ಪಂಜಾಬಿನಲ್ಲಿ ಎಎಪಿ ಏಕಾಂಗಿ ಹೋರಾಟ: ಭಗವಂತ ಮಾನ್

Update: 2024-02-05 06:30 GMT

ಚಂಡೀಗಢ, ಜ 24 : ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆಪ್ ಎಲ್ಲ 13 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಕ್ಷ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ ದಿನವೇ ಮಾನ್ ಅವರ ಹೇಳಿಕೆ ಬಂದಿದೆ.

ಆಪ್ 28 ಪಕ್ಷಗಳ ಇಂಡಿಯಾ ಒಕ್ಕೂಟದ ಭಾಗವಾಗಿದೆ. ದೆಹಲಿ, ಪಂಜಾಬ್, ಹರಿಯಾಣ, ಗೋವಾ ಮತ್ತು ಗುಜರಾತ್ನಲ್ಲಿ ಸೀಟು ಹಂಚಿಕೆ ಕುರಿತು ಎಎಪಿ ಮತ್ತು ಕಾಂಗ್ರೆಸ್ ಮಾತುಕತೆ ನಡೆಯುತ್ತಿರುವಾಗಲೇ, ಪಂಜಾಬ್ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. ಆದರೆ, ಚಂಡೀಗಢ ಮೇಯರ್ ಚುನಾವಣೆಗೆ ಎಎಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ.

ಕಾಂಗ್ರೆಸ್ ಜೊತೆಗೆ ಮೈತ್ರಿ ಕುರಿತು, ʻಲೋಕಸಭೆ ಚುನಾವಣೆಯಲ್ಲಿ ಎಎಪಿ 13-0 ಅಂತರದಲ್ಲಿ ಗೆಲ್ಲುತ್ತದೆ. ನಾವು ಅವರೊಂದಿಗೆ (ಕಾಂಗ್ರೆಸ್) ಹೋಗುತ್ತಿಲ್ಲ. 13 ಲೋಕಸಭಾ ಸ್ಥಾನಗಳಿಗೆ 40 ಸಂಭಾವ್ಯರ ಹೆಸರುಗಳು ಬಂದಿವೆ. ಒಂದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಅಭ್ಯರ್ಥಿ ಗಳಿದ್ದಾರೆ. ಅಭ್ಯರ್ಥಿಗಳ ಗೆಲುವೇ ಮಾನದಂಡʼ ಎಂದರು.

ಮಾನ್ ಮತ್ತು ಹಲವಾರು ಎಎಪಿ ನಾಯಕರು ಕಾಂಗ್ರೆಸ್ ಜೊತೆಗೆ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ.

(ಪಿಟಿಐ)

Tags:    

Similar News