R Ashwin : ಆರ್ ಅಶ್ವಿನ್ ವಿದಾಯ; ಕೋಚ್ ಗಂಭೀರ್, ಕೊಹ್ಲಿ ಮತ್ತಿತರರು ಹೇಳಿದ್ದೇನು?
R Ashwin : ಏಕದಿನ ವಿಶ್ವಕಪ್ ವಿಜೇತ 38 ವರ್ಷದ ಅಶ್ವಿನ್ ತಮ್ಮ ಭಾರತ ವೃತ್ತಿಜೀವನವನ್ನು 537 ಟೆಸ್ಟ್, 156 ಏಕದಿನ ಮತ್ತು 72 ಟಿ 20 ಐ ವಿಕೆಟ್ಗಳೊಂದಿಗೆ ಕೊನೆಗೊಳಿಸಿದ್ದಾರೆ.;
ಭಾರತ ತಂಡದ ದಿಗ್ಗಜ ಸ್ಪಿನ್ ಬೌಲರ್ ಆರ್ ಅಶ್ವಿನ್ ಬುಧವಾರ (ಡಿಸೆಂಬರ್ 18ರಂದು) ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ವಿದಾಯ ಭಾಷಣದಲ್ಲಿ ಅವರು ಭಾಷಣದಲ್ಲಿ ಅವರು ಪ್ರಮುಖ ಆಟಗಾರರ ಹೆಸರನ್ನು ಹೇಳಿದ್ದಾರೆ. ಅಶ್ವಿನ್ ಅವರ ವಿದಾಯದಿಂದಾಗಿ ಭಾರತ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಕಳೆಗುಂದಲಿದೆ. ಆದಾಗ್ಯೂ ವಯಸ್ಸಿನ ಕಾರಣ ಹೆಚ್ಚು ವರ್ಷ ಆಡಲು ಅವಕಾಶ ಸಿಗದು ಎಂಬ ಮುನ್ಸೂಚನೆ ಇದ್ದ ಕಾರಣ ಅವರೇ ವಿದಾಯ ಘೋಷಿಸಿದ್ದಾರೆ. ಆಟಗಾರನ ವಿದಾಯಕ್ಕೆ ತಂಡದ ಕೋಚ್ ಗೌತಮ್ ಗಂಭೀರ್ ಸಹ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಅಶ್ವಿನ್ ವಿದಾಯ ಪ್ರಕಟಿಸುವ ಮೊದಲು ಡ್ರೆಸ್ಸಿಂಗ್ ರೂಮ್ನಲ್ಲಿ ಅಶ್ವಿನ್ ಅವರನ್ನು ತಬ್ಬಿಕೊಂಡಿದ್ದರು ಕೊಹ್ಲಿ. ಬಳಿಕ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ "ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ. ಇಂದು ನೀವು ನಿವೃತ್ತರಾಗುತ್ತಿದ್ದೀರಿ ಎಂದು ನೀವು ಹೇಳಿದಾಗ ಅದು ನನ್ನನ್ನು ಸ್ವಲ್ಪ ಭಾವುಕನನ್ನಾಗಿ ಮಾಡಿತು. ಜತೆಯಾಗಿ ಆಡಿದ ಸ್ಮರಣೆಗಳು ಕಣ್ಣ ಮುಂದೆ ಬಂದವು. ನಾನು ನಿಮ್ಮ ಜತೆಗಿನ ಕ್ರಿಕೆಟ್ ಪ್ರಯಾಣದ ಪ್ರತಿಯೊಂದು ಕ್ಷಣವನ್ನೂ ಅನ್ನು ಅನುಭವಿಸಿದ್ದೇನೆ. ಭಾರತೀಯ ಕ್ರಿಕೆಟ್ಗೆ ನೀಡುವ ನೀಡಿರುವ ಕೌಶಲ ಹಾಗೂ ಪಂದ್ಯ ಗೆಲ್ಲಿಸಿದ ಕೊಡುಗೆಗಳು ಯಾವುದಕ್ಖೂ ಕಡಿಮೆಯಿಲ್ಲ. ನೀವು ಯಾವಾಗಲೂ ಭಾರತೀಯ ಕ್ರಿಕೆಟ್ನ ದಂತಕಥೆಯಾಗಿ ಉಳಿಯುತ್ತೀರಿ. ನಿಮ್ಮ ಕುಟುಂಬದೊಂದಿಗೆ ನೀವು ಉತ್ತಮ ಜೀವನ ಸಾಗಿಸಿ ಎಂದು ಹಾರೈಸುತ್ತೇನೆ. ಅದನ್ನು ಬಿಟ್ಟು ಬೇರೇನೂ ಬಯಸುವುದಿಲ್ಲ. ನಿಮಗೆ ಮತ್ತು ನಿಮ್ಮ ಆಪ್ತರಿಗೆ ನನ್ನ ಪ್ರೀತಿಯಿದೆ. ಅಭಿನಂದನೆಗಳು ಗೆಳೆಯ." ಎಂದು ಬರೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್ ವಿಜೇತ 38 ವರ್ಷದ ಅಶ್ವಿನ್ ತಮ್ಮ ಭಾರತ ವೃತ್ತಿಜೀವನವನ್ನು 537 ಟೆಸ್ಟ್, 156 ಏಕದಿನ ಮತ್ತು 72 ಟಿ 20 ಐ ವಿಕೆಟ್ಗಳೊಂದಿಗೆ ಕೊನೆಗೊಳಿಸಿದ್ದಾರೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಟ್ವೀಟ್ ಮಾಡಿ, "ನೀವು ಯುವ ಬೌಲರ್ ಆದಾಗಿನಿಂದ ಆಧುನಿಕ ಕ್ರಿಕೆಟ್ನ ದಂತಕಥೆಯಾಗಿ ಬೆಳೆಯುವುದನ್ನು ನೋಡುವ ಸೌಭಾಗ್ಯನಮಗೆಲ್ಲರಿಗೂ ದೊರಕಿದೆ. ನಾನು ಅಶ್ವಿನ್ ಅವರಿಂದಾಗಿಯೇ ಬೌಲರ್ ಆಗಿದ್ದೇನೆ ಎಂದು ಮುಂದಿನ ಪೀಳಿಗೆ ಹೇಳಲಿದೆ. ನಾನು ನಿಮ್ಮನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇನೆ ಸಹೋದರ ಎಂದು ಬರೆದುಕೊಂಡಿದ್ದಾರೆ.
ಇವರನ್ನು ಹೊರತುಪಡಿಸಿ ತಮಿಳುನಾಡಿನ ಆಟಗಾರ ದಿನೇಶ್ ಕಾರ್ತಿಕ್, ಜಾವಗಲ್ ಶ್ರೀನಾಥ್, ಮೊಹಮ್ಮದ್ ಕೈಫ್, ಬಿಸಿಸಿಐ, ಚೆನ್ನೈ ಸೂಪರ್ ಕಿಂಗ್ಸ್, ಮುಂಬಯಿ ಇಂಡಿಯನ್ಸ್, ತಂಡಗಳು ಶುಭಾಶಯ ಕೋರಿವೆ. ಅವುಗಳ ಟ್ವೀಟ್ಗಳು ಇಲ್ಲಿವೆ.