ಶೂಟಿಂಗ್ ವೇಳೆ ನಟ ಶ್ರೀ ಮುರಳಿ ಕಾಲಿಗೆ ಪೆಟ್ಟು
ʻಬಘೀರʼ ಸಿನಿಮಾ ಶೂಟಿಂಗ್ ವೇಳೆ ಶ್ರೀ ಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.;
ʻಬಘೀರʼ ಸಿನಿಮಾ ಶೂಟಿಂಗ್ ವೇಳೆ ಶ್ರೀ ಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ʻಬಘೀರʼ ಚಿತ್ರದಲ್ಲಿ ಶ್ರೀ ಮುರಳಿ ನಟಿಸುತ್ತಿದ್ದು, ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀ ಮುರಳಿ ಕಳೆದ ಒಂದು ವರ್ಷದ ಹಿಂದಷ್ಟೇ 'ಬಘೀರ' ಸಿನಿಮಾದ ಶೂಟಿಂಗ್ ಮಾಡುವಾಗಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಇದೀಗ ಅದೇ ʻಬಘೀರʼ ಸಿನಿಮಾದ ಸ್ಟಂಟ್ ದೃಶ್ಯದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.
ಶೂಟಿಂಗ್ ವೇಳೆ ಎಡಗಾಲಿನ ಹಿಮ್ಮಡಿಗೆ ತೀವ್ರ ಪೆಟ್ಟಾಗಿದೆ. ನಿಲ್ಲಲೂ ಬಾರದ ಸ್ಥಿತಿಗೆ ಜಾರಿದ್ದ ಅವರನ್ನು ತಕ್ಷಣ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ವ್ಹೀಲ್ ಚೇರ್ ಮೇಲೆಯೇ ಕರೆತರಲಾಗಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಬಘೀರ ಸಿನಿಮಾ ಮೂಡಿಬರುತ್ತಿದೆ. ಡಾ. ಸೂರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಎ.ಜೆ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ. ಪ್ರಣವ್ ಶ್ರೀ ಪ್ರಸಾದ್ ಸಂಕಲನ ಇದೆ.
ಈ ಸಿನಿಮಾದಲ್ಲಿ ನಟ ಶ್ರೀಮುರಳಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ಜತೆಯಾಗಿದ್ದಾರೆ. ನಟ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಸೇರಿ ದೊಡ್ಡ ತಾರಾಗಣವೇ ಇದೆ.