Loksabha Election 2024 | ಪ್ರೆಶರ್‌ ಕುಕರ್‌ ಕಂಪೆನಿಗೆ ಐಟಿ ನೋಟಿಸ್

ರಾಮನಗರ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಷರ್ ಕುಕ್ಕರ್ ತಯಾರಿಕಾ ಕಂಪನಿಯೊಂದಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ

Update: 2024-03-31 11:59 GMT

ಬೆಂಗಳೂರು: ಚುನಾವಣಾ ಹೊಸ್ತಿಲಲ್ಲಿ ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆ ಗಟ್ಟಲು ಅಧಿಕಾರಿಗಳು ಮುಂದಾಗಿದ್ದು, ರಾಜಕಾರಣಿಗಳಿಗೆ ಪ್ರೆಷರ್ ಕುಕ್ಕರ್ ಪೂರೈಸಿರುವ ಅನುಮಾನದ ಮೇಲೆ ಪ್ರೆಶರ್‌ ಕುಕರ್‌ ಕಂಪೆನಿಯೊಂದಕ್ಕೆ ಐಟಿ ಅಧಿಕಾರಿಗಳು ಸೋಟಿಸ್‌ ಜಾರಿ ಮಾಡಿದ್ದಾರೆ.

ರಾಮನಗರ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಷರ್ ಕುಕ್ಕರ್ ತಯಾರಿಕಾ ಕಂಪನಿಯೊಂದಕ್ಕೆ ನೋಟಿಸ್‌ ಜಾರಿ ಮಾಡಲಾಗಿದ್ದು, ಕೆಲವು ತಿಂಗಳಿಂದ ತಯಾರಿಸಿರುವ ಕುಕ್ಕರ್‌ಗಳ ಸಂಖ್ಯೆ, ಹಾಗೂ ಸಗಟು ಖರೀದಿದಾರರ ವಿವರ ಒದಗಿಸುವಂತೆ ಐ.ಟಿ ಅಧಿಕಾರಿಗಳು ಕಂಪೆನಿಗೆ ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕಂಪೆನಿಗೆ ಏಳು ದಾಸ್ತಾನು ಕೇಂದ್ರಗಳಿವೆ ಎಂದು ತಿಳಿದು ಬಂದಿದ್ದು, ಆದಾಯ ತೆರಿಗೆ ಇಲಾಖೆಯ ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆಯೂ ಕಂಪೆನಿ ಮಾಲೀಕರಿಗೆ ಸೂಚಿಸಲಾಗಿದೆ.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಡಿ.ಕೆ.ಸುರೇಶ್ ಅವರ ಪರವಾಗಿ ಡಿಸಿಎಂ ಡಿಕೆ. ಶಿವಕುಮಾ‌ರ್ ಮತದಾರರಿಗೆ ಕುಕ್ಕ‌ರ್ ಹಂಚುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಇತ್ತೀಚೆಗೆ ಆರೋಪಿಸಿದ್ದರು. ಅಲ್ಲದೆ, ಕ್ರಮಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.

ಕುಮಾರಸ್ವಾಮಿ ಅವರ ಆರೋಪದ ಬೆನ್ನಲ್ಲೇ ಐಟಿ ಅಧಿಕಾರಿಗಳು ಕುಕ್ಕರ್‌ ಕಂಪನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Tags:    

Similar News