ರಾಜ್ಯಪಾಲರ ವಿರುದ್ಧ ಅತ್ಯಾಚಾರ ಆರೋಪ: ತನಿಖೆಗೆ ಪೊಲೀಸ್‌ ತಂಡ ರಚನೆ

Update: 2024-05-04 12:38 GMT

ಮೇ 4: ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಹಂಗಾಮಿ ಮಹಿಳಾ ಉದ್ಯೋಗಿಯೊಬ್ಬರು ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಒಂದು ದಿನದ ನಂತರ ಕೋಲ್ಕತ್ತಾ ಪೊಲೀಸರು ತನಿಖಾ ತಂಡವನ್ನು ರಚಿಸಿದ್ದಾರೆ. 

ತಂಡ ಮುಂದಿನ ಕೆಲವು ದಿನಗಳಲ್ಲಿ ಸಾಕ್ಷಿಗಳೊಂದಿಗೆ ಮಾತನಾಡಲಿದೆ ಮತ್ತು ಸಿಸಿ ಟಿವಿ ದೃಶ್ಯಗಳನ್ನು ಹಂಚಿಕೊಳ್ಳಲು ರಾಜಭವನಕ್ಕೆ ಮನವಿ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ (ಮೇ 4) ತಿಳಿಸಿದ್ದಾರೆ. 

ಸಂವಿಧಾನದ 361ನೇ ವಿಧಿಯಡಿ ರಾಜ್ಯಪಾಲರ ಅಧಿಕಾರಾವಧಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಿಲ್ಲ. ರಾಜ್ಯಪಾಲರಿಗೆ ಸಾಂವಿಧಾನಿಕ ವಿನಾಯಿತಿಯ ಹೊರತಾಗಿಯೂ ಪೊಲೀಸರು ತನಿಖೆಯನ್ನು ಹೇಗೆ ಪ್ರಾರಂಭಿಸುತ್ತಾರೆ ಎಂದು ಕೇಳಿದಾಗ, ʻಯಾರಾದರೂ ದೂರು ನೀಡಿದಾಗ, ವಿಶೇಷವಾಗಿ, ಮಹಿಳೆಯರು ದೂರಿದಾಗ, ತನಿಖೆ ಪ್ರಾರಂಭಿಸಬೇಕಾಗುತ್ತದೆ. ಅಗತ್ಯವಿದ್ದರೆ, ಸ್ಥಳಕ್ಕೆ (ರಾಜಭವನ) ಭೇಟಿ ನೀಡಬಹುದುʼ ಎಂದು ಹೇಳಿದರು. 

ಶುಕ್ರವಾರ (ಮೇ 3)ರಂದು ರಾಜ್ಯಪಾಲರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಕೋಲ್ಕತ್ತಾ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದರು. ʻಚುನಾವಣೆ ಸಮಯದಲ್ಲಿ ರಾಜಕೀಯ ಮೇಲಧಿಕಾರಿಗಳನ್ನು ಸಮಾಧಾನಪಡಿಸಲು ಅನಧಿಕೃತ, ಕಾನೂನುಬಾಹಿರ, ತನಿಖೆಯ ನೆಪದಲ್ಲಿ ರಾಜಭವನಕ್ಕೆ ಪೊಲೀಸರ ಪ್ರವೇಶವನ್ನು ರಾಜ್ಯಪಾಲರು ನಿಷೇಧಿಸಿ, ಆದೇಶಿಸಿದ್ದಾರೆ ಎಂದು ರಾಜಭವನ ಈಗಾಗಲೇ ಹೇಳಿದೆ.

Tags:    

Similar News