ಮತದಾರರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ: ಮಮತಾ ಕಳವಳ

Update: 2024-05-02 07:02 GMT

ಫರಕ್ಕಾ/ ಬೆಹ್ರಾಂಪೋ‌‌ರ್‌- ಲೋಕಸಭೆ ಚುನಾವಣೆಯ ಆರಂಭಿಕ ಎರಡು ಹಂತಗಳ ಅಂತಿಮ ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬಕ್ಕೆ ಚುನಾವಣಾ ಆಯೋಗವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. 

ಅಲ್ಪಸಂಖ್ಯಾತರ ಪ್ರಾಬಲ್ಯದ ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಎರಡು ಸಭೆಗಳಲ್ಲಿ ಮಾತನಾಡಿ, ಕೇಂದ್ರ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ಹೆಚ್ಚು ಸಂಖ್ಯೆಯಲ್ಲಿರುವ ರಾಜ್ಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. 

ಏಪ್ರಿಲ್ 19ರ ಮೊದಲ ಹಂತದಲ್ಲಿ ಶೇ.66.14 ಮತ್ತು ಏಪ್ರಿಲ್ 26 ರ ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ ಎಂದು ಆಯೋಗ ಪ್ರಕಟಿಸಿದೆ. ʻಅಂತಿಮ ಮತದಾನದಲ್ಲಿ ಶೇ.5.75 ರಷ್ಟು ಹಠಾತ್ ಜಿಗಿತ ಆತಂಕಕಾರಿ. ಮತದಾನ ನಡೆಯದ ಸ್ಥಳಗಳಲ್ಲಿ ಶೇಕಡಾವಾರು ಹೆಚ್ಚಾಗಿದೆ. ಬಿಜೆಪಿ ಬಗ್ಗೆ ಸಾಕಷ್ಟು ಅನುಮಾನಗಳಿವೆ ಮತ್ತು ಆಯೋಗವು ಅದನ್ನು ಪರಿಹರಿಸಬೇಕು,ʼ ಎಂದು ಹೇಳಿದರು. 

ಫರಕ್ಕಾದಲ್ಲಿ ಮಾತನಾಡಿ, ʻಹಲವು ಇವಿಎಂಗಳು ದೀರ್ಘಕಾಲ ಕಣ್ಮರೆಯಾಗಿರುವುದರಿಂದ ಬಿಜೆಪಿ ಫಲಿತಾಂಶಗಳನ್ನು ತಿದ್ದುವ ಸಾಧ್ಯತೆಯಿದೆ. ಮತಗಳ ಶೇಕಡಾವಾರು ಹಠಾತ್ ಹೆಚ್ಚಳ ಆತಂಕಕಾರಿ ಮಾತ್ರವಲ್ಲದೆ, ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಯಾವುದೇ ಹಂತಕ್ಕೆ ಇಳಿಯಬಹುದಾದ್ದರಿಂದ ಇವಿಎಂ ತಯಾರಕರ ವಿವರಗಳನ್ನು ಚುನಾವಣಾ ಆಯೋಗ ಸಾರ್ವಜನಿಕಗೊಳಿಸಬೇಕುʼ ಎಂದು ಹೇಳಿದರು. 

ಮೊದಲ ಎರಡು ಹಂತಗಳಲ್ಲಿ ಹಿನ್ನಡೆಯಿಂದ ವಿರುದ್ಧ ಪಾಳಯಗಳಲ್ಲಿ ಭೀತಿ ಹುಟ್ಟಿದೆ ಎಂದು ಟಿಎಂಸಿ ಮತ್ತು ಬಿಜೆಪಿ ಹೇಳಿಕೊಂಡಿವೆ. ʻಬಿಜೆಪಿ ಜುಮ್ಲಾ ಪಕ್ಷ. 2014 ರಲ್ಲಿ ನೀಡಿದ ಭರವಸೆಯಂತೆ ದೇಶದ ಯಾವುದೇ ನಾಗರಿಕರು 15 ಲಕ್ಷ ರೂ. ಪಡೆದಿದ್ದಾರೆಯೇ? ರಾಜ್ಯದಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರವು ರಾಜ್ಯವನ್ನು ನಿರ್ಲಕ್ಷಿಸುತ್ತದೆ. ಕಳೆದ 13 ವರ್ಷದಲ್ಲಿ ಕೇಂದ್ರದ ನೀಡಿರುವ ಎಲ್ಲ ಹಣಕ್ಕೂ ಬಳಕೆ ಪ್ರಮಾಣಪತ್ರ(ಯುಟಿಲೈಸೇಷನ್‌ ಸರ್ಟಿಫಿಕೇಟ್) ನೀಡಿದ್ದೇವೆ. ರಾಜಕೀಯ ಕಾರಣಕ್ಕೆ ಬಿಜೆಪಿ ಹಣ ತಡೆ ಹಿಡಿದಿದೆ. ಬಡವರನ್ನು ವಂಚಿಸುವ ಬಿಜೆಪಿ ನೀತಿಯನ್ನು ಖಂಡಿಸುತ್ತೇನೆ’ ಎಂದರು.

ʻಪಶ್ಚಿಮ ಬಂಗಾಳದಲ್ಲಿ ಸಿಪಿಐ (ಎಂ) ಮತ್ತು ಕಾಂಗ್ರೆಸ್‌ಗೆ ಮತ ಹಾಕಬೇಡಿ. ಅವರು ಬಿಜೆಪಿಯ ಏಜೆಂಟ್‌ಗಳು. ಪಶ್ಚಿಮ ಬಂಗಾಳದಲ್ಲಿ ಇಂಡಿಯ ಒಕ್ಕೂಟ ಇಲ್ಲ. ಸಿಪಿಐ (ಎಂ) ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಟಿಎಂಸಿಯ ಮತಗಳನ್ನು ಕಡಿತಗೊಳಿಸುವ ಮೂಲಕ ಬಿಜೆಪಿಗೆ ಸಹಾಯ ಮಾಡಬಹುದುʼ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು ಶೇ.30ರಷ್ಟು ಅಲ್ಪಸಂಖ್ಯಾತ ಮತದಾರರಿರುವ 12-15 ಲೋಕಸಭೆ ಕ್ಷೇತ್ರಗಳಿವೆ. 

ಏಳು ಹಂತಗಳಲ್ಲಿ ಮತ ಚಲಾವಣೆ ನಡೆಯಲಿದ್ದು, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಿಗದಿಯಾಗಿದ

Tags:    

Similar News