿನಲ್ಲಿ ಇಂದು ಕೇವಲ 99 ರೂಪಾಯಿಗೆ ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಸಿನಿಮಾ ಥಿಯೇಟರ್‌ಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ನೋಡಬಹುದಾಗಿದೆ.;
ಇಂದು ಮೇ 31 ʻಸಿನಿಮಾ ಲವರ್ಸ್ ಡೇʼ. ಈ ನಿಟ್ಟಿನಲ್ಲಿ ಇಂದು ಕೇವಲ 99 ರೂಪಾಯಿಗೆ ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಸಿನಿಮಾ ಥಿಯೇಟರ್‌ಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಬಹುದಾಗಿದೆ. ಪಿವಿಆರ್ ಐನಾಕ್ಸ್, ಸಿನಿಪೋಲಿಸ್ ಇಂಡಿಯಾ, ಮಿರಾಜ್ ಸಿನಿಮಾಸ್, ಮುಲ್ತಾ ಎ2 ಮತ್ತು ಮೂವಿಮ್ಯಾಕ್ಸ್ ಸೇರಿದಂತೆ ಪ್ರಮುಖ ಮಲ್ಟಿಫ್ಲೆಕ್ಸ್‌ಗಳಲ್ಲಿಯೂ ಈ ಆಫರ್ ಇರಲಿದೆ.
ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಡಿಮೆಯಾಗಿದೆ. ಅದಕ್ಕೆ ಟಿಕೆಟ್ ದರ ದುಬಾರಿ ಎಂಬುದು ಮುಖ್ಯ ಕಾರಣ. ಕೊರೊನಾ ಬಂದ ಬಳಿಕ ಮತ್ತಷ್ಟು ಜನ ಚಿತ್ರಮಂದಿರಗಳ ಕಡೆ ತಿರುಗಿ ನೋಡೇ ಇಲ್ಲ. ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಪ್ಲೆಕ್ಸ್ಗಳ ಹೊಸ ಐಡಿಯಾ ಮಾಡಿದವು. ಈ ವರ್ಷ ಮೇ 31ರಂದು ‘ಸಿನಿಮಾ ಲವರ್ಸ್ ಡೇ’ ಸೆಲೆಬ್ರೇಟ್ ಮಾಡಲಾಗುತ್ತಿದೆ. ಥಿಯೇಟರ್‌ನಲ್ಲಿ ಸುಮಾರು ಶೇ. 90-95 ಸೀಟುಗಳು ಈ 99 ರೂಪಾಯಿ ಟಿಕೆಟ್ ದರದಲ್ಲಿ ದೊರಕಲಿದೆ. ಕೆಲವು ಏಕಪರದೆ ಚಿತ್ರಮಂದಿರಗಳಲ್ಲಿ 99 ರೂಪಾಯಿ, ಇನ್ನು ಕೆಲವು 70 ರೂಪಾಯಿಗೆ ಟಿಕೆಟ್ ನೀಡಲಿವೆ.
ಈ ವಾರ ಬಿಡುಗಡೆ ಆಗಲಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’, ‘ಫಾಸ್ಟ್ ಚಾರ್ಲಿ’, ‘ಸವಿ’, ‘ಸ್ಟ್ರೇಂಜರ್ಸ್’ ಮುಂತಾದ ಸಿನಿಮಾಗಳನ್ನು ಕೂಡ ಕೇವಲ 99 ರೂಪಾಯಿಗೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ.