Tirupati Temple: ತಿರುಪತಿಯ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಅನಾಹುತ
Tirupati Temple: ಈ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರುವ ದೋಷದಿಂದಾಗಿ 47ನೇ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸಿಬ್ಬಂದಿ ಬೆಂಕಿಯನ್ನು ತಕ್ಷಣವೇ ನಂದಿಸಿದ್ದಾರೆ. ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ಟೋಕನ್ ವಿತರಣೆ ವೇಳೆ ಉಂಟಾದ ಕಾಲ್ತುಗಳಿ ಪ್ರಕರಣದ ಇನ್ನೂ ಸ್ಮರಣೆಯಲ್ಲಿ ಇರುವ ನಡುವೆಯೇ ತಿರುಪತಿ ದೇವಾಲಯದಲ್ಲಿ ಬೆಂಕಿ ಅನಾಹುತವೊಂದು ಸಂಭವಿಸಿದೆ. ವೆಂಕಟೇಶ್ವರ ಸ್ವಾಮಿ ದೇವಾಲಯದ ಲಡ್ಡು ಕೌಂಟರ್‌ಗಳಲ್ಲಿ ಒಂದರಲ್ಲಿ ಸೋಮವಾರ (ಜನವರಿ 13) ಸಂಭವಿಸಿದ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡು ಆತಂಕ ಉಂಟು ಮಾಡಿತು.
ಬೆಂಕಿ ಜ್ವಾಲೆ ಕಾಣಿಸಿಕೊಂಡ ತಕ್ಷಣ ಅಲ್ಲಿದ್ದ ಸಿಬ್ಬಂದಿ ಅದನ್ನು ತಕ್ಷಣವೇ ಗಮನಿಸಿ ಅದನ್ನು ನಂದಿಸಿದರು. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ.
ವರದಿಗಳ ಪ್ರಕಾರ, ಈ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರುವ ದೋಷದಿಂದಾಗಿ 47ನೇ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸಿಬ್ಬಂದಿ ಬೆಂಕಿಯನ್ನು ತಕ್ಷಣವೇ ನಂದಿಸಿದ್ದಾರೆ. ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿಯಲ್ಲಿ ಸರ್ವ ದರ್ಶನ ಟೋಕನ್ ವಿತರಣೆ ವೇಳೆ ಕಾಲ್ತುಳಿತ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದರು. ಅಲ್ಲದೆ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ದೊಡ್ಡ ವಿವಾದ ಉಂಟಾಗಿದೆ.
ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಆರೋಪಗಳು ಕೇಳಿ ಬಂದಿವೆ. ಸರ್ಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ. ವಿರೋಧ ಪಕ್ಷಗಳು ಆಡಳಿತಾರೂಢ ಮೈತ್ರಿ ಸರ್ಕಾರವನ್ನು ಟೀಕಿಸಿವೆ.