ಮೋದಿ ಗ್ಯಾರಂಟಿಗಳಿಗೆ ರಾಜ್ಯದಿಂದ ಅಪಾರ ಹಣ ಹರಿವು: ಕೃಷ್ಣ ಬೈರೇಗೌಡ

ಪ್ರಧಾನ ಮಂತ್ರಿ ಹೆಸರಿನ ಮೋದಿ ಗ್ಯಾರಂಟಿಗಳಿಗೆ ರಾಜ್ಯದ ಅಪಾರ ಹಣ ಹರಿದು ಹೋಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ .

Update: 2024-04-14 06:30 GMT
ಕಂದಾಯ ಸಚಿವ ಕೃಷ್ಣ ಭೈರೇಗೌಡ
Click the Play button to listen to article

ಮಂಡ್ಯ :ʼʼಪ್ರಧಾನ ಮಂತ್ರಿ ಹೆಸರಿನ ಮೋದಿ ಗ್ಯಾರಂಟಿಗಳಿಗೆ ರಾಜ್ಯದ ಅಪಾರ ಹಣ ಹರಿದು ಹೋಗುತ್ತಿದೆʼʼ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ಹೇಳಿದರು.

ರೈತಸಂಘ, ದಸಂಸ, ಜನಶಕ್ತಿ ಸಂಘಟನೆಗಳ ವತಿಯಿಂದ ನಗರದಲ್ಲಿ ನಡೆದ 'ಕರ್ನಾಟಕಕ್ಕೆ ತೆರಿಗೆ ವಂಚನೆ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಒಂದು ರೂಪಾಯಿ ಹಣ ಪಡೆದಿಲ್ಲ, ಸ್ವಂತ ಶಕ್ತಿಯ ಮೇಲೆ ನಮ್ಮ ಸರ್ಕಾರ ನಡೆಯುತ್ತಿದೆ. ಆದರೆ ಪ್ರಧಾನ ಮಂತ್ರಿ ಹೆಸರಿನ ಮೋದಿ ಗ್ಯಾರಂಟಿಗಳಿಗೆ ರಾಜ್ಯದ ಅಪಾರ ಹಣ ಹರಿದು ಹೋಗುತ್ತಿದೆ' ಎಂದು ಹೇಳಿದ್ದಾರೆ.

ಪಿಎಂ ಆವಾಸ್ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಜಲಜೀವನ ಷನ್‌ ಸೇರಿದಂತೆ ಕೇಂದ್ರದ ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರ ಶೇ 60 ರಷ್ಟು ಅನುದಾನ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ತಮ್ಮ ಯೋಜನೆ ಹೆಸರು ಪಡೆಯುತ್ತಿದೆ. ರಾಜ್ಯದಲ್ಲಿ ಶೇ 77ರಷ್ಟು ಸಂಪನ್ಮೂಲ ಕ್ರೋಡೀಕರಣವಾಗುತ್ತಿದ್ದು, ಇಡೀ ದೇಶದಲ್ಲಿ ಸ್ವಂತ ಶಕ್ತಿಯಿಂದ ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ' ಎಂದರು.

'ಜಲಜೀವನ ಮಿಷನ್ ಯೋಜನೆಯಡಿ ನೀರು ಪೂರೈಸುವವರು ಯಾರೆಂದರೆ ರಾಜ್ಯದ ಕಡೆ ಕೈತೋರಿಸುತ್ತಾರೆ. ತೆರಿಗೆಯ ಪಾಲು ಕೇಳಿದರೆ ಅವಮಾನ ಮಾಡುತ್ತಾರೆ. ದೇಶ ಒಡೆಯುವ ಪ್ರಯತ್ನ ಎಂದು ಆರೋಪಿಸುತ್ತಾರೆ. ಅತೀ ಹೆಚ್ಚು ತೆರಿಗೆ ನೀಡುತ್ತಿರುವ ನಾವು ದೇಶ ಕಟ್ಟುತ್ತಿದ್ದೇವೆ' ಎಂದರು.

'ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಂ ₹ 1,300 ಕೋಟಿ ಹಣ ಘೋಷಿಸಿದ್ದರು. ಇಲ್ಲಿಯವರೆಗೂ ಒಂದು ರೂಪಾಯಿ ಬಂದಿಲ್ಲ. ಬಿಜೆಪಿ ಜೊತೆ ಸೇರಿರುವ ಎಚ್.ಡಿ.ಕುಮಾರಸ್ವಾಮಿ ಅವರೂ ತಪ್ಪು ಲೆಕ್ಕ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಈಗಲಾದರೂ ನಮ್ಮ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಲಿ' ಎಂದರು.

Tags:    

Similar News