Union budget 2025: ಉಡಾನ್ ಯೋಜನೆಯಡಿ 120 ವಿಮಾನ ನಿಲ್ದಾಣಗಳ ಸ್ಥಾಪನೆ

Union budget 2025: ವಿಮಾನ ನಿಲ್ದಾಣಗಳು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ವ್ಯಕ್ತಪಡಿಸಿದ್ದಾರೆ.;

Update: 2025-02-01 08:37 GMT
Ai ರಚಿತ ಚಿತ್ರ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ನಲ್ಲಿ ಉಡಾನ್ ಯೋಜನೆಗೆ ಸಾಕಷ್ಟು ಉತ್ತೇಜನ ನೀಡಲಾಗಿದೆ. ಅದರಡಿ 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಈ ವಿಮಾನ ನಿಲ್ದಾಣಗಳು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ ಎಂದು ಹಣಕಾಸು ಸಚಿವೆ ಭರವಸೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ದೇಶದ ಜನ ಸಾಮಾನ್ಯರೂ ವಿಮಾನದಲ್ಲಿ ಪ್ರಯಾಣ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಅಕ್ಟೋಬರ್ 21, 2016ರಂದು ಉಡಾನ್ ಯೋಜನೆ ಘೋಷಣೆ ಮಾಡಿತ್ತು. ಆ ಯೋಜನೆಯಡಿ ಎರಡು ಜಲ ವಿಮಾನ ನಿಲ್ದಾಣಗಳು ಮತ್ತು 13 ಹೆಲಿಪೋರ್ಟ್ಗಳು ಸೇರಿದಂತೆ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ 619 ಮಾರ್ಗಗಳನ್ನುಮಾಡಲಾಗಿದೆ. ಇದೀಗ ಬಜೆಟ್ನಲ್ಲಿ ಮತ್ತೆ 120 ಏರ್ಪೋರ್ಟ್ಗಳನ್ನು ಘೋಷಿಸಲಾಗಿದೆ.

ಬಜೆಟ್ನಲ್ಲಿ ಪ್ರಕಟಿಸಿರುವ ಉಡಾನ್ ಯೋಜನೆಯಲ್ಲಿ ಹೆಲಿಪ್ಯಾಡ್, ಚಿಕ್ಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಗಮನ ನೀಡಲಾಗುತ್ತದೆ. ಅದರಲ್ಲೂ ಇದು ಈಶಾನ್ಯ ರಾಜ್ಯಗಳು, ಬೆಟ್ಟಗುಡ್ಡ ಪ್ರದೇಶದ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ.

ಪ್ರವಾಸೋದ್ಯಮಕ್ಕೆ ಅನುಕೂಲ

ಬಜೆಟ್ನಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗಿದೆ. ದೇಶದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಬುದ್ಧನ ಜೀವನ ಮತ್ತು ಅವರಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಸರ್ಕಾರವು ವಿಶೇಷ ಗಮನ ನೀಡುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ದೇಶದ ಹಲವೆಡೆ ಸ್ಥಾಪನೆಯಾಗಲಿರುವ ಹೋಮ್ಸ್ಟೇಗಳಿಗೆ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ಸಣ್ಣ ಅವಧಿಯಲ್ಲಿ ಬಜೆಟ್ ಮಂಡನೆ

ಬಜೆಟ್ ಭಾಷಣವು 1 ಗಂಟೆ 14 ನಿಮಿಷಗಳ ಕಾಲ ನಡೆಯಿತು. ಅತ್ಯಂತ ಚಿಕ್ಕ ಬಜೆಟ್ ಭಾಷಣಗಳಲ್ಲಿ ಇದೂ ಒಂದು . ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆಯನ್ನೂ ಹೊಂದಿದ್ದಾರೆ. 2020ರಲ್ಲಿ 2 ಗಂಟೆ 40 ನಿಮಿಷ ಬಜೆಟ್ ಮಂಡನೆ ಮಾಡಿದ್ದರು.

Tags:    

Similar News