ಮಧ್ಯಪ್ರದೇಶ ಚುನಾವಣೆ ಸೋಲು: 150 ನಾಯಕರಿಗೆ ನೋಟಿಸ್

Update: 2024-02-05 06:30 GMT

ಭೋಪಾಲ್, ಜನವರಿ 20 (ಪಿಟಿಐ): ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 150 ಸ್ಥಳೀಯ ನಾಯಕರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ 150 ಸ್ಥಳೀಯ ನಾಯಕರಿಗೆ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. 

10 ದಿನಗಳಲ್ಲಿ ತೃಪ್ತಿಕರ ಉತ್ತರ ನೀಡದಿದ್ದರೆ ಪಕ್ಷದಿಂದ ಉಚ್ಚಾಟನೆ ಎದುರಿಸಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಮತ್ತು ಎಂಪಿಸಿಸಿ ಖಜಾಂಜಿ ಅಶೋಕ್ ಸಿಂಗ್ ಎಚ್ಚರಿಸಿದ್ದಾರೆ. ಶುಕ್ರವಾರ ರಾಜ್ಯ ಕಾಂಗ್ರೆಸ್ನ ಶಿಸ್ತು ಸಮಿತಿ ಸಭೆ ನಡೆಯಿತು. 

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಿಂಗಳ ನಂತರ ಸಭೆ ನಡೆದಿದ್ದು, ಆಂತರಿಕ ವ್ಯವಹಾರಗಳನ್ನು ಸರಿಪಡಿಸಿಕೊ ಳ್ಳುವ ನಿಟ್ಟಿನಲ್ಲಿ ಉಪಕ್ರಮ ಆರಂಭಗೊಂಡಿದೆ. ಸೋತ 164 ಅಭ್ಯರ್ಥಿಗಳು ತಮ್ಮ ವೈಫಲ್ಯಕ್ಕೆ ʻಆಂತರಿಕ ಒಳಸಂಚುʼ ಕಾರಣ ಎಂದು ದೂಷಿಸಿದ್ದಾರೆ. ತಿಂಗಳ ಆರಂಭದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪರಾಜಿತರು ಒತ್ತಾಯಿಸಿದ್ದರು. ನೋಟಿಸ್ ಪಡೆದವರಿಂದ ತೃಪ್ತಿಕರ ವಿವರಣೆ ಸಿಗದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಿತಿ ಹೇಳಿದೆ. 

ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 230 ರಲ್ಲಿ 163 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಅದರ ಶಾಸಕರ ಸಂಖ್ಯೆಯನ್ನು 66ಕ್ಕೆ ಇಳಿಸಿದೆ.

(ಪಿಟಿಐ)

Tags:    

Similar News