ಕೋಲ್ಕತ್ತಾ: ಅಮಾನತುಗೊಂಡಿರುವ ಟಿಎಂಸಿ ನಾಯಕ ಶೇಖ್ ಶಾಜಹಾನ್ ಅವರ ಕಸ್ಟಡಿಯನ್ನು ಸಿಬಿಐಗೆ ಹಸ್ತಾಂತರಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.
ಸಂದೇಶ್‌ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮತ್ತು ಶಾಜಹಾನ್‌ನ ಕಸ್ಟಡಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಪಶ್ಚಿಮ ಬಂಗಾಳ ಪೊಲೀಸರು ʻ ಪಕ್ಷಪಾತ ́ ನಡೆಸಿದ್ದಾರೆ . ತನಿಖೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಇಡಿ ಮನವಿಗೆ ಹೈ ಕೋರ್ಟ್ ಸಮ್ಮತಿಸಿದ ಕೆಲವೇ ಗಂಟೆಗಳಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಆದೇಶವನ್ನು ಪ್ರಶ್ನಿ̧̧ಸಿ̧ ಸುಪ್ರೀಂ ಕೋರ್ಟ್‌ಗೆ ತೆರಳಿತು. ಆದರೆ, ಸುಪ್ರೀಂ ಕೋರ್ಟ್ ಪೀಠವು ಅರ್ಜಿಯ ತುರ್ತು ಪಟ್ಟಿಯನ್ನು ನಿರಾಕರಿಸಿತು ಮತ್ತು ರಿಜಿಸ್ಟ್ರಾರ್ ಜನರಲ್ ಮುಂದೆ ವಿಷಯವನ್ನು ನಮೂದಿಸುವಂತೆ ರಾಜ್ಯದ ವಕೀಲರನ್ನು ಕೇಳಿತು.
ಹೈಕೋರ್ಟ್ ಆದೇಶ: ಹೈಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿಕೊಂಡು ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಆದರೆ, ಪಶ್ಚಿಮ ಬಂಗಾಳ ಪೊಲೀಸರು ಶಾಜಹಾನ್ ಅವರನ್ನು ಏಜೆನ್ಸಿ ತಂಡಕ್ಕೆ ಹಸ್ತಾಂತರಿಸಲು ನಿರಾಕರಿಸಿದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವುದರಿಂದ ನಾವು ಅವರನ್ನು ಸಿಬಿಐಗೆ ಹಸ್ತಾಂತರಿಸಿಲ್ಲ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಐಡಿ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂದು ಇಡಿ, ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರ ಮುಂದೆ ಪ್ರಸ್ತಾಪಿಸಿದಾಗ, ಬುಧವಾರ ನ್ಯಾಯಾಲಯದ ಮುಂದೆ ಅರ್ಜಿಯನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಾಧೀಶರು ಸಂಸ್ಥೆಯ ವಕೀಲರನ್ನು ಕೇಳಿದರು ಎಂದು ತಿಳಿದುಬಂದಿದೆ.
ನ್ಯಾಯಾಲಯ ಏನು ಹೇಳಿದೆ?:ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ರಾಗಿರುವ ರಾಜ್ಯದ ಮಾಜಿ ಆಹಾರ ಸಚಿವೆ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಶಾಜಹಾನ್ ಅವರ ಮನೆ ಮೇಲೆ ಜನವರಿ 5 ರಂದು ದಾಳಿ ಹಗರಣಮಾಡಲು ಹೋದಾಗ ಇಡಿ ಅಧಿಕಾರಿಗಳ ತಂಡದ ಮೇಲೆ ಸುಮಾರು 1,000 ಜನರ ಗುಂಪು ದಾಳಿ ನಡೆಸಿತು.
ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ʻಸಿಬಿಐ ತನಿಖೆಗೆ ವರ್ಗಾಯಿಸಲು ಇದಕ್ಕಿಂತ ಉತ್ತಮವಾದ ಪ್ರಕರಣ ಇನ್ನೊಂದಿಲ್ಲʼ ಎಂದು ತೀರ್ಪು ನೀಡಿದೆ.
ಇಡಿ ಅಧಿಕಾರಿಗಳ ಮೇಲಿನ ಗುಂಪು ದಾಳಿಯ ತನಿಖೆಗೆ ಸಿಬಿಐ ಮತ್ತು ರಾಜ್ಯ ಪೊಲೀಸರ ಜಂಟಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಜನವರಿ 17 ರಂದು ಏಕ ಪೀಠದ ಆದೇಶವನ್ನು ಪ್ರಶ್ನಿಸಿ, ಇಡಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಎರಡೂ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದವು.
ಇಡಿ ತನಿಖೆಯನ್ನು ಸಿಬಿಐಗೆ ಮಾತ್ರ ವರ್ಗಾಯಿಸಬೇಕೆಂದು ಬಯಸಿದ್ದರೂ, ರಾಜ್ಯ ಪೊಲೀಸರಿಂದ ತನಿಖೆಗೆ ಅವಕಾಶ ನೀಡಬೇಕೆಂದು ರಾಜ್ಯವು ಪ್ರಾರ್ಥಿಸಿತು.
ತುರ್ತು ವಿಚಾರಣೆಗೆ ಎಸ್‌ಸಿ ನಿರಾಕರಣೆ: ಸುಪ್ರೀಂ ಕೋರ್ಟ್‌ನಲ್ಲಿ, ತುರ್ತು ವಿಚಾರಣೆಯನ್ನು ಕೋರಿ ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು.
ಪೀಠವು ಅರ್ಜಿಯ ತುರ್ತು ಪಟ್ಟಿಯನ್ನು ನಿರಾಕರಿಸಿತು ಮತ್ತು ವಿಷಯವನ್ನು ಉನ್ನತ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಮುಂದೆ ನಮೂದಿಸುವಂತೆ ಕೇಳಿತು.