Wayanad Landslide | ವಯನಾಡು ಸಂತ್ರಸ್ತರ ನೋವಿಗೆ ಮಿಡಿದ ರಶ್ಮಿಕಾ ವಿರುದ್ಧ ಟ್ರೋಲ್‌!

ತಾಯ್ನಾಡಿನಲ್ಲೂ ಭೂಕುಸಿತಕ್ಕೂ ಜನರು ಸತ್ತಿದ್ದಾರೆ, ಮನೆ ಕಳೆದುಕೊಂಡಿದ್ದಾರೆ ಅದರ ಕಡೆಗೂ ಗಮನ ಇರಲಿ ಎಂದು ಕೆಲವರು ಟ್ರೋಲ್‌ ಮಾಡಿದ್ದಾರೆ

Update: 2024-08-03 07:40 GMT
ನಟಿ ರಶ್ಮಿಕಾ ಮಂದಣ್ಣ
Click the Play button to listen to article

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಮುನ್ನೂರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಮುಂಡಕೈ, ಚೋರಲ್ಮಲಾ ಸೇರಿದಂತೆ ಮೂರ್ನಾಲ್ಕು ಊರುಗಳು ಸಂಪೂರ್ಣ ಕೊಚ್ಚಿಹೋಗಿವೆ. ಭೂಕುಸಿತ ಸಂತ್ರಸ್ತರ ಸಹಾಯಕ್ಕೆ ಸೆಲೆಬ್ರಿಟಿಗಳು ಕೈ ಜೋಡಿಸುತ್ತಿದ್ದಾರೆ. ತಮಿಳು ನಟರಾದ ಸೂರ್ಯಾ, ಕಾರ್ತಿ, ಜ್ಯೋತಿಕಾ ಮತ್ತು ವಿಕ್ರಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಆದರೆ, ಇಂತಹ ಒಳ್ಳೆಯ ಕಾರ್ಯ ಮಾಡಿದ ನಟಿ ರಶ್ಮಿಕಾ, ಜನ ಮೆಚ್ಚುಗೆಗೆ ಒಳಗಾಗುವ ಬದಲು ಕರ್ನಾಟಕದ ಕೆಲವರಿಂದ ಟ್ರೋಲ್‌ ಒಳಗಾಗುತ್ತಿದ್ದಾರೆ. 

ವಯನಾಡಿನ ಭೂಕುಸಿತ ಪೀಡಿತ ಪ್ರದೇಶದ ಪುನರ್ನಿಮಾಣ ಮತ್ತು ಬದುಕುಳಿದವರ ಪುನರ್ವಸತಿಗಾಗಿ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನಟ ಫಹಾದ್ ಫಾಸಿಲ್‌ ಮತ್ತು ಅವರ ಪತ್ನಿ ನಸ್ರಿಯಾ ಒಟ್ಟು 25 ಲಕ್ಷ ನೀಡಿದ್ದಾರೆ. ನಟ ಸೂರ್ಯ, ಅವರ ಪತ್ನಿ ಜ್ಯೋತಿಕಾ ಮತ್ತು ಸಹೋದರ ಕಾರ್ತಿ ಸೇರಿ ಒಟ್ಟು 50 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ 15 ಲಕ್ಷ ಮತ್ತು ಅವರ ಪುತ್ರ ದುಲ್ಖರ್ ಸಲ್ಮಾನ್ 10 ಲಕ್ಷ ರೂಪಾಯಿ ನೀಡಿದ್ದಾರೆ.

ನೊಂದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಚಿತ್ರ ನಟರ ಸಾಲಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ ಸೇರಿದ್ದು, ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅವರೂ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. 

ಆದರೆ, ತಮ್ಮ ಸುತ್ತಲಿನ ಜಗತ್ತಿನ ಆಗುಹೋಗುಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ದಂತಗೋಪುರದಲ್ಲೇ ಇರುವ ಬಹುತೇಕ ಸೆಲೆಬ್ರಿಟಿಗಳ ನಡುವೆ ಹೀಗೆ ಮಾನವೀಯತೆ ಮೆರೆದ ರಶ್ಮಿಕಾ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗುವ ಬದಲು ಕೆಲವು ಪಡ್ಡೆಗಳ ಟ್ರೋಲ್‌ಗೆ ಒಳಗಾಗಿದ್ದಾರೆ. ಅದರಲ್ಲೂ ಕರ್ನಾಟಕದ ಕೆಲವು ಭೂ ಕುಸಿತ ಘಟನೆಗಳನ್ನೇ ನೆಪವಾಗಿಟ್ಟುಕೊಂಡು ದುರುದ್ದೇಶದಿಂದ ನಟಿಯ ವಿರುದ್ಧ ಟ್ರೋಲ್‌ ಮಾಡಲಾಗಿದೆ.

"ನಮ್ಮ ಕೊಡಗು, ಘಾಟಿ ಪ್ರದೇಶಗಳಲ್ಲಿ ಭೂಮಿ ಕುಸಿತ ಆಗುತ್ತಿದೆ. ಅವರಿಗೆ ಸಹಾಯ ಮಾಡುವ ಮನಸ್ಸು ನಿಮಗೆ ಬಂದಿಲ್ಲ. ಆದರೆ ವಯನಾಡಿಗೆ ಮನಸ್ಸು ಕರಗಿದೆ. ತಾಯ್ನಾಡಿನಲ್ಲಿ ಭೂಕುಸಿತಕ್ಕೂ ಜನರು ಸತ್ತಿದ್ದಾರೆ, ಮನೆ ಕಳೆದುಕೊಂಡಿದ್ದಾರೆ. ಅದರ ಕಡೆಗೂ ಗಮನ ಇರಲಿ. ನಿಮ್ಮ ಊರಿನ ಬಗ್ಗೆ ನಿಮಗೆ ಗೌರವ ಇಲ್ಲವಾದರೆ ಜಾಗ ಕಾಲಿ ಮಾಡಿ" ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.

Tags:    

Similar News