Loksabha Election 2024 | ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿ ಬಿಡಗಡೆ

Update: 2024-04-01 04:27 GMT

ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಣಬಿಸುಲಿನ ನಡುವೆಯೇ ಅಭ್ಯರ್ಥಿಗಳು ಪ್ರಚಾರಕ್ಕೆ ಚಾಲನೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಮುಖ ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರೊಂದಿಗೆ ಮತಬೇಟಿಗೆ ಸಿದ್ದುಗೊಂಡಿವೆ. ಅಬ್ಬರದ ಪ್ರಚಾರದ ಮೂಲಕ ಮತದಾರರ ಮನಗೆಲ್ಲುವ ಉದ್ದೇಶದಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಲೋಕಸಭಾ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಅನೇಕ ರಾಜ್ಯ ನಾಯಕರ ಹೆಸರಿದೆ.

ರಾಜ್ಯ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ವೀರಪ್ಪ ಮೊಯ್ಲಿ, ಬಿವಿ ಶ್ರೀನಿವಾಸ್, ಲಕ್ಷ್ಮಣ ಸವದಿ, ಈಶ್ವರ್ ಖಂಡ್ರೆ, ವಿನಯಕುಮಾರ್ ಸೊರಕೆ, ಬಿಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಡಾ.ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಎಂಬಿ ಪಾಟೀಲ್ ಹೆಸರು ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದೆ.

ಇನ್ನು, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಚ್ ಎಂ ರೇವಣ್ಣ, ಪಿಜಿ ಆರ್ ಸಿಂಧ್ಯಾ, ಬಿ ಸೋಮಶೇಖರ್, ಎಲ್ ಹನುಮಂತಯ್ಯ, ಜಿಸಿ ಚಂದ್ರಶೇಖರ, ಸೈಯದ್ ನಾಸಿರ್ ಹುಸೇನ್, ಅಭಿಷೇಕ್ ದತ್, ಜಮೀರ್ ಅಹಮದ್ ಖಾನ್, ಮಧು ಬಂಗಾರಪ್ಪ, ಪಿಟಿ ಪರಮೇಶ್ವರ್ ನಾಯಕ್, ವಿ ಎಸ್ ಉಗ್ರಪ್ಪ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಪುಷ್ಪಾ ಅಮರನಾಥ್, ಉಮಾಶ್ರೀ, ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Tags:    

Similar News