Pahalgam Terror Attack |ಯುದ್ಧದ ಕಾರ್ಮೋಡ; ಅರಬ್ಬಿಸಮುದ್ರದಲ್ಲಿ ತಾಲೀಮು ಆರಂಭಿಸಿದ ನೌಕಾಪಡೆ

ಯುದ್ಧನೌಕೆಯಿಂದ ಹಡಗು ನಿರೋಧಕ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.;

Update: 2025-04-27 08:23 GMT

ಕಾಶ್ಮೀರದ ಪಹಲ್ಗಾಮ್‌ ದಾಳಿ ಹಿನ್ನೆಲೆಯಲ್ಲಿ ಭಯೋತ್ಪಾದಕರ ವಿರುದ್ಧ ಪ್ರತೀಕಾರಕ್ಕೆ ಭಾರತೀಯ ಸೇನೆ ಸಜ್ಜಾಗುತ್ತಿದೆ. ನೌಕಾಪಡೆಯ ನೌಕೆಗಳು ಅರಬ್ಬಿಸಮುದ್ರದಲ್ಲಿ ಸಮರಾಭ್ಯಾಸ ಆರಂಭಿಸಿದ್ದು, ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯುದ್ಧನೌಕೆಯಿಂದ ಹಡಗು ನಿರೋಧಕ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ದೀರ್ಘ ವ್ಯಾಪ್ತಿಯ ನಿಖರ ಗುರಿ ಸಾಧಿಸಲು, ಸನ್ನದ್ಧತೆ, ವ್ಯವಸ್ಥೆ ಹಾಗೂ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಈ ಪರೀಕ್ಷೆ ನಡೆಸಲಾಗಿದೆ. ಯಾವುದೇ ಸಮಯವಾದರೂ, ಎಲ್ಲಿಯೇ ಆದರೂ ದೇಶದ ಸಾಗರಹಿತಾಸಕ್ತಿಯನ್ನು ಕಾಪಾಡಲು ಸದಾ ಸನ್ನದ್ದವಾಗಿದೆ ಎಂದು ನೌಕಾಪಡೆ ಹೇಳಿದೆ. 

ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ನೌಕಾಪಡೆಯು ಸರಣಿ ಸಮರಾಭ್ಯಾಸದಲ್ಲಿ ಭಾಗಿಯಾಗಿರುವುದು ಕುತೂಹಲ ಕೆರಳಿಸಿದೆ.

Tags:    

Similar News