ಚಿತ್ರರಂಗದ ಸಮಸ್ಯೆಗೆ ವೀಕ್ಷಕರನ್ನು ದೂಷಿಸಬಾರದು ಎಂದ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದ ಸಿನಿಮಾ ಬರದ ಕುರಿತು ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.;

Update: 2024-05-16 08:21 GMT
ರಿಯಲ್‌ ಸ್ಟಾರ್‌ ಉಪೇಂದ್ರ
Click the Play button to listen to article

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ಸಿನಿಮಾಗಳು ಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೆ ಅಲ್ಲದೆ ಕನ್ನಡದ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹೀಗಿರುವಾಗ ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಉಂಟಾಗಿರುವ ಈ ಬರಗಾಲದ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಉಪೇಂದ್ರ, ಜಗತ್ತು ಬದಲಾಗಿದೆ. ಇವತ್ತು ಅಂಗೈಯಲ್ಲಿಯೇ ಜಗತ್ತು ಇದೆ. ಕೈಯಲ್ಲೇ ಸಿಗುವ ವಿವಿಧ ಬಗೆಯ ಮನರಂಜನೆಯನ್ನೂ ಮೀರಿದ್ದನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಬರೀ ದೊಡ್ಡ ಬಜೆಟ್ ​ಸಿನಿಮಾ ಅಂತಲ್ಲ. ಮೇಕಿಂಗ್​, ಕಂಟೆಂಟ್ ​ದೃಷ್ಟಿಯಿಂದಲೂ ಹೊಸತನವನ್ನು ಪ್ರೇಕ್ಷಕರು ನಿರೀಕ್ಷೆ ಮಾಡ್ತಿದ್ದಾರೆ. ಹೀಗಾಗಿ ಪ್ರೇಕ್ಷಕರು ಥಿಯೇಟರ್​ಗೆ ಬರಲ್ಲ ಅಂತ ನಾವು ಜನರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಉಪೇಂದ್ರ.

ಒಂದು ಒಳ್ಳೆಯ ಸಿನಿಮಾ ನಂತರದ 5 ಸಿನಿಮಾಗಳಿಗೆ ಜನರನ್ನು ಕರೆದುಕೊಂಡು ಬರುತ್ತದೆ. ಆದರೆ ಅದೇ ಒಂದು ಕೆಟ್ಟ ಸಿನಿಮಾ ಮುಂದಿನ 5 ಒಳ್ಳೆಯ ಸಿನಿಮಾಗಳಿಗೆ ಜನರನ್ನು ತಡೆಯುತ್ತದೆ ಎಂದಿದ್ದಾರೆ. ಈ 5ರಲ್ಲಿ ಒಂದು ಒಳ್ಳೇಯ ಸಿನಿಮಾ ಬಂದರೂ ಆ ಸಿನಿಮಾ ಮಿಕ್ಕ 4 ಕೆಟ್ಟ ಚಿತ್ರಗಳಿಂದಾಗಿ ಅದು ಪ್ರೇಕ್ಷಕರಿಗೆ ತಲುಪಲು ಸಾಧ್ಯವಾಗದೇ ಇರಬಹುದು. ಜನರು ಒಳ್ಳೆಯ ಸಿನಿಮಾವನ್ನು ಕೈ ಹಿಡಿದಿದ್ದಾರೆ. ಜನರನ್ನು ದೂಷಿಸಬಾರದು' ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನು ಉಪೇಂದ್ರ ಅವರು ನಟಿಸಿ ನಿರ್ದೇಶಿಸಿದ್ದ ‘ಎ’ ಚಿತ್ರವನ್ನು ಮರು‌ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಮೇ 17ರಂದು ಈ ಸಿನಿಮಾ ಮರುಬಿಡುಗಡೆಯಾಗಲಿದೆ.

1998ರಲ್ಲಿ ರಿಲೀಸ್ ಆದ ‘ಎ’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೆಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

Tags:    

Similar News