Punith Rajkumar@50 | ಪುನೀತ್ 50ನೇ ಹುಟ್ಟುಹಬ್ಬಕ್ಕೆ 'ಅಪ್ಪು' ರೀ- ರೀಲಿಸ್!
'ಅಪ್ಪು' ಮರು ಬಿಡುಗಡೆ ಕುರಿತು ಪಿಆರ್ ಕೆ ಪ್ರೊಢಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.;
By : The Federal
Update: 2025-02-26 11:38 GMT
ದಿವಂಗತ ನಟ ಡಾ. ಪುನೀತ್ ರಾಜ್ ಕುಮಾರ್ʼ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದ 'ಅಪ್ಪು' ಸಿನಿಮಾ ಅವರ ಹುಟ್ಟುಹಬ್ಬವಾದ ಮಾರ್ಚ್ 14 ರಂದು ರೀ- ರೀಲಿಸ್ ಆಗಲಿದೆ.
ಪುನೀತ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಥಿಯೇಟರ್‌ಗಳಲ್ಲಿ 'ಅಪ್ಪು' ಚಿತ್ರವನ್ನು PRK Productions ಮರು ಬಿಡುಗಡೆ ಮಾಡುತ್ತಿದೆ. ಪಿಆರ್ ಕೆ ಪ್ರೊಢಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದ 'ಅಪ್ಪು' 2002 ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನಾಥ್ ನಿರ್ದೇಶಿಸಿದ್ದ ಈ ಚಿತ್ರ ಆಗಿನ ಕಾಲದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ರಕ್ಷಿತಾ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಸಿನಿಮಾದ ಹಾಡುಗಳು ಕೂಡ ಯಶಸ್ಸು ಕಂಡಿದ್ದವು. ಗುರು ಕಿರಣ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರು.