Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್ ಮಂಡನೆ ಮುಕ್ತಾಯ
ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ
ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹಾಗೂ ದೂರುದ ನಗರಗಳಿಗೆ ಅಲೆಯಬೇಕಾಗಿದೆ. ಹಾಗಾಗಿ ಇನ್ನು ಮುಂದೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ ತೆರೆಯಲಾಗುವುದು ಎಂದು ಹೇಳಿದ್ದಾರೆ.
ಭಾರತ್ ಟ್ರೇಡ್ ನೆಟ್‌ವರ್ಕ್ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು
ಜೀನ್ ಬ್ಯಾಂಕ್ ಸ್ಥಾಪನೆ ಮಾಡಿ ಅನುವಂಶೀಯ ಕಾಯಿಲೆಗಳ ಸಂಶೋಧನೆಗೆ ಆದ್ಯತೆ. ಐಐಟಿ, ಐಐಎಸ್‌ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ನಿಧಿ ಮೀಸಲು. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ.
ಪ್ರವಾಸೋಧ್ಯಮಕ್ಕೆ ಒತ್ತು. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ, ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.
ಗಿಗ್ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ; 1 ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದರಿಗೆ ವಿಶೇಷ ಯೋಜನೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ಸಂಸ್ಥೆಗಳ ಸ್ಥಾಪನೆ. 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲು ಮಾಡುವ ಪ್ರಮಾಣ ಹೆಚ್ಚಳ. 60 ಸಾವಿರದಿಂದ 1.35 ಲಕ್ಷಕ್ಕೆ ಹೆಚ್ಚಳ. ಪಟನಾ ಐಐಟಿ ವಿಸ್ತರಣೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು 10 ವರ್ಷಗಳಲ್ಲಿ ಶೇ 100ರಷ್ಟು ಹೆಚ್ಚಳ.
ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರ ಉತ್ತೇಜನ. 22 ಲಕ್ಷ ಉದ್ದಿಮೆದಾರರಿಗೆ ಇದರಿಂದ ಅನುಕೂಲ.ಚರ್ಮೋದ್ಯಮಕ್ಕೆ ಉತ್ತೇಜನ.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯ ರಚನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿ. ಸೌರ, ಇವಿ ಬ್ಯಾಟರಿ, ಮೋಟಾರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಹೂಡಿಕೆಗೆ ಉತ್ತೇಜನ.
ಸ್ಟಾರ್ಟ್‌ಅಪ್‌ಗಳಿಗೆ ₹10 ಕೋಟಿಯಿಂದ ₹20ಕೋಟಿವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ. ಅತಿ ಸಣ್ಣ ಕಂಪನಿಗಳಿಗೆ ₹5 ಲಕ್ಷವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ. ಮೊದಲ ಹಂತದಲ್ಲಿ 10 ಲಕ್ಷ ಕಾರ್ಡ್ ಹಂಚಿಕೆ
₹60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಗೆ ಆದ್ಯತೆ. ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ ದ್ವೀಪಗಳಲ್ಲಿ ವಿಶೇಷ ವಲಯ ನಿರ್ಮಾಣ. ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು.