ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ; ಗೆಲುವಿನ ಭರವಸೆ ನೀಡಿದ ಸಿದ್ದರಾಮಯ್ಯ

Update: 2024-10-23 08:56 GMT

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಂದ ತೆರವಾದ ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಅವರ ಸೋದರಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಸ್ಪರ್ಧಿಸಲಿದ್ದು, ಅವರ ನಾಮಪತ್ರ ಸಲ್ಲಿಕೆ  ಸಂಬಂಧ ಮಂಗಳವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಕಾಂಗ್ರೆಸ್‌ ಸಮಾವೇಶ ಮತ್ತು ರೋಡ್‌ ಷೋ  ಬಳಿಕ ಪ್ರಿಯಾಂಕ ಗಾಂಧಿ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ವರಿಷ್ಠರಾದ  ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಕೇರಳ ರಾಜ್ಯ ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು. 


ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು , ಪ್ರಿಯಾಂಕ ಗಾಂಧಿ  ಅತ್ಯಂತ ಬಹುಮತದಿಂದ ವಯನಾಡು  ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದು ಅಭಿಪ್ರಾಯಪಟ್ಟರು. 

ಮಾಧ್ಯಮದ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ನಮ್ಮ ವಿರೋಧಿ. ಬಿಜೆಪಿ ಸೋಲಿಸಲು ಎಲ್ಲಾ ಜಾತ್ಯತೀತ ಶಕ್ತಿ ಮತ್ತು ಮೌಲ್ಯಗಳೊಂದಿಗೆ ನಾವು ಜೊತೆ ಸೇರುತ್ತೇವೆ. ಬಿಜೆಪಿ ಸೋಲಿಸಿ ದೇಶ ಉಳಿಸುವುದು ನಮ್ಮ ಮೊದಲ ಗುರಿ ಎಂದರು.

ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ಅವರ ಸ್ಫರ್ಧೆಯ ಪರಿಣಾಮ ಏನಾಗಿರಬಹುದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಿಯಾಂಕ ಗಾಂಧಿ ಅವರು ಅತ್ಯಂತ ಬಹುಮತದಿಂದ ಈ ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದರು.



 


Tags:    

Similar News