ಮೆಸ್ಸಿ ಜೊತೆ ಹ್ಯಾಂಡ್‌ಶೇಕ್ ಮಾಡೋಕೆ ಬರೋಬ್ಬರಿ 1 ಕೋಟಿ ರೂ.!
ಲಿಯೋನೆಲ್ ಮೆಸ್ಸಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಲು ಅವಕಾಶ ಕಲ್ಪಸಲಾಗಿದೆ. ಇನ್ನು ಈ ವಿಶೇಷ ಭೇಟಿಯ ಬೆಲೆ 1 ಕೋಟಿ ರೂಪಾಯಿಗಳು ಎಂದು ವರದಿಯಾಗಿದೆ.
ಭಾರತ ಪ್ರವಾಸದಲ್ಲಿರುವ ಫುಟ್‌ಬಾಲ್ ದಂತಕತೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇಂದು ಬೆಳಿಗ್ಗೆ 10:45 ಕ್ಕೆ ದೆಹಲಿಗೆ ಬಂದಿದ್ದಾರೆ. ಚಾಣಕ್ಯಪುರಿಯಲ್ಲಿರುವ ದಿ ಲೀಲಾ ಪ್ಯಾಲೇಸ್‌ಗೆ ಭೇಟಿ ನೀಡಿರುವ ಮೆಸ್ಸಿ ಮತ್ತು ಅವರ ಪರಿವಾರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೂಲಗಳ ಪ್ರಕಾರ, ಮೆಸ್ಸಿಯ ವಾಸ್ತವ್ಯದ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳದಂತೆ ಹೋಟೆಲ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಮೆಸ್ಸಿ ಜೊತೆ ವಿಶೇಷ ಸಂವಾದಕ್ಕೆ 1 ಕೋಟಿ ರೂ.
ಆಯ್ದ ವಿಐಪಿ ಅತಿಥಿಗಳು ಮತ್ತು ಉದ್ಯಮಿಗಳಿಗಾಗಿಯೇ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಮೆಸ್ಸಿಯನ್ನು ಪ್ರತ್ಯೇಕವಾಗಿ ಭೇಟಿಯಾಗಿ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಲು ಅವಕಾಶ ಕಲ್ಪಸಲಾಗಿದೆ. ಇನ್ನು ಈ ವಿಶೇಷ ಭೇಟಿಯ ಬೆಲೆ 1 ಕೋಟಿ ರೂಪಾಯಿಗಳು ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಭೇಟಿ ಇಲ್ಲ
ದೆಹಲಿಯಲ್ಲಿ ಮೆಸ್ಸಿ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಹಲವಾರು ಸಂಸದರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಅವರು ಮೂಲತಃ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆಯಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯಾ ಮತ್ತು ಓಮನ್ ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಸೋಮವಾರ ಬೆಳಿಗ್ಗೆ ಜೋರ್ಡಾನ್‌ಗೆ ತೆರಳಿದರು. ಹೀಗಾಗಿ ಈ ಭೇಟಿ ರದ್ದಾಗಿದೆ.
ನಂತರ ಅವರು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ, ಅಲ್ಲಿ ಫುಟ್ಬಾಲ್ ಕ್ಲಿನಿಕ್ ಆಯೋಜಿಸಲಾಗಿದೆ. ಮೂರು ಯುವ ಟ್ರೋಫಿಗಳನ್ನು ಗೆದ್ದ ಮಿನರ್ವಾ ಅಕಾಡೆಮಿಯ ತಂಡಗಳನ್ನು ಮೆಸ್ಸಿ ಸನ್ಮಾನಿಸಲಿದ್ದಾರೆ. ಕಾರ್ಯಕ್ರಮದ ಫುಟ್ಬಾಲ್ ಆಟವನ್ನು ಸಹ ಆಯೋಜಿಸಲಾಗಿದೆ. ಇದರ ನಂತರ ಪುರಾನ ಕಿಲಾಗೆ ಭೇಟಿ ನೀಡಲಾಗುವುದು. ಅಲ್ಲಿ, ಅವರು ರೋಹಿತ್ ಶರ್ಮಾ, ಪ್ಯಾರಾಲಿಂಪಿಕ್ ಜಾವೆಲಿನ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್, ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಒಲಿಂಪಿಕ್ ಹೈಜಂಪ್ ಪದಕ ವಿಜೇತ ನಿಶಾದ್ ಕುಮಾರ್ ಸೇರಿದಂತೆ ಕ್ರೀಡಾ ವ್ಯಕ್ತಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಮೆಸ್ಸಿ ಸಂಜೆ 6:15 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ರಾತ್ರಿ 8:00 ಗಂಟೆಗೆ ಭಾರತದಿಂದ ನಿರ್ಗಮಿಸಲಿದ್ದಾರೆ.