ʼಚಿತ್ರಕಶಕ್ತಿʼಯ ಜ್ಞಾನವೇಲ್ ಚಿತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ ರಜನಿ

ನೆನಪಿನಲ್ಲಿ ಉಳಿಸುವ ದೃಶ್ಯ ಕ್ಷಣಗಳು ಹಾಗೂ ಮತ್ತು ಗಟ್ಟಿಯಾದ ಸಾಮಾಜಿಕ ಸಂದೇಶದ ಚಿತ್ರ ವಟ್ಟೈಯನ್‌. ಆದರೆ ಚಿತ್ರಕಥೆ ಸ್ವಲ್ಪ ತೆಳುವಾಗಿ ಅದರೊಂದಿಗೆ ತಿಣುಕಾಡಿದ ಭಾವ ಕಾಡುತ್ತದೆ. ವಾಣಿಜ್ಯ ಒತ್ತಡ ಮತ್ತು ನೈಜ ನಿರೂಪಣೆಯ ಸಂಘರ್ಷದ ನಡುವೆ ಸೆಣಸಾಡಿದಂತೆ ಭಾಸವಾಗುತ್ತದೆ.

Update: 2024-10-13 02:30 GMT
ʼಚಿತ್ರಕಶಕ್ತಿʼಯ ಜ್ಞಾನವೇಲ್ ಚಿತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ ರಜನಿ
ವೆಟ್ಟೈಯಾನ್ ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ ಮತ್ತು ಮಂಜು ವಾರಿಯರ್ ಮುಂತಾದವರು ನಟಿಸಿದ್ದಾರೆ.
Click the Play button to listen to article

ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಭಾವನಾತ್ಮಕ ಕೋರ್ಟಿನ ಕಟಕಟೆಯ ತಮ್ಮ ಹಿಂದಿನ ಚಿತ್ರ ಜೈ ಭೀಮ್‌ನ ನಿರ್ದೇಶಕ ಟಿಜೆ ಜ್ಞಾನವೇಲ್ ಅವರು ಹಿರಿಯ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹೊಸ ಚಿತ್ರ ವೆಟ್ಟೈಯಾನ್‌ನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಹಾಜರಾಗಿದ್ದಾರೆ.

ಜ್ಞಾನವೇಲ್‌ ಅವರ ಜೈ ಭೀಮ್ ಯಾವುದೇ ವಾಣಿಜ್ಯ ಸರಕುಗಳಿಲ್ಲದೆ ಸಂಪೂರ್ಣವಾಗಿ ತೃಪ್ತಿ ತಂದುಕೊಡುವ ಚಿತ್ರ. ವೆಟ್ಟೈಯಾನ್ ನಾಯಕತ್ವದ ಅಂಶಗಳ ಮಿಶ್ರಣವನ್ನು ಹೊಂದಿದೆ ಮತ್ತು ಆರೋಪಿಗಳ ಎನ್‌ಕೌಂಟರ್ ನ್ಯಾಯ ಮತ್ತು ಮಾನವ ಹಕ್ಕುಗಳ ನಡುವಿನ ವಿವಾದಾತ್ಮಕ ತೆಳುರೇಖೆಯಂಥ ಸೂಕ್ಷ್ಮ ಸಂಗತಿಗಳನ್ನು ಚರ್ಚೆಗೆತ್ತಿಕೊಳ್ಳುವಂತೆ ಮಾಡುವ ಚಿತ್ರವಾಗಿ ಪ್ರೇಕ್ಷಕರನ್ನು ಕೆಣಕುತ್ತದೆ.

ಅಥಿಯಾನ್ (ರಜನಿಕಾಂತ್) ಒಬ್ಬ ಹಿರಿಯ ಪೋಲೀಸ್ ಮತ್ತು ಹೆಸರಾಂತ ಎನ್‌ಕೌಂಟರ್ ಸ್ಪೆಷಲಿಸ್ಟ್. ಸರ್ಕಾರವು ಅಪರಾಧಿಗಳನ್ನು ಹಿಡಿಯಲು ಬಯಸಿದಾಗಲೆಲ್ಲ, ಅಥಿಯಾನ್ ಹಾಜರಾಗಲೇಬೇಕಾದ ಅಧಿಕಾರಿ. ಅದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ, ಸತ್ಯದೇವ್ (ಅಮಿತಾಬ್ ಬಚ್ಚನ್) ಒಬ್ಬ ಹಿರಿಯ ನ್ಯಾಯಮೂರ್ತಿ. ಪೊಲೀಸರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು ಎಂದು ಬಲವಾಗಿ ನಂಬುವ ವ್ಯಕ್ತಿ.

ಪೊಲೀಸ್ ಎನ್‌ಕೌಂಟರ್‌ಗಳ ವಿರುದ್ಧ ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ಹಿಂದೆ ಮತ್ತು ಮುಂದೆ ಚಲಿಸುವ ಚಿತ್ರಕಥೆಯ ಮೂಲಕ ನಿಧಾನವಾಗಿ ತನ್ನದೇ ಲಯದಲ್ಲಿ ಬೆಳೆಯುವ ಈ ವೇಟ್ಟೈಯನ್‌ ಪ್ರೇಕ್ಷಕರನ್ನು, ಅದರಲ್ಲೂ ರಜನಿ ಮತ್ತು ಹಿರಿಯ ತಾರಾಗಣದ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.

ಆದರೂ, ಅಂತಿಮವಾಗಿ , ಅಥಿಯಾನ್ ವ್ಯವಸ್ಥೆಯ ಬಲಿಪಶುವಾಗಿ ಮುಗ್ಧ ಯುವಕನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲುಬೇಕಾಗಿ ಬರುವ ಸಂದರ್ಭ ಎದುರಾಗುತ್ತದೆ. ಆಗ ಅಥಿಯನ್‌ ಪ್ರಭಾವಿ ಉದ್ಯಮಿ ನಟರಾಜ್ (ರಾಣಾ ದಗ್ಗುಬಾಟಿ) ಅವರನ್ನು ಎಲ್ಲಾ ವಿಲಕ್ಷಣ ಶಕ್ತಿಗಳ ವಿರುದ್ಧ ಸೆಣೆಸಿ ಬಂಧಿಸಬೇಕಾಗುತ್ತದೆ.

ತನಿಖೆ ಎಂಬ ನಾಟಕ

ವೆಟ್ಟೈಯನ್‌ನ ಮೊದಲಾರ್ಧವು ವಿಶಿಷ್ಟವಾದ ಪ್ರೇಕ್ಷಕ ಪ್ರೀತಿಯ ಕ್ಷಣಗಳ ಮತ್ತು ಪೊಲೀಸ್‌ ಕಾರ್ಯಾಚರಣೆಯ ಸಂಗತಿಗಳ ಸುತ್ತ ತಿರುಗುತ್ತದೆ. ಚಿತ್ರಕಥೆ ವೇಗ ಪಡೆದುಕೊಳ್ಳುವುದು ಮಧ್ಯಂತರದ ನಂತರವೇ. ಶಂಕರ್ ಮತ್ತು ಕೆ.ಎಸ್.ರವಿಕುಮಾರ್ ಅವರ ಉಚ್ಛ್ರಾಯ ದಿನಗಳಲ್ಲಿ ನಿರ್ಮಿಸಿದ ಚಿತ್ರಗಳನ್ನು ನೆನಪಿಸುವ ಜ್ಞಾನವೇಲ್ ಅವರ ಈ ಚಿತ್ರದ ದ್ವಿತೀಯಾರ್ಧವನ್ನು ಪ್ರೇಕ್ಷಕರ ಮೆಚ್ಚಿಗೆ ಗಳಿಸಲು ಮಾಡಿದ ಪ್ರಯತ್ನವೆಂದು ಯಾವುದೇ ಯಗ್ಗಿಲ್ಲದೆ ಹೇಳಬಹುದು..

ವಯಸ್ಸಾದ ಪೋಲೀಸ್ ಆಗಿ ರಜನಿಕಾಂತ್ ಅವರ ಪ್ರಮುಖ ಪಾತ್ರದಿಂದ ಹೆಚ್ಚು ಅಂತರವನ್ನು ಕಾಯ್ದಕೊಳ್ಳದೆ, ಕಮರ್ಷಿಯಲ್ ಅಂಶಗಳನ್ನು ಆಧರಿಸಿದರೂ ನಿರ್ದೇಶಕರ ಚಿತ್ರಕ ಶಕ್ತಿಯ ಬಲದ ಪಾತ್ರವನ್ನು ಅವರು ನಿರ್ವಹಿಸಿರುವುದು ಮೆಚ್ಚಿಗೆಗೆ ಪಾತ್ರವಾಗುತ್ತದೆ.

ಹೊಳೆಯುವ ಇತರರು

ರಜನಿಕಾಂತ್ ಗಂಭೀರವಾದ ಪೋಲೀಸ್ ಪಾತ್ರವನ್ನು ನಿರ್ವಹಿಸಿದರೆ, ವೆಟ್ಟೈಯನ್‌ಚಿತ್ರದ ಮನರಂಜನಾ ಮೌಲ್ಯವನ್ನು ಫಹದ್ ಫಾಸಿಲ್ ಮತ್ತು ಅವರ ಲಘುವಾದ ಅಭಿನಯದಿಂದ ಹೆಚ್ಚಿಸಿದ್ದಾರೆ. ಫಹದ್ ಸರಳವಾಗಿ ಅದ್ಭುತ, ಹಾಸ್ಯದ ಒಂದು ಸಾಲಿನ ಸಂಭಾಷಣೆ ಮತ್ತು ಪ್ರಯತ್ನರಹಿತ ಸಂಭಾಷಣಾ ಲಹರಿ ಮೆಚ್ಚಿಗೆಗೆ ಪಾತ್ರವಾಗುತ್ತದೆ. .

ಉಳಿದ ನಟರಲ್ಲಿ, ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರೂ, ಪಾತ್ರಕ್ಕೇ ಇರುವ ಮಿತಿಯಿಂದಾಗಿ, ಅವರ ಪ್ರತಿಭೆಯೂ ಮಿತಿಗೆ ಸಿಲುಕಿ ನರಳುತ್ತದೆ. ದುಶಾರ ವಿಜಯನ್ ತುಂಬಾ ಸಹಜವಾಗಿ ಅಭಿನಯಿಸಿದ್ದರೆ. ರಿತಿಕಾ ಸಿಂಗ್‌ ಅಭಿನಯ ಹೇಳಿಕೊಳ್ಳುವಂತೇನೂ ಇಲ್ಲ. ಮಂಜು ವಾರಿಯರ್‌ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆಯಬಹುದಿತ್ತೇನೋ ಎನ್ನಿಸುತ್ತದೆ. ಉಳಿದಂತೆ ಉಳಿದವರು, ಉಳಿದವರು ಕಂಡಂತೆ ಎಂದುಕೊಳ್ಳಬಹುದು.

ಮುಖ್ಯ ಎದುರಾಳಿ ರಾಣಾ ದಗ್ಗುಬಾಟಿ ದ್ವಿತೀಯಾರ್ಧದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಮತ್ತು ಅವನ ಪಾತ್ರವು ದುರ್ಬಲ ಕೊಂಡಿಯಂತೆ ಕಾಣುತ್ತದೆಯೇ ಹೊರತು, ಒಂದು ಪರಿಪೂರ್ಣಪಾತ್ರವಾಗಿಲ್ಲ. ಅವರ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವೇ ಇಲ್ಲ.

ಛಾಯಾಗ್ರಹಣ, ಸಂಗೀತ

ಎಸ್‌ಆರ್ ಕತೀರ್ ಅವರ ಛಾಯಾಗ್ರಹಣವು ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಅವರು ರಜನಿಕಾಂತ್‌ ಅವರ ಮಾಸ್ ಇಮೇಜ್ ಅನ್ನು ಹೆಚ್ಚಿಸಲು ಸಾಕಷ್ಟು ದುಡಿದಿದ್ದಾರೆ ಎನ್ನಿಸುತ್ತದೆ. ಈ ಕಾರಣಕ್ಕಾಗಿ ಜ್ಞಾನವೇಲ್ ಅವರ ಮುಖ್ಯ ಕಥೆಯ ಆತ್ಮವನ್ನು ಕಳೆದುಹೋಗದಂತೆ ನೋಡಿಕೊಂಡಿದ್ದಾರೆ.

ಹಿನ್ನೆಲೆ ಸಂಗೀತದ ದೃಷ್ಟಿಯಿಂದ ಗಮನಿಸಿದರೆ, ಅನಿರುದ್ಧ್ ರವಿಚಂದರ್ ಮತ್ತೊಮ್ಮೆ ಮಿಂಚಿದ್ದಾರೆ. ಚಿತ್ರದ ವೇಗ ಕಡಿಮೆಯಾದಾಗಲೆಲ್ಲ ಅವರ ಹಿನ್ನೆಲೆ ಸಂಗೀತ ಏಕಾಂಗಿಯಾಗಿ ಚಿತ್ರವನ್ನು ಎತ್ತುತ್ತದೆ. ಹಾಗೆ ಯೋಚಿಸಿದರೆ, ಚಿತ್ರವನ್ನು ಇನ್ನೂ 15-20 ನಿಮಿಷಗಳಷ್ಟು ಕಡಿಮೆಯಾಗಬಹುದಿತ್ತು ಎನ್ನಿಸುತ್ತದೆ. ಏಕೆಂದರೆ ಹೆಚ್ಚಿನ ದೃಶ್ಯಗಳ ಪ್ರೇಕ್ಷಕರ ಊಹಾಶಕ್ತಿಗೆ ಸವಾಲನ್ನೇನೂ ಒಡ್ಟುವುದಿಲ್ಲ.

ಪೊಲೀಸರು ಎನ್‌ಕೌಂಟರ್‌ಗಳನ್ನು ಏಕೆ ಪ್ರೋತ್ಸಾಹಿಸಬಾರದು ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು ಎಂಬುದರ ಕುರಿತು ಐಪಿಎಸ್ ಅಧಿಕಾರಿಗಳಿಗೆ ಅಮಿತಾಬ್ ಅವರ ಉಪನ್ಯಾಸದೊಂದಿಗೆ ಚಲನಚಿತ್ರವು ಪ್ರಾರಂಭವಾಗುತ್ತದೆ. ಆದರೆ, ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ಜ್ಞಾನವೇಲ್ ಸಿನಿಮಾವನ್ನು ತಾರ್ಕಿಕ ಅಂತ್ಯಕ್ಕೆ ತರುವುದರಲ್ಲಿ ಯಶಸ್ವಿಯಾಗಿದ್ದಾಋಎ.

ವೆಟ್ಟೈಯಾನ್ ನೋಡಿಸಿಕೊಳ್ಳಬಹುದಾದ ದೃಶ್ಯಗಳ ಸರಮಾಲೆಯೊಂದಿಗೆ, ಗಟ್ಟಿಯಾದ ಸಾಮಾಜಿಕ ಸಂದೇಶದೊಂದಿಗೆ ವೀಕ್ಷಿಸಬಹುದಾದ ಚಿತ್ರವಾಗಿ ಮೆಚ್ಚಿಗೆ ಗಳಿಸುತ್ತದೆ. ಆದರೂ, ಜ್ಞಾನವೇಲ್ ಅವರು ತಮ್ಮ ಚಿತ್ರಕಥೆಯೊಂದಿಗೆ ಸ್ವಲ್ಪಮಟ್ಟಿಗೆ ಹೆಣಗಾಡುವುದನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಚಿತ್ರಕಥೆ ಕಮರ್ಷಿಯಲ್‌ ಒತ್ತಾಯ ಮತ್ತು ಮತ್ತು ನೈಜ ನಿರೂಪಣೆಯ ನಡುವೆ ಸಿಲುಕಿಕೊಂಡಿರುವುದು ಸ್ಪಷ್ಟವಾಗುತ್ತದೆ. ಒಟ್ಟಾರೆಯಾಗಿ ವಟ್ಟೈಯಾನ್‌ ಒಂದು ‘ವಿಭಿನ್ನ’ ರಜನಿಕಾಂತ್ ಚಿತ್ರವಾಗಿದ್ದು, ಸಮರ್ಪಕವಾಗಿ ಮನರಂಜನೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Tags:    

Similar News