ಶೇ.10 ಮರಾಠ ಕೋಟಾ ಮಸೂದೆ ಅಂಗೀಕೃತ

Update: 2024-02-20 10:08 GMT
ಮುಖ್ಯಮಂತ್ರಿ ಏಕನಾಥ್ ಶಿಂಧೆ

ಮಂಗಳವಾರ, ಫೆ.20- ಮಹಾರಾಷ್ಟ್ರ ವಿಧಾನಸಭೆಯು ಮರಾಠಾ ಮೀಸಲು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಮಸೂದೆ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.10 ಮೀಸಲು ನೀಡುತ್ತದೆ.

ಮರಾಠ ಕೋಟಾ ಕುರಿತ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ನಡೆಯುತ್ತಿದೆ. ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗವುಮರಾಠಾ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿ ಕೆ ಕುರಿತ ಸಮೀಕ್ಷಾ ವರದಿಯನ್ನು ಕಳೆದ ಶುಕ್ರವಾರ ಸಲ್ಲಿಸಿದೆ. ಈ ಸಮೀಕ್ಷೆಯು 2.5 ಕೋಟಿ ಕುಟುಂಬಗಳನ್ನು ಒಳಗೊಂಡಿದೆ.

ಮಸೂದೆ ಪ್ರಕಾರ, ರಾಜ್ಯದಲ್ಲಿ ಮರಾಠ ಸಮುದಾಯದ ಜನಸಂಖ್ಯೆ ಶೇ.28. ಬಡತನ ರೇಖೆ ಕೆಳಗಿರುವ ಮರಾಠಾ ಕುಟುಂಬಗಳ ಪೈಕಿ ಶೇ. 21.22ರಷ್ಟು ಮಂದಿ ಹಳದಿ ಪಡಿತರ ಚೀಟಿ ಹೊಂದಿದ್ದಾರೆ. 2024 ಜನವರಿ ಮತ್ತು ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ, ಶೇ.84 ರಷ್ಟು ಮರಾಠ ಸಮುದಾಯದ ಕುಟುಂಬಗಳು ಅಭಿವೃದ್ಧಿ ಹೊಂದಿದ ವರ್ಗಕ್ಕೆ ಬರುವುದಿಲ್ಲ. ಆದ್ದರಿಂದ ಅವರು ಇಂದಿರಾ ಸಾಹ್ನಿ ಪ್ರಕರಣದ ಪ್ರಕಾರ ಮೀಸಲಿಗೆ ಅರ್ಹರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 94ರಷ್ಟು ಮಂದಿ ಮರಾಠಾ ಕುಟುಂಬಗಳಿಂದ ಬಂದವರು ಎಂದು ಮಸೂದೆ ಉಲ್ಲೇಖಿಸಿದೆ. 

Tags:    

Similar News