ʼಸಬರಮತಿ ರಿಪೋರ್ಟ್ ʼ ಸಿನಿಮಾ ಹೀರೊ ವಿಕ್ರಾಂತ್ ಮಾಸ್ಸೆ ಸಿನಿಮಾ ಕ್ಷೇತ್ರಕ್ಕೆ ವಿದಾಯ
ನವೆಂಬರ್ 15 ರಂದು ತೆರೆಗೆ ಬಂದ ಅವರ ಇತ್ತೀಚಿನ ಚಿತ್ರ "ದಿ ಸಬರಮತಿ ರಿಪೋರ್ಟ್" ಸಿನಿಮಾದಲ್ಲಿ ಮುಖ್ಯಪಾತ್ರ ವಹಿಸಿದ್ದರು. ನಿರ್ಮಾಣ ಸಂಸ್ಥೆ "ಬಾಲಾಜಿ ಮೋಷನ್ ಪಿಕ್ಚರ್ಸ್ʼ ಪ್ರಕಾರ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 22 ಕೋಟಿ ರೂಪಾಯಿ ಗಳಿಸಿದೆ.;
ತಾನು ತನ್ನ ವೃತ್ತಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಸೋಮವಾರ ಪ್ರಕಟಿಸಿರುವ ನಟ ವಿಕ್ರಾಂತ್ ಮಾಸ್ಸೆ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಪುನರಾಗಮನಕ್ಕೆ "ಸಮಯವು ಸೂಕ್ತವೆಂದು ಭಾವಿಸುವವರೆಗೆ" ಚಲನಚಿತ್ರಗಳಿಂದ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ನವೆಂಬರ್ 15 ರಂದು ತೆರೆಗೆ ಬಂದ ಅವರ ಇತ್ತೀಚಿನ ಚಿತ್ರ "ದಿ ಸಬರಮತಿ ರಿಪೋರ್ಟ್" ಸಿನಿಮಾದಲ್ಲಿ ಮುಖ್ಯಪಾತ್ರ ವಹಿಸಿದ್ದರು. ನಿರ್ಮಾಣ ಸಂಸ್ಥೆ "ಬಾಲಾಜಿ ಮೋಷನ್ ಪಿಕ್ಚರ್ಸ್ʼ ಪ್ರಕಾರ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 22 ಕೋಟಿ ರೂಪಾಯಿ ಗಳಿಸಿದೆ.
ಇತ್ತೀಚೆಗೆ 2023ರ "12ನೇ ಫೇಲ್" ಮತ್ತು ಇತ್ತೀಚಿನ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಗೊಂಡ "ಸೆಕ್ಟರ್ 26" ನಲ್ಲೂ ಯಶಸ್ಸು ಕಂಡಿದ್ದರು. ಹೀಗಾಗಿ ಅವರು ಕಳೆದ ಕೆಲವು ವರ್ಷಗಳಲ್ಲಿ ತಾವು ಕಂಡ ಯಶಸ್ಸಿಗಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
"ನಿಮ್ಮ ಸ್ಮರಣೀಯ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು 37 ವರ್ಷದ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
" ನಾನು ಕ್ಷೇತ್ರದಲ್ಲಿ ಮ= ಮುಂದುವರಿಯುತ್ತಿದ್ದಂತೆ ನನ್ನ ಕ್ಷೇತ್ರವನ್ನು ಮರುಪರಿಶೀಲಿಸಲು ಮತ್ತು ವಿಮುಖನಾಗಲು ಉತ್ತಮ ಸಮಯ ಎಂದು ನನಗೆ ತಿಳಿದಿದೆ. ತಂದೆಯಾಗಿ ಮತ್ತು ಮಗನಾಗಿ. ಮತ್ತು ಒಬ್ಬ ನಟನಾಗಿ ಇದು ಇದು ಸೂಕ್ತ ಸಮಯ ಎಂದು ನಂಬಿದ್ದೇನೆ,ʼʼ ಎಂದು ಹೇಳಿದ್ದಾರೆ.
ನಟ ವಿಕ್ರಾಂತ್ ಮಾಸೆ ಅವರ ಪತ್ನಿ ಶೀತಲ್ ಠಾಕೂರ್ ತಮ್ಮ ಮೊದಲ ಮಗು ಮಗ ವರ್ದಾನ್‌ಗೆ ಜನುಮ ನೀಡಿದ್ದರು . ಅಂದ ಹಾಗೆ 2025ಕ್ಕೆ ತಮ್ಮ ಎರಡು ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಹೇಳಿದ್ದಾರೆ.
"2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ನಿರ್ಣಯ ಕೈಗೊಳ್ಳುವುದಕ್ಕೆ ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಕಳೆದ 2 ಚಲನಚಿತ್ರಗಳು ಮತ್ತು ಅನೇಕ ವರ್ಷಗಳ ನೆನಪುಗಳು ಹಾಗೆಯೇ ಇರುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.