ಚುನಾವಣೆ-2024: ನಾರಾ ಲೋಕೇಶ್ 543 ಕೋಟಿ ರೂ. ಆಸ್ತಿ ಘೋಷಣೆ

Update: 2024-04-23 05:49 GMT

ಅಮರಾವತಿ, ಏ. 23- ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಸುಮಾರು 542.7 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಲೋಕೇಶ್ ತಮ್ಮ ಕುಟುಂಬದ ಆಸ್ತಿ 373.63 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು.

ಲೋಕೇಶ್‌ ಅವರು ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ಒಂದು ಕೋಟಿಗೂ ಹೆಚ್ಚು ಷೇರು ಹೊಂದಿದ್ದಾರೆ. ಪ್ರತಿ ಶೇರಿನ ಬೆಲೆ 337.85 ರೂ. ಅವರ ಪತ್ನಿ ಬ್ರಹ್ಮಣಿ ಪ್ರಸ್ತುತ ಹೆರಿಟೇಜ್ ಫುಡ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಪ್ರಮಾಣಪತ್ರದ ಪ್ರಕಾರ, ಲೋಕೇಶ್ 314.68 ಕೋಟಿ ರೂ. ಮೌಲ್ಯದ ಚರ ಮತ್ತು 92.31 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಬ್ರಹ್ಮಣಿ ಕ್ರಮವಾಗಿ 45.06 ಕೋಟಿ ಚರಾಸ್ತಿ ಮತ್ತು 35.59 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 

ಲೋಕೇಶ್ ಅವರು ಆಂಧ್ರಪ್ರದೇಶದ ಮಂಗಳಗಿರಿ ಕ್ಷೇತ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಲಾವಣ್ಯ ಅವರನ್ನು ಎದುರಿಸಲಿದ್ದಾರೆ.ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ.

Tags:    

Similar News