Loksabha Election 2024 | ಮೊದಲ ಹಂತ: ಕ್ಷೇತ್ರ 14, ನಾಮಪತ್ರ 358

ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದ ಏ.4 ರವರೆಗೆ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Update: 2024-04-05 09:42 GMT

ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಏ.4ರ ಗುರುವಾರ ಮುಕ್ತಾಯವಾಗಿದೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಒಟ್ಟು 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಪೈಕಿ 25 ಮಹಿಳಾ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿರುವುದು ವಿಶೇಷ .

ಕೊನೆಯ ದಿನವಾದ ಗುರುವಾರ ಒಂದೇ ದಿನ 183 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿರುವ ಒಟ್ಟು ಅಭ್ಯರ್ಥಿಗಳಲ್ಲಿ 211 ಪಕ್ಷೇತರ ಅಭ್ಯರ್ಥಿಗಳಾಗಿದ್ದು, 161 ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ.

ಏ.5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂತಿಮಗೊಂಡ ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ಪ್ರಕಟಣೆ ಮಾಡಲಾಗುತ್ತದೆ. ಏ. 8 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಅಂದು ಸಂಜೆಯ ಹೊತ್ತಿಗೆ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿರುವವರು ಯಾರು? ಎಂಬ ಚಿತ್ರಣ ಸಿಗಲಿದೆ. ಏ. 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಜೂನ್‌ 4 ರಂದು ಮತ ಎಣಿಕೆ ನಡೆಯಲಿದೆ.

ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳು

1) ಉಡುಪಿ-ಚಿಕ್ಕಮಗಳೂರು

ಬಿಜೆಪಿ - ಕೋಟಾ ಶ್ರೀನಿವಾಸ್‌ ಪೂಜಾರಿ

ಕಾಂಗ್ರೆಸ್‌ - ಜಯಪ್ರಕಾಶ್‌ ಹೆಗ್ಡೆ

2) ಹಾಸನ

ಜೆಡಿಎಸ್‌ - ಪ್ರಜ್ವಲ್‌ ರೇವಣ್ಣ

ಕಾಂಗ್ರೆಸ್‌ - ಶ್ರೇಯಸ್‌ ಪಟೇಲ್‌

3) ದಕ್ಷಿಣ ಕನ್ನಡ

ಕಾಂಗ್ರೆಸ್‌ - ಪದ್ಮರಾಜ್‌ ರಾಮಯ್ಯ

ಬಿಜೆಪಿ - ಬ್ರಿಜೇಶ್‌ ಚೌಟ

4) ಚಿತ್ರದುರ್ಗ

ಕಾಂಗ್ರೆಸ್ - ಬಿ.ಎನ್‌ ಚಂದ್ರಪ್ಪ

ಬಿಜೆಪಿ - ಗೋವಿಂದ ಕಾರಜೋಳ

5) ತುಮಕೂರು

ಬಿಜೆಪಿ - ವಿ. ಸೋಮಣ್ಣ

ಕಾಂಗ್ರೆಸ್‌ - ಮುದ್ದಹನುಮೇಗೌಡ

6) ಮಂಡ್ಯ

ಜೆಡಿಎಸ್‌- ಎಚ್‌ ಡಿ ಕುಮಾರಸ್ವಾಮಿ

ಕಾಂಗ್ರೆಸ್‌ - ವೆಂಕಟರಮಣ ಗೌಡ (ಸ್ಟಾರ್ ಚಂದ್ರು)

7) ಮೈಸೂರು

ಬಿಜೆಪಿ - ಯದುವೀರ್ ಒಡೆಯರ್

ಕಾಂಗ್ರೆಸ್‌ - ಎಂ. ಲಕ್ಷಣ್‌

8) ಚಾಮರಾಜನಗರ

ಕಾಂಗ್ರೆಸ್‌ - ಸುನಿಲ್‌ ಬೋಸ್‌

ಬಿಜೆಪಿ – ಎಸ್.‌ ಬಾಲರಾಜ್

ಬಿಎಸ್‌ ಪಿ - ಎಂ. ಕೃಷ್ಣಮೂರ್ತಿ

9)‌ ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್‌ - ಡಿಕೆ ಸುರೇಶ್‌

ಬಿಜೆಪಿ - ಡಾ. ಸಿ ಎನ್ ಮಂಜುನಾಥ್‌

10) ಬೆಂಗಳೂರು ಉತ್ತರ

ಕಾಂಗ್ರೆಸ್‌ - ಪ್ರೊ. ಎಂ.ವಿ ರಾಜೀವ್‌ ಗೌಡ

ಬಿಜೆಪಿ -‌ ಶೋಭಾ ಕರಂದ್ಲಾಜೆ

11) ಬೆಂಗಳೂರು ಸೆಂಟ್ರಲ್‌

ಕಾಂಗ್ರೆಸ್‌ - ಮನ್ಸೂರ್‌ ಖಾನ್‌

ಬಿಜೆಪಿ – ಪಿ ಸಿ ಮೋಹನ್‌

12) ಬೆಂಗಳೂರು ದಕ್ಷಿಣ

ಕಾಂಗ್ರೆಸ್‌ - ಸೌಮ್ಯಾ ರೆಡ್ಡಿ

ಬಿಜೆಪಿ - ತೇಜಸ್ವಿ ಸೂರ್ಯ

13) ಚಿಕ್ಕಬಳ್ಳಾಪುರ

ಕಾಂಗ್ರೆಸ್‌ - ರಕ್ಷಾ ರಾಮಯ್ಯ

ಬಿಜೆಪಿ - ಡಾ. ಕೆ ಸುಧಾಕರ್‌

14) ಕೋಲಾರ

ಕಾಂಗ್ರೆಸ್‌ - ಕೆ.ವಿ ಗೌತಮ್‌

ಜೆಡಿಎಸ್‌ - ಎಂ. ಮಲ್ಲೇಶ್‌ ಬಾಬು

Tags:    

Similar News