ಕಾಶ್ಮೀರ | ಅನಂತನಾಗ್‌ನಲ್ಲಿ 30 ವರ್ಷಗಳ ನಂತರ ಉಮಾ ಭಗವತಿ ದೇವಸ್ಥಾನ ಪುನರಾರಂಭ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಉಮಾ ಭಗವತಿ ದೇವಿಯ ದೇವಸ್ಥಾನವನ್ನು 30 ವರ್ಷಗಳ ಬಳಿಕ ತೆರೆಯಲಾಗಿದೆ.;

Update: 2024-07-14 12:36 GMT
ಉಮಾ ಭಗವತಿ ದೇವಸ್ಥಾನ
Click the Play button to listen to article

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಉಮಾ ಭಗವತಿ ದೇವಿಯ ದೇವಸ್ಥಾನವನ್ನು 30 ವರ್ಷಗಳ ಬಳಿಕ ತೆರೆಯಲಾಗಿದೆ.ಭಾನುವಾರ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಸಮ್ಮುಖದಲ್ಲಿ ಈ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜೀರ್ಣೋದ್ಧಾರದ ಬಳಿಕ ದೇವಾಲಯವನ್ನು ಉದ್ಘಾಟನೆ ಮಾಡುವ ಮೂಲಕ ಭಕ್ತರಿಗೆ ತೆರೆಯಲಾಗಿದೆ. ರಾಜಸ್ಥಾನದಿಂದ ತರಲಾದ ಉಮಾ ದೇವಿಯ ವಿಗ್ರಹವನ್ನು ಧಾರ್ಮಿಕ ಸ್ತೋತ್ರ ಪಠಣಗಳ ನಡುವೆ ಗರ್ಭಗುಡಿಯಲ್ಲಿ ಇರಿಸಲಾಯಿತು. ಸ್ಥಳೀಯರು, ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

34 ವರ್ಷಗಳ ನಂತರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ ಎಂದು ಹೇಳಿರುವ ಸ್ಥಳೀಯ ನಿವಾಸಿ ಗುಲ್ಜಾರ್ ಅಹ್ಮದ್ ನಮ್ಮ ಪಂಡಿತ್ ಸಹೋದರರಿಗೆ ಸಾಧ್ಯವಿರುವ ರೀತಿಯಲ್ಲಿ ಸಹಾಯ ಮಾಡಲು ನಾವು ಇಲ್ಲಿದ್ದೇವೆ" ಎಂದು ತಿಳಿಸಿದ್ದಾರೆ. 

Tags:    

Similar News