ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದುಹಾಕಿದ ಮಾಯಾವತಿ

Update: 2024-05-08 07:01 GMT

ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಮತ್ತು ʻಉತ್ತರಾಧಿಕಾರಿʼ ಹುದ್ದೆಯಿಂದ ಕೈಬಿಟ್ಟಿದ್ದಾರೆ. 

ʻ ಪಕ್ಷ ಮತ್ತು ಚಳವಳಿಯ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಆನಂದ್ ʻಸಂಪೂರ್ಣ ಪ್ರಬುದ್ಧತೆʼ ಪಡೆಯುವವರೆಗೂ ಅವರನ್ನು ಕೈಬಿಡಲಾಗಿದೆ. ಆಕಾಶ್ ತಂದೆ, ತಮ್ಮ ಸಹೋದರ ಆನಂದ್ ಕುಮಾರ್ ಅವರು ಮೊದಲಿನಂತೆಯೇ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಮಾಯಾವತಿ ಅವರು ಮಂಗಳವಾರ ರಾತ್ರಿ ಎಕ್ಸ್‌ ನಲ್ಲಿ ಪ್ರಕಟಿಸಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ ಮೂರನೇ ಹಂತದ ಮತದಾನ ನಡೆದ ದಿನವೇ ಈ ಅಚ್ಚರಿಯ ನಿರ್ಧಾರ ಹೊರಬಿದ್ದಿದೆ. 

ʻಬಿಎಸ್‌ಪಿ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಸಾಮಾಜಿಕ ಬದಲಾವಣೆಯ ಚಳವಳಿ. ಇದ ಕ್ಕಾಗಿ ಕಾನ್ಶಿರಾಮ್ ಜಿ ಮತ್ತು ತಾವು ನಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೇವೆ ಮತ್ತು ಹೊಸ ಪೀಳಿಗೆಯೊಂದು ಚಳವಳಿಗೆ ವೇಗ ನೀಡಲು ಸಿದ್ಧವಾಗಿದೆ. ಪಕ್ಷದಲ್ಲಿ ಇತರರನ್ನು ಉತ್ತೇಜಿಸಲು ಮತ್ತು ಚಳವಳಿಯ ಹಿತಾಸಕ್ತಿ ಕಾಪಾಡಲು, ಅವರನ್ನು ಎರಡೂ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗುತ್ತಿದೆʼ ಎಂದು ಬರೆದಿದ್ದಾರೆ. 

Tags:    

Similar News