ಖರ್ಗೆ ನೆಲದಲ್ಲಿ ಮೋದಿ ಅಬ್ಬರ! ಏನಿದರ ಮರ್ಮ?

ಈ ಬಾರಿಯ ಲೋಕಸಭಾ ಚುನಾವಣೆಯನ್ನು ಇಂಡಿಯಾ ಒಕ್ಕೂಟದ ಪ್ರಮುಖರಾದ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಖರ್ಗೆ ಅವರ ತವರನ್ನೇ ಮೋದಿ ಏಕೆ ಆಯ್ಕೆ ಮಾಡಿದರು ಎಂಬದು ಪ್ರಮುಖ ಪ್ರಶ್ನೆ. ಯಾಕೆಂದರೆ, ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆ. ಆದರೂ, ಖರ್ಗೆ ಅವರು ತಮ್ಮ ಸ್ವಕ್ಷೇತ್ರದಿಂದ ಈ ಬಾರಿ ವಯಸ್ಸಿನ ಕಾರಣಕ್ವೊಕಾಗಿ ಮತ್ತು ಅಖಿಲ ಭಾರತ ಮಟ್ಟದಲ್ಲಿ ಇಂಡಿಯಾ ಮೈತ್ರಿ ಕೂಟವನ್ನು ಜತನವಾಗಿಸುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿಲ್ಲ ಎನ್ನಲಾಗಿದೆ.

Update: 2024-03-17 01:00 GMT

ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲು 'ಇಂಡಿಯಾ' ಒಕ್ಕೂಟದ ಪ್ರಮುಖರಾದ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಖರ್ಗೆ ಅವರ ತವರನ್ನೇ ಮೋದಿ ಏಕೆ ಆಯ್ಕೆ ಮಾಡಿದರು ಎಂಬುದು ಪ್ರಮುಖ ಪ್ರಶ್ನೆ.

ಯಾಕೆಂದರೆ, ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆ. ಆದರೂ, ಖರ್ಗೆ ಅವರು ತಮ್ಮ ಸ್ವಕ್ಷೇತ್ರದಿಂದ ಈ ಬಾರಿ ವಯಸ್ಸಿನ ಕಾರಣಕ್ಕಾಗಿ ಮತ್ತು ಅಖಿಲ ಭಾರತ ಮಟ್ಟದಲ್ಲಿ ಇಂಡಿಯಾ ಮೈತ್ರಿ ಕೂಟವನ್ನು ಜತನವಾಗಿಸುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿಲ್ಲ ಎನ್ನಲಾಗಿದೆ. ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕಗಳನ್ನು ಘೋಷಿಸುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಕಲಬುರಗಿ ಮೀಸಲು ಕ್ಷೇತ್ರದಿಂದಲೇ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ, ಖರ್ಗೆ 2024 ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಮತ್ತು ಐದನೇ ನ್ಯಾಯ್ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ.   

ಈ ಬಾರಿಯ ಲೋಕಸಭಾ ಚುನಾವಣೆಯನ್ನು  ಇಂಡಿಯಾ ಒಕ್ಕೂಟದ ಪ್ರಮುಖರಾದ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಖರ್ಗೆ ಅವರ ತವರನ್ನೇ ಮೋದಿ ಏಕೆ ಆಯ್ಕೆ ಮಾಡಿದರು ಎಂಬದು ಪ್ರಮುಖ ಪ್ರಶ್ನೆ.  ಯಾಕೆಂದರೆ, ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆ.   ಆದರೂ, ಖರ್ಗೆ ಅವರು ತಮ್ಮ  ಸ್ವಕ್ಷೇತ್ರದಿಂದ ಈ ಬಾರಿ ವಯಸ್ಸಿನ ಕಾರಣಕ್ವೊಕಾಗಿ ಮತ್ತು ಅಖಿಲ ಭಾರತ ಮಟ್ಟದಲ್ಲಿ ಇಂಡಿಯಾ ಮೈತ್ರಿ ಕೂಟವನ್ನು ಜತನವಾಗಿಸುವ ಉದ್ದೇಶದಿಂದ  ಸ್ಪರ್ಧೆ ಮಾಡುತ್ತಿಲ್ಲ ಎನ್ನಲಾಗಿದೆ. 

ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ತಮ್ಮ ಚೊಚ್ಚಲ ಚುನಾವಣಾ ಪ್ರಚಾರದ ಭಾಷಣದಲ್ಲಿ ಮೋದಿಯವರಯ  ಖರ್ಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿರುವುದನ್ನು ಪ್ರಶ್ನೆ ಮಾಡಿದ್ದಾರೆ.



ಅದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿದ್ದೇ ಇರಬಹುದು. ಆದರೆ, ವಿಶ್ಲೇಷಕರ ಪ್ರಕಾರ  ಮೋದಿ ಅಬ್ಬರದ ಪ್ರಚಾರದಿಂದಾಗಿ ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಜಯ ಸಿಕ್ಕುಬಿಡುತ್ತದೆ ಎನ್ನುವ ಪರಿಸ್ಥಿತಿ ಸಧ್ಯಕ್ಕಂತೂ  ಕಲಬುರಗಿಯಲ್ಲಿ ಕಾಣುತ್ತಿಲ್ಲ.  ಯಾಕೆಂದರೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಜನಸಂಖ್ಯೆ ಹೆಚ್ಚಿದೆ.  ಅದರಲ್ಲಿ ಎಡಪಂಥವಾಗಿರುವ ಮಾದಿಗ ಸಮುದಾಯದಲ್ಲಿ ಹೆಚ್ಚು ಮತದಾರರು ಇದ್ದಾರೆ ಹಾಗೂ ಅವರ ಮತಗಳು ನಿರ್ಣಾಯಕವೂ ಹೌದು.  2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಸೇರಿದಂತೆ ಹಲವೆಡೆ ಬಿಜೆಪಿ ಕಳಪೆ ಪ್ರದರ್ಶನ ನೀಡಿತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡಿರುವ ಪ್ರಧಾನಿ ಮೋದಿ ಸ್ವತಃ ಕಲಬುರಗಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. .

ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿದ್ದೇ ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ. ಖರ್ಗೆ ಅವರೂ ತಾವು ಸ್ಪರ್ಧಿಸುವ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಖರ್ಗೆ ಅವರು ಪಕ್ಷದ ಅಧ್ಯಕ್ಷ ಹುದ್ದೆಯ ಮಹತ್ವದ ಜವಾಬ್ದಾರಿಯ ಜೊತೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ‘ದ ಅಧ್ಯಕ್ಷರೂ ಆಗಿರುವುದರಿಂದ  ಸಮನ್ವಯ ಸಾಧಿಸಬೇಕಿದೆ. ಹೀಗಾಗಿ, ಅವರು ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರಲ್ಲಿಯೇ ಅನುಮಾನಗಳು ವ್ಯಕ್ತವಾಗಿವೆ. ಈ ಬಾರಿ ಸ್ಪರ್ಧಿಸಬೇಕು ಎಂದು ಹಲವು ಮುಖಂಡರು ಭೇಟಿಯಾಗಿ ಖರ್ಗೆ ಅವರಿಗೆ ಮನವಿ ಮಾಡಿದ್ದರೂ, ಇನ್ನೂ ಖಚಿತ ಭರವಸೆ  ಸಿಕ್ಕಿಲ್ಲ.

ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕಲಬುರಗಿ ಕ್ಷೇತ್ರದಲ್ಲಿ  ಅಬ್ಬರದ ಪ್ರಚಾರ ನಡೆಸಿದ್ದರು. ಈ ಬಾರಿಯೂ ರೋಡ್ ಶೋ, ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದ್ದಾರೆ. ಮತ್ತೊಂದೆಡೆ, ಹಾಲಿ ಸಂಸದ ಉಮೇಶ್‌ ಜಾಧವ್‌ ಅವರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಖರ್ಗೆ ಅವರು ಈ ಬಾರಿಯೂ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲುವು ಕಠಿಣವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪುತ್ರನಿಂದಲೇ ಖರ್ಗೆ ಚುನಾವಣಾ ರಾಜಕೀಯ ಅಂತ್ಯವಾಯಿತೇ?

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರು ಒಂದು ಕಾಲದಲ್ಲಿ ಅವರ ಶಿಷ್ಯರಾಗಿದ್ದ ಡಾ. ಉಮೇಶ ಜಾಧವ ಅವರ ಎದುರು ಭಾರಿ ಮತಗಳ ಅಂತರದಿಂದ ಸೋಲುಂಡರು. ಈ ಘಟನೆಗೆ ಖರ್ಗೇ  ಅವರ ಪುತ್ರನೇ ಕಾರಣ’ ಎಂಬ ವಿಚಾರ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿಯಲ್ಲಿ  ಪ್ರಸ್ತಾಪವಾಗಿತ್ತು ಎನ್ನಲಾಗಿದೆ. 2019 ರ ಲೋಕಸಭಾ ಚುನಾವಣೆ ಬಳಿಕ ಹಿರಿಯ ಮುಖಂಡ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣಗಳ ಬಗ್ಗೆ ಅಧ್ಯಯನ ನಡೆಸಲು ‘ಸತ್ಯ ಶೋಧನಾ ಸಮಿತಿ’ ರಚಿಸಿತ್ತು.

ಆ ವರದಿ ಪ್ರಕಾರ, "ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಶರಣ ಪ್ರಕಾಶ ಪಾಟೀಲ ಪ್ರಮುಖ ಕಾರಣಕರ್ತರು. ಈ ಇಬ್ಬರು ನಾಯಕರು ಪಕ್ಷದ ಇತರ  ಹಿರಿಯ ಮುಖಂಡರನ್ನು ತಾತ್ಸಾರದಿಂದ ನೋಡಿದ್ದು; ಪಕ್ಷದ ನಾಯಕರು, ಕಾರ್ಯಕರ್ತರ ಜತೆಗೆ ಸರಿಯಾಗಿ ನಡೆದುಕೊಳ್ಳದಿರುವುದು ಚುನಾವಣೆ ಮೇಲೆ ಪರಿಣಾಮ ಬೀರಿದೆ. ಚಿಕ್ಕವರ ʼದರ್ಬಾರ್ʼ ಪಕ್ಷದ ಹಿರಿಯ ಮುಖಂಡರನ್ನು ಕೆರಳಿಸುವಂತೆ ಮಾಡಿತ್ತು. ಕೆಲ ನಾಯಕರ ವರ್ತನೆಯಿಂದಾಗಿಯೇ ಸೋಲಾಗಿದೆ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ" ಎಂದು ಹೇಳಲಾಗಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಉಮೇಶ್ ಜಾಧವ್ ಅವರು, ಖರ್ಗೆ ಅವರನ್ನು 95,452 ಮತಗಳಿಂದ ಸೋಲಿಸಿದ್ದರು. ಸೋಲಿಲ್ಲದ ಸರದಾರ ಎಂದು ಜನಪ್ರಿಯವಾಗಿ ಕರೆಯಲ್ಪಡುವ (ಸೋಲದ ನಾಯಕ), ಇದು ಹಲವಾರು ದಶಕಗಳ ಕಾಲದ ಖರ್ಗೆಯವರ ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಸೋಲಾಗಿತ್ತು.

ಚುನಾವಣೆಗೂ ಮುನ್ನ ಜಾಧವ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಗುಲ್ಬರ್ಗದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಒಂಬತ್ತು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಖರ್ಗೆ ಅವರಿಗೆ 2019 ರ ಚುನಾವಣೆ ಕಠಿಣವೆಂದು ಪರಿಗಣಿಸಲಾಗಿತ್ತು, ಈ ಪ್ರದೇಶದಿಂದ ಕಾಂಗ್ರೆಸ್‌ನ ಹಲವಾರು ಹಿರಿಯ ನಾಯಕರಾದ ಬಾಬುರಾವ್ ಚಿಂಚನಸೂರ್, ಎ ಬಿ ಮಾಲಕ ರೆಡ್ಡಿ ಮತ್ತು ಮಾಲೀಕಯ್ಯ ಗುತ್ತೇದಾರ್ ಅವರು ಪಕ್ಷ ತೊರೆದು ಬಿಜೆಪಿ ಸೇರಿದ್ದರು.

ಚುನಾವಣಾ ರಾಜಕೀಯದಲ್ಲಿ ಸೋಲು ಕಂಡ ಬಳಿಕ ದೃತಿಗೆಡದ ಖರ್ಗೆ ಅವರು, ಆ ಸೋಲನ್ನು ಸವಾಲಾಗಿ ಸ್ವೀಕರಿಸಿದರು. ಮುಂದೆ ಜೂನ್ 2020ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ರಾಜ್ಯಸಭೆಯಲ್ಲಿ 17 ನೇ ವಿರೋಧ ಪಕ್ಷದ ನಾಯಕರಾಗಿದ್ದಾರೆ. INDIA ಬ್ಲಾಕ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ತಮ್ಮ ಪಾರುಪತ್ಯವನ್ನು ಸಾರಿದ್ದರು. 

ಅಲ್ಲದೆ, ಅವರಿಗೆ ರಾಜ್ಯಸಭೆಯಲ್ಲಿ ಇನ್ನೂ ನಾಲ್ಕು ವರ್ಷಗಳ ಅವಧಿ ಉಳಿದಿದೆ,  ಜತೆಗೆ ಖರ್ಗೆ ಪುತ್ರ, ಪ್ರಿಯಾಂಕ್  ಖರ್ಗೆ ಚಿತ್ತಾಪುರ  ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಕಾರಣ ರಾಷ್ಟ್ರರಾಜಕಾರಣದಲ್ಲಿ ಅವರಿಗೆ ಆಸಕ್ತಿಯಿಲ್ಲಎಂದು ತಿಳಿದು ಬಂದಿದೆ. ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನೂ ನಿರ್ವಹಿಸುತ್ತಿರುವ ಉದ್ಯಮಿ ದೊಡ್ಡಮನಿ ಕಲಬುರಗಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರೊಂದಿಗೆ ಸಮಾಲೋಚಿಸಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು  ಮಲ್ಲಿಕಾರ್ಜು ಖರ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಖರ್ಗೆ ರಾಜಕೀಯ ಪಯಣ:-

ಮಲ್ಲಿಕಾರ್ಜುನ ಖರ್ಗೆ ಅವರ ಕಳೆದ ಐದು ದಶಕಗಳ ಕಾಲದ ರಾಜಕೀಯ ಜೀವನದಲ್ಲಿ, ಅವರು ಸಚಿವರಾಗಿ ನಿರ್ವಹಿಸಿದ ಸಚಿವಾಲಯಗಳನ್ನು ದಕ್ಷತೆಯಿಂದ ನಿರ್ವಹಿಸಿದ್ದರು.  ರಾಜಕೀಯ ಮತ್ತು ಅಧಿಕಾರದ ಉಬ್ಬರ ಮತ್ತು ಹರಿವಿನ ಹೊರತಾಗಿಯೂ ಗಾಂಧಿ ಕುಟುಂಬದ ನಿಷ್ಟರಾಗಿ ಉಳಿದರು.

ಕಾವೇರಿ ನದಿ ನೀರಿನ ವಿವಾದವಿರಲಿ ಅಥವಾ ಕನ್ನಡದ ಖ್ಯಾತ ನಟ ದಿವಂಗತ ರಾಜಕುಮಾರ್ ಅವರ ಅಪಹರಣವಾಗಲಿ, ದಶಕಗಳ ಹಿಂದೆ ಕರ್ನಾಟಕದ ಗೃಹ ಸಚಿವರಾಗಿ ಇಂತಹ ಬಿಕ್ಕಟ್ಟಿನ ಸಂದರ್ಭಗಳನ್ನು ನಿಭಾಯಿಸಿದ್ದಾರೆ. ಖರ್ಗೆಯವರ ಸಾರ್ವಜನಿಕ ಜೀವನವು ಅವರ ತವರು ಜಿಲ್ಲೆ ಗುಲ್ಬರ್ಗಾ, ಈಗಿನ ಕಲಬುರಗಿಯಲ್ಲಿ ಒಕ್ಕೂಟದ ನಾಯಕರಾಗಿ ಪ್ರಾರಂಭವಾಯಿತು. ಅವರು 1969 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಗುಲ್ಬರ್ಗ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

80 ವರ್ಷದ ಈ ನಾಯಕ ದಶಕಗಳಿಂದ ಚುನಾವಣಾ ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್, ಮರಾಠಿ, ಉರ್ದು ಭಾಷೆಗಳಲ್ಲಿ ಅವರ ಪ್ರಾವೀಣ್ಯತೆಯಿಂದಾಗಿ ಉತ್ತರ ಭಾರತದ ರಾಜಕಾರಣದಲ್ಲೂ ಅವರು ಪ್ರಭಾವಿಯಾಗಿ ಬೆಳೆದಿದ್ದಾರೆ.  ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿರುವ ಖರ್ಗೆ ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಖರ್ಗೆ ಅವರು 2014 ರಿಂದ 2019 ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು.

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ಇದ್ದಾಗಲೂ ಅವರಿಗೆ ಎಂದಿಗೂ ಆ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗಲೇ ಇಲ್ಲ. ಎಸ್ ನಿಜಲಿಂಗಪ್ಪ ನಂತರ ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಎರಡನೇ ಅಧ್ಯಕ್ಷರಾಗಿದ್ದಾರೆ ಮತ್ತು ಜಗಜೀವನ್ ರಾಮ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರಾಗಿದ್ದಾರೆ. ಸಂಸತ್ತಿನ್ನಲ್ಲಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು  ಸಮರ್ಥವಾಗಿ ಟೀಕಿಸುತ್ತಲೇ ವಿರೋಧ ಪಕ್ಷದ ನಾಯಕತ್ವಕ್ಕೆ ಜೀವ ತುಂಬಿದವರೂ ಖರ್ಗೆಯವರೇ.


2014 ರ ಲೋಕಸಭಾ ಚುನಾವಣೆಯಲ್ಲಿ, ಅವರು ಕರ್ನಾಟಕ, ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೀಸಿದ ನರೇಂದ್ರ ಮೋದಿ ಅಲೆಯನ್ನು ಬಗ್ಗುಬಡಿದು, ಕಲಬುರಗಿಯಿಂದ 74,000 ಮತಗಳ ಅಂತರದಿಂದ ಗೆದ್ದರು. ಗುರುಮಿಠ್ಕಲ್‌  ಕ್ಷೇತ್ರ ದಿಂದ ಒಂಬತ್ತು ಬಾರಿ ಶಾಸಕರಾಗಿದ್ದ ಖರ್ಗೆ ಅವರು 2009 ರಲ್ಲಿ ರಾಷ್ಟ್ರೀಯ ರಾಜಕೀಯದತ್ತ ಹೆಜ್ಜೆ ಹಾಕಿದರು. ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರು. ಮೂರನೇ ಬಾರಿಗೆ 2019 ರಲ್ಲಿ ಸ್ಪರ್ಧಿಸಿ ಸೋಲುಕಂಡಿದ್ದರು.


Tags: