ಲೋಕಸಭೆ ಚುನಾವಣೆ: ವೇಳಾಪಟ್ಟಿ ಇಂದು ಪ್ರಕಟ
ಶನಿವಾರ ಅಪರಾಹ್ನದಿಂದಲೇ ನೀತಿ ಸಂಹಿತೆ ಜಾರಿ;
By : The Federal
Update: 2024-03-15 07:43 GMT
ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಶನಿವಾರ (ಮಾರ್ಚ್ 16) ಪ್ರಕಟಿಸಲಿದೆ. ಈ ಬಗ್ಗೆ ಚುನಾವಣಾ ಸಮಿತಿಯು ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದು, ʼʼಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಶನಿವಾರ ಅಪರಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದೇವೆʼʼ ಎಂದು ಹೇಳಿದೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸದನ ರಚನೆಯಾಗಬೇಕಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಯಿತು ಮತ್ತು ಏಪ್ರಿಲ್ 11 ರಿಂದ ಏಳು ಹಂತಗಳಲ್ಲಿ ನಡೆಸಲಾಯಿತು. ಮತಗಳನ್ನು ಮೇ 23 ರಂದು ಎಣಿಕೆ ಮಾಡಲಾಯಿತು.
ನಾಳೆ ಅಪರಾಹ್ನ ದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.