Union Budget 2025: ಚುನಾವಣಾ ವರ್ಷದಲ್ಲೇ ಬಿಹಾರಕ್ಕೆ ಬಂಪರ್ ಘೋಷಣೆ

Union Budget 2025: ಬಿಹಾರದಲ್ಲಿ ಮಖಾನಾ ಮಂಡಳಿ ಹಾಗೂ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಮ್ಯಾನೇಜ್ಮೆಂಟ್ ಗೆ ಸಂಬಂಧಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ತಲೆ ಎತ್ತಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.;

Update: 2025-02-01 07:35 GMT
ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌.

ಪ್ರಸಕ್ತ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೆಡಿಯು-ಬಿಜೆಪಿ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ಬಿಹಾರಕ್ಕೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ವರ್ಷವೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಘೋಷಣೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.


Full View

ಬಿಹಾರದಲ್ಲಿ ಮಖಾನಾ ಮಂಡಳಿ ಹಾಗೂ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಮ್ಯಾನೇಜ್ಮೆಂಟ್ ಗೆ ಸಂಬಂಧಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ತಲೆ ಎತ್ತಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೆ, ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿಯೂ, ಈಗಿರುವ ಪಾಟ್ನಾ ವಿಮಾನ ನಿಲ್ದಾಣವನ್ನು ವಿಸ್ತರಣೆ ಮಾಡುವುದಾಗಿಯೂ ಬಜೆಟ್ನಲ್ಲಿ ಮಂಡಿಸಲಾಗಿದೆ.

ಮತ್ತೊಂದು ವಿಶೇಷವೆಂದರೆ, ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬಜೆಟ್ ಮಂಡನೆ ವೇಳೆ ಬಿಹಾರದ ಮಿಥಿಲಾ ಪ್ರದೇಶದ ಸಾಂಪ್ರದಾಯಿಕ ಜನಪದ ಕಲೆಯನ್ನು ಬಿಂಬಿಸುವ ಮಧುಬನಿ ಸೀರೆಯನ್ನು ಉಟ್ಟುಕೊಂಡು ಬಂದಿದ್ದಾರೆ. ಸೀರೆಯನ್ನು ಕೂಡ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆಯೇ ಎಂಬ ಚರ್ಚೆಯನ್ನು ಇದು ಹುಟ್ಟುಹಾಕಿದೆ.

ಬಿಹಾರ ಕೇಂದ್ರಿತ ಯೋಜನೆಗಳಿವು

- ಬಿಹಾರದ ಪಶ್ಚಿಮ ಕೋಸಿ ಸುರಂಗ ಯೋಜನೆಗೆ ಆರ್ಥಿಕ ನೆರವು

- ಮಖಾನಾ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಮಖಾನಾ ಮಂಡಳಿ ಸ್ಥಾಪನೆ

- ಗ್ರೀನ್ ಫೀಲ್ಡ್ ಏರ್ ಪೋರ್ಟ್ ನಿರ್ಮಾಣ

- ಬಿಹಾರದ ಬೆತಿಯಾದಲ್ಲಿ ವಿಮಾನನಿಲ್ದಾಣ, ಪಾಟ್ನಾ ಏರ್ ಪೋರ್ಟ್ ವಿಸ್ತರಣೆ

- ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಮ್ಯಾನೇಜ್ಮೆಂಟ್ ಗೆ ಸಂಬಂಧಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ

.

Tags:    

Similar News