'ನಿರಂಕುಶಾಧಿಕಾರಿ' ಜೊತೆ ಇರಲು ಬಯಸುತ್ತೀರಾ: ಸಂಜಯ್ ರಾವತ್

ಬಿಜೆಪಿ ಸರಳ ಬಹುಮತ ಗಳಿಸಲು ವಿಫಲವಾದ ಕಾರಣ ಮೋದಿ ತಮ್ಮ ನೈತಿಕ ಸೋಲು ಒಪ್ಪಿಕೊಳ್ಳಬೇಕು ಎಂದು ರಾವತ್‌ ಆಗ್ರಹಿಸಿದ್ದಾರೆ.

Update: 2024-06-05 12:59 GMT

ಪ್ರಧಾನಿ ನರೇಂದ್ರ ಮೋದಿಯಂತಹ ʻನಿರಂಕುಶಾಧಿಕಾರಿʼ ಯೊಂದಿಗೆ ಇರಲು ಬಯಸುತ್ತೀರಾ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಅವರನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ಅವರು ಬುಧವಾರ ಪ್ರಶ್ನಿಸಿದ್ದಾರೆ.

ʻನಾಯ್ಡು ಮತ್ತು ನಿತೀಶ್ ಕುಮಾರ್ ಅವರು ನಿರಂಕುಶಾಧಿಕಾರಿಯೊಂದಿಗೆ ಹೋಗಬೇಕೇ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕೇ ಎಂದು ನಿರ್ಧರಿಸಬೇಕು. ಅವರು ನಿರಂಕುಶಾಧಿಕಾರಿಯೊಂದಿಗೆ ಹೋಗುತ್ತಾರೆ ಎಂದು ನಾನು ಭಾವಿಸುವುದಿಲ್ಲ,ʼ ಎಂದು ರಾವತ್ ನವದೆಹಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ʻಮೋದಿಜಿ ಮೂರನೇ ಅವಧಿಗೆ ಸರ್ಕಾರ ರಚಿಸುತ್ತಿಲ್ಲ,ʼ ಎಂದು ಅವರು ದೆಹಲಿಯಲ್ಲಿ ನಡೆದ ಇಂಡಿಯ ಒಕ್ಕೂಟದ ನಾಯಕರ ಸಭೆಗೆ ಸ್ವಲ್ಪ ಹೇಳಿದರು.

ʻಬಿಜೆಪಿ ಸರಳ ಬಹುಮತ ಗಳಿಸಲು ವಿಫಲವಾಗಿರುವುದರಿಂದ, ಮೋದಿ ಅವರು ನೈತಿಕ ಸೋಲನ್ನು ಒಪ್ಪಿಕೊಳ್ಳಬೇಕು. ಮೋದಿ ಬ್ರ್ಯಾಂಡ್ ಈಗ ಮುಗಿದಿದೆ,ʼ ಎಂದು ಹೇಳಿದರು.

ʻಬಿಜೆಪಿಗೆ ಎಲ್ಲಿ ಬಹುಮತವಿದೆ? ಅವರು ಈಗ ಮೈತ್ರಿಗೆ ಪ್ರಯತ್ನಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಲ್ಲರ ಸ್ನೇಹಿತರು. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟುಮಾಡುವವರನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ,ʼ ಎಂದು ಹೇಳಿದರು.

ʻಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂಡಿಯ ಒಕ್ಕೂಟದ ಸರ್ಕಾರವನ್ನು ಮುನ್ನಡೆಸಲು ಮತ್ತು ಪ್ರಧಾನಿಯಾಗಲು ನಿರ್ಧರಿಸಿದರೆ, ತಮ್ಮ ಪಕ್ಷ ವಿರೋಧಿಸುವುದಿಲ್ಲ,ʼ ಎಂದು ರಾವುತ್‌ ಹೇಳಿದರು.

ನಿತೀಶ್ ಕುಮಾರ್ ಪ್ರಯಾಣಿಸಿದ ವಿಮಾನದಲ್ಲೇ ನವದೆಹಲಿಗೆ ಆಗಮಿಸಿದ ಆ‌ರ್‌ ಜೆಡಿ ನಾಯಕ ತೇಜಸ್ವಿ ಯಾದವ್, ʻಕಾದು ನೋಡಿʼ ಎಂದು ಹೇಳಿದರು.

Tags:    

Similar News