ಅರಮನೆ ವೈಭವ: ಕಿರೀಟ ತೊಟ್ಟು ಸಂಭ್ರಮಿಸಿದ ಮತದಾರರು
'ಅರಮನೆ ಗತ ವೈಭವ' ಎಂಬ ಪರಿಕಲ್ಪನೆಯಲ್ಲಿ ಮತಗಟ್ಟೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಮತಗಟ್ಟೆಯಲ್ಲಿ ಸಿಬ್ಬಂದಿಗಳು ವಿಶೇಷ ಪೋಷಾಕು ತೊಟ್ಟು ಮತದಾನಕ್ಕೆ ಬರುವ ಜನರನ್ನು ಸ್ವಾಗತಿಸುತ್ತಿದ್ದಾರೆ.;
ಶಿವಮೊಗ್ಗ: ಮಂಗಳವಾರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಜನರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ವಿವಿಧ ರೀತಿಯಲ್ಲಿ ಸಿಂಗಾರ ಮಾಡಲಾಗಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಮತಗಟ್ಟೆ ಸಂಖ್ಯೆ 283ರಲ್ಲಿ
ಸ್ಥಾಪನೆ ಮಾಡಿರುವ ಮತಗಟ್ಟೆಯೊಂದು ಗಮನ ಸೆಳೆಯುತ್ತಿದೆ. ಈ ಮತಗಟ್ಟೆಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ಅರಮನೆ ಗತ ವೈಭವ' ಎಂಬ ಪರಿಕಲ್ಪನೆಯಲ್ಲಿ ಮತಗಟ್ಟೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಮತಗಟ್ಟೆಯಲ್ಲಿ ಸಿಬ್ಬಂದಿಗಳು ವಿಶೇಷ ಪೋಷಾಕು ತೊಟ್ಟು ಮತದಾನಕ್ಕೆ ಬರುವ ಜನರನ್ನು ಸ್ವಾಗತಿಸುತ್ತಿದ್ದಾರೆ.ಈ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದವರು ರಾಜರಂತೆ ಕಿರೀಟ ತೊಟ್ಟು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಕಲ್ಪನೆಯೊಂದಿಗೆ ಈ ಮತಗಟ್ಟೆಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಇಟ್ಟಿರುವ ಕುರ್ಚಿಯ ಮೇಲೆ 'ಮತದಾರ ಪ್ರಭು' ಎಂದು ಬರೆಯಲಾಗಿದೆ.
ಮತಗಟ್ಟೆಯಲ್ಲಿ ಸಿಬ್ಬಂದಿಗಳು ವಿಶೇಷ ಪೋಷಾಕು ತೊಟ್ಟು ಮತದಾನಕ್ಕೆ ಬರುವ ಜನರನ್ನು ಸ್ವಾಗತಿಸುತ್ತಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಅಭ್ಯರ್ಥಿಗಳು. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಈಶ್ವರಪ್ಪ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.