ಪತಂಜಲಿ: ದಿವ್ಯ ಫಾರ್ಮಸಿಯ 10 ಉತ್ಪನ್ನಗಳ ಪರವಾನಗಿ ಅಮಾನತು

Update: 2024-04-30 07:45 GMT

ಡೆಹ್ರಾಡೂನ್,ಏ.29- ಪತಂಜಲಿ ಆಯುರ್ವೇದದ ಭಾಗವಾದ ದಿವ್ಯ ಫಾರ್ಮಸಿಯ 10 ಉತ್ಪನ್ನಗಳ ಉತ್ಪಾದನೆ ಪರವಾನಗಿಯನ್ನು ಅಮಾನತುಗೊಳಿಸಿ, ಉತ್ತರಾಖಂಡ್ ಔಷಧ ಪರವಾನಗಿ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ ಹಾಗೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ ಕಾಯಿದೆಯನ್ನು ಉಲ್ಲಂ ಘಿಸಿ, ಈ ಉತ್ಪನ್ನಗಳ ಕುರಿತ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ಪ್ರಾಧಿಕಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೇಳಿದ ಮಾಹಿತಿ ಒದಗಿಸಿಲ್ಲ ಮತ್ತು ನೀಡಿದ ವಿವರಣೆ ತೃಪ್ತಿಕರವಾಗಿಲ್ಲ ಎಂದು ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.

ದಿವ್ಯ ಫಾರ್ಮಸಿ ಉತ್ಪನ್ನಗಳಾದ ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ, ಮುಕ್ತ ವಟಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್ ಮತ್ತು ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಆದೇಶ ಹೇಳಿದೆ.

Tags:    

Similar News