Chennai Test| ಮೊದಲ ದಿನ ಭಾರತ 339/6; ಅಶ್ವಿನ್ ಶತಕ

ಮೊದಲ ಟೆಸ್ಟ್‌ ನ ಮೊದಲನೇ ದಿನ ಅಶ್ವಿನ್ (ಔಟಾಗದೆ 102) ಮತ್ತು ರವೀಂದ್ರ ಜಡೇಜಾ (ಅಜೇಯ 86) ಮುರಿಯದ 7ನೇ ವಿಕೆಟ್ ಜೊತೆಯಾಟದಲ್ಲಿ 195 ರನ್ ಸೇರಿಸಿದರು.

Update: 2024-09-19 12:47 GMT
ಅಶ್ವಿನ್‌ 20 ಬಾರಿ 50+ ರನ್‌ ಹಾಗೂ 30 ಬಾರಿ 5+ ವಿಕೆಟ್‌ ಗಳಿಸಿದ ಮೊದಲ ಆಟಗಾರ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಚೆನ್ನೈನಲ್ಲಿ ಗುರುವಾರ ಆರಮಭಗೊಂಡ ಆರಂಭಿಕ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮೊದಲ ದಿನದಂತ್ಯ ಆರು ವಿಕೆಟ್‌ಗೆ 339 ರನ್ ಗಳಿಸಿದೆ. ಆರಂಭಿಕ ಬಿಕ್ಕಟ್ಟಿನಿಂದ ಚೇತರಿಸಿಕೊಂಡಿದ್ದು, ಸ್ಪಿನ್ನರ್‌ ಆರ್. ಅಶ್ವಿನ್ ಬ್ಯಾಟಿಂಗ್ ಸ್ಟಾರ್ ಆಗಿದ್ದರು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ತಾಳ್ಮೆಯ 56 ರನ್ ನೊಂದಿಗೆ ಚಹಾದ ಹೊತ್ತಿಗೆ 6 ವಿಕೆಟ್‌ಗೆ 176 ರನ್ ಗಳಿಸಿತು. ಬೆಳಗ್ಗೆ ಮತ್ತು ಊಟದ ನಂತರದ ಅವಧಿಯಲ್ಲಿ ತಲಾ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಶತಕವೀರ ಅಶ್ವಿನ್ (ಔಟಾಗದೆ 102) ಮತ್ತು ರವೀಂದ್ರ ಜಡೇಜಾ (ಔಟಾಗದೆ 86) ಜೋಡಿಯು 7ನೇ ವಿಕೆಟ್‌ ಗೆ 227 ಎಸೆತಗಳಲ್ಲಿ 195 ರನ್‌ ಜೋಡಿಸಿತು.

ಆರಂಭಿಕ ಅವಧಿಯಲ್ಲಿ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್‌ ಕಬಳಿಸಿದ ವೇಗಿ ಹಸನ್ ಮಹಮೂದ್ (4/58), ಆನಂತರ ರಿಷಬ್ ಪಂತ್ ರೂಪದಲ್ಲಿ ತಮ್ಮ ಖಾತೆಗೆ ಮತ್ತೊಂದು ವಿಕೆಟ್‌ ಸೇರಿಸಿದರು.ನಹೀದ್ ರಾಣಾ (1/80) ಮತ್ತು ಮೆಹದಿ ಹಸನ್ ಮಿರಾಜ್ (1/77) ತಲಾ ಒಂದು ವಿಕೆಟ್ ಪಡೆದರು.

ಆದರೆ, ದಿನದ ಅಂತಿಮ ಅವಧಿಯಲ್ಲಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲವಾಗಿ, ಅಶ್ವಿನ್ ಮತ್ತು ಜಡೇಜಾ ಜೋಡಿ ಮುಂದೆ ನೆಲಕಚ್ಚಿದರು.

Tags:    

Similar News