‘ಗುಮ್ಮಡಿ ನರಸಯ್ಯ’ ಜೀವನಾಧಾರಿತ ಬಯೋಪಿಕ್‌ನಲ್ಲಿ ನಟ ಶಿವರಾಜ್‌ಕುಮಾರ್
ಹೊಸ ನಿರ್ದೇಶಕರಾದ ಪರಮೇಶ್ವರ್ ಹಿರ್ವಾಲೆ ಅವರು 'ಗುಮ್ಮಡಿ ನರಸಯ್ಯ' ಜೀವನ ಚರಿತ್ರೆ ಆಧರಿತ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವಲ್ಲಿಕ್ ಆರ್ಟ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ಎನ್. ಸುರೇಶ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಗುಮ್ಮಡಿ ನರಸಯ್ಯ ಲುಕ್‌ನಲ್ಲಿ ನಟ ಶಿವರಾಜ್‌ಕುಮಾರ್
ತೆಲಂಗಾಣದ ಯೆಲ್ಲಾಂಡು ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದ ಜನನಾಯಕ ಗುಮ್ಮಡಿ ನರಸಯ್ಯ ಅವರ ಜೀವನ ಆಧರಿತ ಬಹುನಿರೀಕ್ಷಿತ ಬಯೋಪಿಕ್ ಚಿತ್ರದಲ್ಲಿ ನಟ ಡಾ. ಶಿವರಾಜ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
`ರಾಜಕೀಯವು ಒಂದು ಸೇವೆ’ ಎನ್ನುವ ಧೋರಣೆಯ ಕಾಲದಲ್ಲಿ ಮನೆ ಮಾತಾದ ನರಸಯ್ಯ ಅವರು, ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ- ಲೆನಿನಿಸ್ಟ್) ಪರವಾಗಿ ಐದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಸರಳತೆ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದ ಅವರು, ವಿಧಾನಸಭೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದರು, ಕೆಂಪು ದೀಪಗಳ ಕಾರುಗಳ ಮೋಹಕ್ಕೆ ಒಳಗಾಗದವರು. ಬಡವರು ಮತ್ತು ಬುಡಕಟ್ಟು ಜನರ ಹಕ್ಕುಗಳಿಗಾಗಿ ಸದಾ ಹೋರಾಡಿದ ನರಸಯ್ಯ ಅವರ ಜೀವನವನ್ನು ಈಗ ದೊಡ್ಡ ಪರದೆಯ ಮೇಲೆ ತರಲಾಗುತ್ತಿದೆ.
ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪರಮೇಶ್ವರ್ ಹಿವರಾಳೆ ತಮ್ಮ ನಿರ್ದೇಶನದ ಮೊದಲ ಪ್ರಯತ್ನ ನೀಡುತ್ತಿದ್ದಾರೆ. ಚಿತ್ರದ ಘೋಷಣೆಯೊಂದಿಗೆ ಬಿಡುಗಡೆಯಾದ ಭಾವನಾತ್ಮಕ ಪೋಸ್ಟರ್‌ನಲ್ಲಿ ಶಿವರಾಜ್‌ಕುಮಾರ್ ಅವರು ಬಿಳಿ ಕುರ್ತಾ–ಪೈಜಾಮ ಹಾಗೂ ಕೆಂಪು ಶಾಲು ಧರಿಸಿಕೊಂಡು, ಪಕ್ಕದಲ್ಲಿ CPI(ML) ಧ್ವಜವು ಹಾರುತ್ತಿರುವ ಸೈಕಲ್ ಪಕ್ಕದಲ್ಲಿ ನಿಂತಿರುವ ದೃಶ್ಯ ಕಾಣುತ್ತದೆ. ಇದು ನರಸಯ್ಯ ಅವರ ಸರಳ ಮತ್ತು ಜನಕೇಂದ್ರೀಕೃತ ರಾಜಕೀಯ ಜೀವನದ ಪ್ರತೀಕವಾಗಿದೆ.
ಸಂವಿಧಾನ ಮತ್ತು ಸಮಾಜದ ನಂಟು
ಫಸ್ಟ್ ಲುಕ್ ವೀಡಿಯೊದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರ ಪ್ರತಿಮೆಗಳ ಜೊತೆಗೆ ಭಾರತೀಯ ಸಂವಿಧಾನದ ದೃಶ್ಯವು ಮುಖ್ಯವಾಗಿ ಕಾಣಿಸಿಕೊಂಡಿದೆ. ಈ ದೃಶ್ಯಗಳು ಚಿತ್ರದ ಮೂಲ ಕಥಾವಸ್ತುವಾದ ಜನರ ಹಕ್ಕುಗಳಿಗಾಗಿ ಹೋರಾಟ ಮತ್ತು ಸಮಾನತೆಯ ಹಾದಿಯ ಕಥೆಯನ್ನು ಪ್ರತಿಬಿಂಬಿಸುತ್ತವೆ.
ಈ ಚಿತ್ರವು ಕೇವಲ ರಾಜಕೀಯ ಬದುಕಿನ ಕಥೆಯಲ್ಲ. ಬದಲಿಗೆ ಕಾಲಾನಂತರದಲ್ಲಿ ಮಸುಕಾದಿರುವ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಮಾಜದ ನಡುವಿನ ಆಳವಾದ ನಂಟನ್ನು ಪುನರ್‌ಪರಿಚಯಿಸುವ ಪ್ರಯತ್ನವಾಗಿದೆ ಎಂದು ನಿರ್ದೇಶಕರ ಅಭಿಪ್ರಾಯ.
ಪರಮೇಶ್ವರ್ ಹಿರ್ವಾಲೆ ಅವರ ನಿರ್ದೇಶನ
ಹೊಸ ನಿರ್ದೇಶಕರಾದ ಪರಮೇಶ್ವರ್ ಹಿರ್ವಾಲೆ ಅವರು 'ಗುಮ್ಮಡಿ ನರಸಯ್ಯ' ಜೀವನ ಚರಿತ್ರೆಯನ್ನು ನಿರ್ದೇಶಿಸುತ್ತಿದ್ದಾರೆ. ಪ್ರವಲ್ಲಿಕ್ ಆರ್ಟ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ಎನ್. ಸುರೇಶ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 2022 ರಲ್ಲಿ ಈ ಚಿತ್ರವನ್ನು ಘೋಷಿಸಲಾಗಿದ್ದು, ಗುಮ್ಮಡಿ ನರಸಯ್ಯ ಅವರ ಜೀವನದ ಅಜ್ಞಾತ ಸಂಗತಿಗಳನ್ನು ಸಂಗ್ರಹಿಸಿ, ಸಂಶೋಧಿಸಿ ಅದನ್ನು ತೆರೆಗೆ ತರಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿರುವುದು ವರದಿಯಾಗಿದೆ.
ಗುಮ್ಮಡಿ ನರಸಯ್ಯ ಅವರು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಸದಸ್ಯರಾಗಿದ್ದು, ಭದ್ರಾಚಲಂನ ಎಲ್ಲಂಡು ಪ್ರದೇಶದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1978 ರಲ್ಲಿ ರೈತರ ಸಮಸ್ಯೆಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಆಗುತ್ತಿದ್ದ ಅನ್ಯಾಯವನ್ನು ಕಂಡು ರಾಜಕೀಯ ಪ್ರವೇಶಿಸಿದ ಇವರು, ಮೊದಲು ತೇಕುಲಪಲ್ಲಿ ಗ್ರಾಮದ ಸರಪಂಚ್ ಆಗಿ ಗೆದ್ದು, ನಂತರ 1983 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಐದು ಬಾರಿ ಶಾಸಕರಾಗಿದ್ದರೂ ಅವರು ಅತ್ಯಂತ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದು, ಇದು ಅನೇಕರಿಗೆ ಮಾದರಿಯಾಗಿದೆ. ಅವರ ಸರಳತೆಯೇ ನಿರ್ದೇಶಕರಿಗೆ ಈ ಬಯೋಪಿಕ್ ಮಾಡಲು ಪ್ರೇರಣೆ ನೀಡಿದೆ.
ಈ ಬಯೋಪಿಕ್ ಜೊತೆಗೆ, ಶಿವರಾಜ್‌ಕುಮಾರ್ ಸದ್ಯ ದಕ್ಷಿಣ ಚಿತ್ರರಂಗದ ಅತ್ಯಂತ ಬ್ಯುಸಿ ತಾರೆಗಳಲ್ಲಿ ಒಬ್ಬರು. ಅವರು ಶೀಘ್ರದಲ್ಲೇ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅವರೊಂದಿಗೆ “45” ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಜೊತೆಗೆ “ಡ್ಯಾಡ್” ಮತ್ತು “666: ಆಪರೇಷನ್ ಡ್ರೀಮ್ ಥಿಯೇಟರ್” ಚಿತ್ರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಜನಿಕಾಂತ್ ಅವರ “ಜೈಲರ್ 2” ಮತ್ತು ರಾಮ್ ಚರಣ್ ಅವರ “ಪೆಡ್ಡಿ” ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.