Uttarakhand avalanche : ಉತ್ತರಾಖಂಡ ಹಿಮಪಾತ; ಎಂಟು ಮಂದಿಯ ಶೋಧನೆಗೆ ಕಾರ್ಯಾಚರಣೆ ಮುಂದುವರಿಕೆ
Uttarakhand avalanche : ಮಾನಾ ಗ್ರಾಮ ಮತ್ತು ಮಾನಾ ಪಾಸ್ ನಡುವಿನ ಪ್ರದೇಶದಲ್ಲಿ ರಾಶಿ ಬಿದ್ದಿದ್ದ ಏಳು ಅಡಿ ಹಿಮವನ್ನು 65ಕ್ಕೂ ಹೆಚ್ಚು ಸಿಬ್ಬಂದಿ ತೆರವು ಮಾಡಿ ಒಳಗೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದೆ.;
ಉತ್ತರಾಖಂಡದ ಚಮೋಲಿಯಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದ ಬಳಿಕ ಅದರಡಿ ಸಿಲುಕಿದ್ದ ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) ನಲವತ್ತಾರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಒಂಬತ್ತು ಜನರು ಇನ್ನೂ ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ರಕ್ಷಣೆ ಮಾಡಿದ ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ.
ಎಲ್ಲಾ ಕಾರ್ಮಿಕರಿಗೆ ಮಾನಾದ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನಾ ಗ್ರಾಮ ಮತ್ತು ಮಾನಾ ಪಾಸ್ ನಡುವಿನ ಪ್ರದೇಶದಲ್ಲಿ ರಾಶಿ ಬಿದ್ದಿದ್ದ ಏಳು ಅಡಿ ಹಿಮವನ್ನು 65ಕ್ಕೂ ಹೆಚ್ಚು ಸಿಬ್ಬಂದಿ ತೆರವು ಮಾಡಿ ಒಳಗೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದೆ.
ಚಮೋಲಿ ಜಿಲ್ಲೆಯಲ್ಲಿ ರಾಜ್ಯದ ಹವಾಮಾನ ಇಲಾಖೆ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಿದೆ. ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ, ತೆಹ್ರಿ, ಪೌರಿ, ಪಿಥೋರಗಢ, ಬಾಗೇಶ್ವರ, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್‌ಗಳಲ್ಲಿಯೂ ಸಹ ಲಘು ಮಳೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹಿಮದಡಿಯಲ್ಲಿ ಸಿಲುಕಿರುವ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ರಾಜ್ಯದವರು ಎಂದು ಹೇಳಲಾಗಿದೆ.
ಅನಿರೀಕ್ಷಿತ ಹಿಮಪಾತ
ಶುಕ್ರವಾರ ಬೆಳಗ್ಗೆ 5.30 ರಿಂದ 6 ಗಂಟೆಯ ಅನಿರೀಕ್ಷಿತ ಹಿಮಪಾತ ಸಂಭವಿಸಿದ್ದು, ಬದರಿನಾಥ್ ನಡುವಿನ ಬಿಆರ್‌ಒ ಶಿಬಿರವು ಭಾರತ-ಟಿಬೆಟ್ ಗಡಿಯಲ್ಲಿರುವ ಕೊನೆಯ ಹಳ್ಳಿಯಾದ ಮಾನಾ, ಹಿಮದ ಅಡಿಯಲ್ಲಿ ಹೂತುಹೋಗಿತ್ತು. ತರಬೇತಿ ಪಡೆದ ಐಬೆಕ್ಸ್ ಬ್ರಿಗೇಡ್‌ನ 100 ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.
ಭಾರತೀಯ ವಾಯುಪಡೆಯ (ಐಎಎಫ್) ಮಿ -17 ಹೆಲಿಕಾಪ್ಟರ್ಗಳು ಶನಿವಾರ ಬೆಳಿಗ್ಗೆ ಮಾನಾ ತೆರಳಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿವೆ. ಹಿಮಪಾತಕ್ಕೆ ಸಂಬಂಧಿಸಿದ ಸಹಾಯ ಅಥವಾ ಮಾಹಿತಿಯನ್ನು ಪಡೆಯಲು ರಾಜ್ಯ ಸರ್ಕಾರ ಶುಕ್ರವಾರ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.