ಉತ್ತರಪ್ರದೇಶ: ಆತ್ಮವಿಶ್ವಾಸದಿಂದ ಬೀಗುತ್ತಿರುವ ಬಿಜೆಪಿ

Update: 2024-02-28 06:30 GMT

ಉತ್ತರ ಪ್ರದೇಶದ ರಾಜ್ಯಸಭೆ ಚುನಾವಣೆಯಲ್ಲಿ ಎಂಟು ಅಭ್ಯರ್ಥಿಗಳ ಗೆಲುವಿನಿಂದ ಬೀಗುತ್ತಿರುವ ಬಿಜೆಪಿ, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ 80 ಲೋಕಸಭೆ ಸ್ಥಾನಗಳನ್ನುಗೆಲ್ಲುತ್ತೇವೆ ಎಂದು ಹೇಳಿದೆ. 

ʻಬಿಜೆಪಿಯ ಎಂಟು ಅಭ್ಯರ್ಥಿಗಳು ಗೆದ್ದಿರುವುದು ಸಂತೋಷದ ವಿಷಯ. ಇದು ಭವಿಷ್ಯದ ಸೂಚನೆ. ಉತ್ತರ ಪ್ರದೇಶದಲ್ಲಿ 80 ರಲ್ಲಿ 80 ಲೋಕಸಭೆ ಸ್ಥಾನ ಮತ್ತು ಎನ್‌ಡಿಎ 400 ಪ್ಲಸ್ ಸ್ಥಾನ ಗೆಲ್ಲಲಿದೆʼ ಎಂದು ಬಿಜೆಪಿಯ ವಿಜಯಶಾಲಿ ಅಭ್ಯರ್ಥಿಗಳಲ್ಲಿ ಒಬ್ಬರಾದ ಸುಧಾಂಶು ತ್ರಿವೇದಿ ಹೇಳಿರುವುದಾಗಿ ವರದಿಯಾಗಿದೆ. 

ಸಮಾಜವಾದಿ ಪಕ್ಷದ (ಎಸ್‌ಪಿ) ಕೆಲವು ಶಾಸಕರು ಬಿಜೆಪಿಗೆ ಒಲವು ತೋರುತ್ತಿದ್ದಾರೆ ಎಂಬ ಪ್ರಶ್ನೆಗೆ, ʻಇಂತಹ ಪರಿಸ್ಥಿತಿ ಏಕೆ ಉದ್ಭವಿಸಿದೆ ಎಂದು ಎಸ್‌ಪಿ ಯೋಚಿಸಬೇಕುʼ ಎಂದು ಹೇಳಿದರು. 

ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ʻಪಿಡಿಎ-ಪಿಚ್ಡಾ (ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ) ಬಗ್ಗೆ ಮಾತನಾಡುತ್ತಾರೆ, ಆದರೆ ಎಫ್‌ ಡಿಎ( ಫಿಲ್ಮ್‌ ಸ್ಟಾರ್‌, ರಾಜವಂಶಸ್ಥರು ಮತ್ತು ಅಧಿಕಾರಶಾಹಿ)ಗಳನ್ನು ಕಣಕ್ಕಿಳಿಸುತ್ತಾರೆ ಎಂದು ಹೇಳಿದರು. 

ಬಿಜೆಪಿಯ ಮತ್ತೊಬ್ಬ ವಿಜಯಶಾಲಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಆರ್‌.ಪಿ.ಎನ್. ಸಿಂಗ್ ಕೂಡ ಉತ್ತರ ಪ್ರದೇಶದ ಎಲ್ಲಾ 80 ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂಬ ಎಸ್‌ಪಿ ಆರೋಪ ಕುರಿತು, ʻಇಡೀ ಉತ್ತರ ಪ್ರದೇಶಕ್ಕೆ ಎಸ್‌ಪಿ ಬಗ್ಗೆ ತಿಳಿದಿದೆ. ಅಧಿಕಾರದಲ್ಲಿದ್ದಾಗ ಗೂಂಡಾವಾದ ಮತ್ತು ಲೂಟಿಯಲ್ಲಿ ತೊಡಗಿದ್ದರು. ಉತ್ತರ ಪ್ರದೇಶದ ಜನರು ಬಿಜೆಪಿಯನ್ನು 80 ಲೋಕಸಭೆ ಸ್ಥಾನಗಳಲ್ಲಿ ಗೆಲ್ಲಿಸಲಿದ್ದಾರೆʼ ಎಂದರು.

Tags:    

Similar News