ಶೈನ್ ಶೆಟ್ಟಿ - ಅಂಕಿತ ಅಮರ್ 'ಜಸ್ಟ್ ಮ್ಯಾರೀಡ್'
ಬಿಗ್‌ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಮತ್ತು ಅಂಕಿತ ಅಮರ್ ಜೋಡಿಯಾಗಿ ನಟಿಸಿರುವ 'ಜಸ್ಟ್ ಮ್ಯಾರೀಡ್' ಚಿತ್ರದ ಚಿತ್ರೀಕರಣ ಪೂರ್ತಿಗೊಂಡಿದೆ.;
By : The Federal
Update: 2024-04-22 07:26 GMT
ಬಿಗ್‌ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಮತ್ತು ಅಂಕಿತ ಅಮರ್ ಜೋಡಿಯಾಗಿ ನಟಿಸಿರುವ 'ಜಸ್ಟ್ ಮ್ಯಾರೀಡ್' ಚಿತ್ರದ ಚಿತ್ರೀಕರಣ ಪೂರ್ತಿಗೊಂಡಿದೆ. ಸಿ.ಆರ್.ಬಾಬಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬಂಡವಾಳ ಹೂಡಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ಆರು ಸುಮಧುರ ಹಾಡುಗಳಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ ಸಂಕಲನವಿದೆ.
ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.