ರಿಯಲ್ ಸ್ಟಾರ್ ಉಪ್ಪಿಯ ʼAʼ ರೀ-ರಿಲೀಸ್!

ಮೇ 17ಕ್ಕೆ ‘ಎ’ ಸಿನಿಮಾ ರೀ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.;

Update: 2024-05-14 10:29 GMT
ಉಪೇಂದ್ರ ನಟನೆಯ ಎ ಸಿನಿಮಾ ರಿ ರಿಲೀಸ್‌ ಆಗಲಿದೆ.
Click the Play button to listen to article

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ‘A’ ಚಿತ್ರ ಮರು‌ ಬಿಡುಗಡೆಗೆ ಸಜ್ಜಾಗಿದೆ. 1998ರಲ್ಲಿ ರಿಲೀಸ್ ಆದ ‘A’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಪಡೆದು ಹಿಟ್‌ ಚಿತ್ರವಾಗಿ ದಾಖಲೆ ಬರೆದಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೆಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಇದೇ ಮೇ 17ಕ್ಕೆ ‘ಎ’ ಸಿನಿಮಾ ರೀ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್‌ ಲೈನ್‌ನೊಂದಿಗೆ ಈ ಸಿನಿಮಾ ಮೊದಲು ತೆರೆಗೆ ಬಂದಾಗ ಜನ ಒಂದು ಸಲ ನೋಡಿ ಸುಮ್ಮನಾಗಿರಲಿಲ್ಲ. ಇಡೀ ಕಥೆಯನ್ನು ಅರ್ಥ ಮಾಡಿಕೊಳ್ಳಲು ಮತ್ತೆ ಮತ್ತೆ ನೋಡಿದ್ದರು. ಅಷ್ಟು ಸೆಳೆತ ಕ್ರಿಯೇಟ್ ಮಾಡಿದ್ದ ಈ ಚಿತ್ರ ಇದೀಗ Coming Soon ಅಂತ ಉಪ್ಪಿ ಪ್ರೋಮೋ ಹಾಕಿದ್ದಾರೆ.

Full View

ಒಬ್ಬ ಡೈರೆಕ್ಟರ್ ಹಾಗೂ ನಾಯಕಿಯ ನಡುವಿನ ಪ್ರೇಮ ಕಥೆಯನ್ನೆ ಈ ಚಿತ್ರ ಆಧರಿಸಿತ್ತು.ಈ ಒಂದು ಹೊಸ ಪ್ರಯೋಗದ ಮೂಲಕ ಉಪ್ಪಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು. ಹಾಗಾಗಿಯೇ ಒಂದೇ ಸಲ ಈ ಚಿತ್ರವನ್ನು ಬಹುತೇಕರು ನೋಡಲೇ ಇಲ್ಲ. ಎರಡು ಮೂರು ಬಾರಿ ಚಿತ್ರವನ್ನು ನೋಡಿ ಇಡೀ ಕಥೆಯನ್ನು ಅರ್ಥ ಮಾಡಿಕೊಂಡಿದ್ದರು.

ಉಪ್ಪಿಯ A ಚಿತ್ರದಲ್ಲಿ ಗುರು ಅದ್ಭುತ ಸಂಗೀತ..!

ಉಪ್ಪಿಯ ʼAʼ ಸಿನಿಮಾದಲ್ಲಿ ಒಳ್ಳೆ ಹಾಡುಗಳಿದ್ದವು. ́ಸುಮ್ ಸುಮ್ನೆ ನಗ್ತಾಳೆ…ʼ, ʼಮಾರಿ ಕಣ್ಣು ಹೋರಿ ಮ್ಯಾಲೆ..ʼ ಹೀಗೆ ಒಳ್ಳೆ ಒಳ್ಳೆ ಹಾಡುಗಳನ್ನು ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಕೊಟ್ಟಿದ್ದರು.

ಈ ಚಿತ್ರ ಬಂದು ಇದೀಗ 26 ವರ್ಷ ಕಳೆದಿದೆ. ಆದರೆ ಇದೀಗ ಈ ಚಿತ್ರ ಹೊಸ ರೂಪದಲ್ಲಿಯೆ ರೀ-ರಿಲೀಸ್ ಆಗುತ್ತಿದೆ. ಈ ಒಂದು ಇಂಟ್ರಸ್ಟಿಂಗ್ ಮ್ಯಾಟರ್‌ ಅನ್ನ ಸ್ವತಃ ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿಯೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯಾವ ಸ್ಟಾರ್‌ ನಟರ ಹೊಸ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿಲ್ಲ. ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎರಡು ಸಿನಿಮಾಗಳು ಮರು ಬಿಡುಗಡೆ ಆದವು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗೂ ರೀ-ರಿಲೀಸ್ ಭಾಗ್ಯ ಸಿಕ್ಕಿದೆ.

ʼUIʼ ಸಿನಿಮಾ ತಯಾರಿಯಲ್ಲಿರುವ ಉಪೇಂದ್ರ ಅವರು ಸದಾ ತಮ್ಮ ನಿರ್ದೇಶನದ ಸಿನಿಮಾಗಳ ಹೊಸ ಕಥೆ, ಸಂಭಾಷಣೆ ಮೂಲಕವೇ ಜನರ ತಲೆಗೆ ಕೈ ಹಾಕುತ್ತಾರೆ. 1998ರಲ್ಲಿ ಬಿಡುಗಡೆ ಮಾಡಿದ್ದ 'ಎ' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅಂದಿನ ಕಾಲದಲ್ಲಿಯೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸುಮಾರು ಒಂದೂವರೆ ಕೋಟಿ ಹಣದಲ್ಲಿ 'ಎ' ಸಿನಿಮಾ ಸಿದ್ಧವಾಗಿತ್ತು. ಹೊಸ ಸಿನಿಮಾದ ತಯಾರಿ ಮಧ್ಯೆ ಉಪೇಂದ್ರ ಅವರು 'ಎ' ಸಿನಿಮಾವನ್ನು ಮತ್ತೆ ತೆರೆಗೆ ತರಲಿದ್ದಾರೆ. ಈ ಸಿನಿಮಾ ಮುಂದಿನ ಮೇ 17ರಂದು ಶುಕ್ರವಾರ ಮರು ಬಿಡುಗಡೆ ಆಗಲಿದ್ದು, ಅವರ ಅಭಿಮಾನಿಗಳು ಸ್ವಾಗತಿಸಲು ಸಜ್ಜಾಗಿದ್ದಾರೆ.

Tags:    

Similar News