ಚಿತ್ರೀಕರಣ ಮುಗಿಸಿದ ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾ

ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ವೈಭವಿ, ಲಾವಣ್ಯ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಂಜು ಕವಿ ಅವರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.;

Update: 2024-10-24 12:57 GMT
ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಡಿಫರೆಂಟ್‌ ಟೈಟಲ್‌ನಲ್ಲೇ  ಪ್ರೇಕ್ಷಕರಿಗೆ ಕೌತುಕ ಮೂಡಿಸಿರುವ ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಶ್ರೀ ರಾಮ ಪ್ರೊಡಕ್ಷನ್’ ಸಂಸ್ಥೆಯ ಮೂಲಕ ಸಿ.ಎಸ್. ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೆಂಬರ್​ 10ರಂದು ಈ ಚಿತ್ರದ ಟ್ರೇಲರ್​ ರಿಲೀಸ್​ ಮಾಡಲು ಸಿದ್ಧತೆ ನಡೆದಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಮತ್ತು ಸಂಗೀತಾ ನಟಿಸಿದ್ದಾರೆ.

ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ವೈಭವಿ, ಲಾವಣ್ಯ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಂಜು ಕವಿ ಅವರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಕೂಡ ಅವರೇ ನಿಭಾಯಿಸಿದ್ದಾರೆ. ಎಸ್.ಜೆ. ಸಂಜಯ್, ಗಿರೀಶ್ ಸಾಕಿ, ಸಂಗೀತಾ ಶೆಟ್ಟಿ ಅವರು ಡೈರೆಕ್ಷನ್​ ತಂಡದಲ್ಲಿ ಇದ್ದಾರೆ‌.

‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಚಿತ್ರಕ್ಕೆ ರೇಣು ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕರಣ್ ಕುಮಾರ್ ಮತ್ತು ವೆಂಕಿ ಯುಡಿಐ ಅವರು ಸಂಕಲನ ಮಾಡಿದ್ದಾರೆ. ನಂದ ಮಾಸ್ಟರ್ ಮತ್ತು ಮೈಸೂರು ರಾಜು ಅವರ ನೃತ್ಯ ಈ ಸಿನಿಮಾಗಿದೆ. ಸಿನಿಮಾದಲ್ಲಿ 4 ಹಾಡುಗಳಿದ್ದು ರವೀಂದ್ರ ಸೊರಗಾವಿ, ಕೈಲಾಶ್ ಕೇರ್, ಅನುರಾಧ ಭಟ್ ಧ್ವನಿ ನೀಡಿದ್ದಾರೆ. ವಿನು ಮನಸು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಸುಚೇಂದ್ರ ಪ್ರಸಾದ್, ಸಂಗೀತಾ, ರಾಜವರ್ಧನ್, ವೈಭವಿ, ಲಾವಣ್ಯ ಮಾತ್ರವಲ್ಲದೇ ಚಂದ್ರಪ್ರಭ, ಟೆನ್ನಿಸ್ ಕೃಷ್ಣ, ವಿನೋದ್ ಗೊಬ್ಬರಗಾಲ, ರೇಖಾ ದಾಸ್, ವಿನೋದ್, ಜಗದೀಶ್ ಕೊಪ್ಪ, ಮೂಗು ಸುರೇಶ್, ಚೈತ್ರಾ ಕೊಟ್ಟೂರು, ಶಿವಾರೆಡ್ಡಿ, ಮಂಜು ಪಾವಗಡ, ಮುಖೇಶ್, ಸಿಲ್ಲಿ ಲಲ್ಲಿ ಚಿದಾನಂದ್, ಶ್ರೀನಿವಾಸ್ ಗೌಡ, ಸುರೇಶ್ ಉದ್ಬೂರ್, ಯಶೋದಾ ನಾಗರಾಜ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

Tags:    

Similar News