ಅಮಿತ್ ಶಾ ಅವರ ತಿದ್ದಿದ ವಿಡಿಯೋ ಪ್ರಕರಣ

ದಿಲ್ಲಿ ಪೊಲೀಸ್‌ ಭೇಟಿಯಾದ ತೆಲಂಗಾಣ ಸಿಎಂ ಪರ ವಕೀಲರು

Update: 2024-05-01 09:39 GMT

ನವದೆಹಲಿ, ಮೇ 1- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣದ ತಿದ್ದಿದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ವಕೀಲರು ಬುಧವಾರ ದೆಹಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. 

ರೆಡ್ಡಿ ಅವರ ಎಕ್ಸ್ ಖಾತೆ ಮೂಲಕ ವಿಡಿಯೋ ಹಂಚಿಕೊಂಡಿದ್ದರಿಂದ ದೆಹಲಿ ಪೊಲೀಸರು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 160/91 ರ ಅಡಿಯಲ್ಲಿ ನೋಟಿಸ್ ನೀಡಿದ್ದರು. 

ದ್ವಾರಕಾದಲ್ಲಿರುವ ಐಎಫ್‌ಎಸ್‌ಒ ಕಚೇರಿಯಲ್ಲಿ ತನಿಖಾಧಿಕಾರಿಯನ್ನು ಭೇಟಿಯಾದ ನಂತರ ರೆಡ್ಡಿ ಅವರ ಪರ ವಕೀಲರಾದ ಸೌಮ್ಯ ಗುಪ್ತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ʻವಿಡಿಯೋ ಶೇರ್ ಮಾಡಿರುವ ಖಾತೆ ರೆಡ್ಡಿ ಅವರದ್ದಲ್ಲʼ ಎಂದಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸಿಆರ್‌ಪಿಸಿ ಸೆಕ್ಷನ್ 160/91 ಅಡಿಯಲ್ಲಿ ನೋಟಿಸ್ ಪಡೆದ ವ್ಯಕ್ತಿಯು ತನಿಖಾಧಿಕಾರಿ ಮುಂದೆ ಭೌತಿಕವಾಗಿ ಹಾಜರಾಗಬಹುದು ಅಥವಾ ಕಾನೂನು ಪ್ರತಿನಿಧಿಯನ್ನು ಕಳುಹಿಸಬಹುದು. 

Tags:    

Similar News