ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಮ್‌ ನಿಧನ

ಕನ್ನಡ ಮತ್ತು ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ನಟಿ ಪವಿತ್ರಾ ಜಯರಾಮ್‌(35) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.;

Update: 2024-05-12 10:21 GMT
ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಮ್‌ ನಿಧನರಾಗಿದ್ದಾರೆ.
Click the Play button to listen to article

ಕನ್ನಡ ಮತ್ತು ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ನಟಿ ಪವಿತ್ರಾ ಜಯರಾಮ್‌(35) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ತ್ರಿನಯಿನಿ ಸೀರಿಯಲ್‌ ಮೂಲಕವೇ ಗುರುತಿಸಿಕೊಂಡಿದ್ದ ಪವಿತ್ರಾ, ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ ಕರ್ನೂಲ್‌ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೆಲುಗಿನ ತ್ರಿನಯಿನಿ ಸೀರಿಯಲ್‌ನಿಂದಲೇ ಹೆಚ್ಚು ಜನಪ್ರಿಯತೆ ಪಡೆದಿದ್ದ ಪವಿತ್ರಾ, ಮೂಲತಃ ಕರ್ನಾಟಕದವರು. ಮಂಡ್ಯ ತಾಲೂಕಿನ ಹನಕೆರೆಯವರು.

ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು. ಕನ್ನಡದ ‘ರೋಬೋ ಫ್ಯಾಮಿಲಿ’ ಹಾಸ್ಯ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಪವಿತ್ರಾ ಜಯರಾಂ ಅದಾದ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ತೆಲುಗಿನ ಜನಪ್ರಿಯ ಧಾರಾವಾಹಿಯಲ್ಲಿಯೂ ಸಹ ಪವಿತ್ರಾ ನಟಿಸುತ್ತಿದ್ದರು. ಪವಿತ್ರಾ ಜಯರಂ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರಾಗಿದ್ದರು.

ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಸಂಭವಿಸಿದ್ದ ಹಿನ್ನೆಲೆಯಲ್ಲಿ ಕಾರ್‌ನಲ್ಲಿದ್ದ ಪವಿತ್ರಾ ಜಯರಾಮ್‌ ಸ್ಥಳದಲ್ಲಿಯೇ ನಿಧನರಾಗಿದ್ದಾರೆ. ಇನ್ನುಳಿದಂತೆ ಕಾರ್‌ನಲ್ಲಿ ಯಾರೆಲ್ಲ ಇದ್ದರು ಎಂಬ ವಿಚಾರ ಇನ್ನಷ್ಟೇ ತಿಳಿಯಬೇಕಿದೆ.

Tags:    

Similar News