Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್ ಮಂಡನೆ ಮುಕ್ತಾಯ
Union Budget 2025-26: ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು.;
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಶುಕ್ರವಾರ ಬಜೆಟ್ ಅಧಿವೇಶನ ಅರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡಿಸಲಿದ್ದಾರೆ. ಈ ಆಯವ್ಯಯದಲ್ಲಿ ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ನಿರೀಕ್ಷೆ ಇದೆ. ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿಯ ಬೇಡಿಕೆಯೂ ಇದೆ. ಹೀಗಾಗಿ ಕೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ, ಯಾವೆಲ್ಲ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎನ್ನುವ ಪ್ರಶ್ನೆ ಎದುರಾಗಿದೆ.
ಎಷ್ಟು ಗಂಟೆಗೆ?
ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದರು. ಅವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.
ಲೈವ್ ವೀಕ್ಷಣೆ ಹೇಗೆ?
ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ಬಜೆಟ್ ಭಾಷಣದ ನೇರ ಪ್ರಸಾರ ಪ್ರಸಾರ ಮಾಡಲಿವೆ. ಜತೆಗೆ ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯುಟ್ಯೂಬ್ ನಲ್ಲಿ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಿಸಬಹುದು.
ಕೇಂದ್ರ ಬಜೆಟ್ 2025-26ರ ಪ್ರತಿ ಎಲ್ಲಿ ಸಿಗುತ್ತೆ?
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್‌ನಲ್ಲಿ ಪಿಡಿಎಫ್ ಪ್ರತಿಯ ರೂಪದಲ್ಲಿ ಲಭ್ಯವಿದೆ ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in)ನಲ್ಲೂ ದೊರೆಯಲಿದೆ.
ನಿರೀಕ್ಷೆಗಳೇನು?
ತೆರಿಗೆ ಕಡಿತ ಘೋಷಣೆ.
ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್‌ವರ್ಕ್, ಮಲ್ಟಿ ಮಾಡೆಲ್ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳ ಉತ್ತೇಜನಕ್ಕೆ ನೆರವು.
ಸಿಮೆಂಟ್, ಉಕ್ಕಿನ ಜಿಎಸ್‌ಟಿ ಇಳಿಕೆ.
ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹಲವು ಯೋಜನೆಗಳು.
ಉಚಿತ ಆಹಾರ ಧಾನ್ಯ ವಿತರಣೆ.
ಪಿಎಂಎವೈ ಸ್ಕೀಮ್ ಅಡಿಯಲ್ಲಿ ಅಫರ್ಡೆಬಲ್ ಮನೆಗಳ ನಿರ್ಮಾಣ.
ನರೇಗಾಕ್ಕೆ ಹೆಚ್ಚಿನ ಅನುದಾನ.
ಉದ್ಯೋಗ ಸೃಷ್ಟಿಗೆ ಆದ್ಯತೆ.
ಸೋಮವಾರಕ್ಕೆ ಕಲಾಪ ಮುಂದೂಡಿಕೆ
ಬಜೆಟ್ ಮಂಡನೆ ಮುಕ್ತಾಯ; ಸಂಸತ್ತಿನ ಅನುಮೋದನೆ; ಕಾರ್ಯಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ
ತೆರಿಗೆ ವಿನಾಯಿತಿ ಈ ರೀತಿ ಇದೆ
₹12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ; ₹0–₹4ಲಕ್ಷ ತೆರಿಗೆ ಇಲ್ಲ; ₹4ಲಕ್ಷದಿಂದ ₹8ಲಕ್ಷವರೆಗೆ ಶೇ4; ₹8ಲಕ್ಷದಿಂದ ₹10ಲಕ್ಷ– ಶೇ 10
12:10. ಹಿರಿಯ ನಾಯಕರಿಗೆ ₹1ಲಕ್ಷ ವರೆಗೆ ಟಿಡಿಎಸ್ ವಿನಾಯಿತಿ.ಆದಾಯಮೂಲದಿಂದ ತೆರಿಗೆ ಸಂಗ್ರಹ ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಳ. ವಿದೇಶದಿಂದ ರವಾನಿಸುವ ಹಣಕ್ಕೆ ಟಿಡಿಎಸ್.
ಆದಾಯ ತೆರಿಗೆ ಮಿತಿ 12 ಲಕ್ಷಕ್ಕೆ ಏರಿಕೆ
ಆದಾಯ ತೆರಿಗೆಯನ್ನು7 ಲಕ್ಷ ರೂಪಾಯಿಯಿಂದ 12 ಲಕ್ಷಕ್ಕೆ ಏರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಬಜೆಟ್ 2025: ತೆರಿಗೆ ಪ್ರಸ್ತಾಪಗಳನ್ನು ಪಟ್ಟಿ ಮಾಡಿದ ಸಚಿಗೆ ನಿರ್ಮಲಾ ಸೀತಾರಾಮನ್
ತೆರಿಗೆ ಪ್ರಸ್ತಾಪಗಳು ಇಲ್ಲಿವೆ
ಮಧ್ಯಮ ವರ್ಗದ ಮೇಲೆ ಗಮನ ಹರಿಸಿ ವೈಯಕ್ತಿಕ ಆದಾಯ ತೆರಿಗೆ ಸುಧಾರಣೆ
ಟಿಡಿಎಸ್ ಮತ್ತು ಟಿಸಿಎಸ್ ತರ್ಕಬದ್ಧಗೊಳಿಸುವಿಕೆ
ಹೊರೆಯನ್ನು ಕಡಿಮೆ ಮಾಡುವುದು
ವ್ಯಾಪಾರಕ್ಕೆ ಅನುಕೂಲ
ಉದ್ಯೋಗ ಮತ್ತು ಹೂಡಿಕೆಗೆ ಅನುಕೂಲ
ಮುಂದಿನ ವಾರದಲ್ಲಿ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆ
ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಈ ಬಾರಿ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆ. ಆದಾಯ ತೆರಿಗೆ ವಿಚಾರದಲ್ಲಿ ಶುಭ ಸುದ್ದಿ ಕೊಡುವೆ ಎಂದು ಹೇಳಿದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಲೀಥಿಯಮ್ ಬ್ಯಾಟರಿ ತಯಾರಿಗೆ ಉತ್ತೇಜನ
ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿ ತಯಾರಕರಿಗೆ ಹೆಚ್ಚಿನ ಉತ್ತೇಜ. ಇದರಿಂದ ಇವಿ ವಾಹನಗಳ ತಯಾರಿಗೆ ಹೆಚ್ಚಿನ ಪ್ರೇರಣೆ ಸಿಗಲಿದೆ.
ಸರ್ಕಾರಿ ಶಾಲೆಗಳಿಗೆ ಇಂಟರ್ನೆಟ್
ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್‌ಬ್ಯಾಂಡ್ ಸಂಪರ್ಕ. ಜಲಜೀವನ ಮಿಷನ್ ಯೋಜನೆ ಇನ್ನಷ್ಟು ವಿಸ್ತರಣೆ.
ಪ್ರಮುಖ ಔಷಧಗಳ ಮೇಲಿನ ಆಮದು ಸುಂಕ ವಿನಾಯಿತಿ
ಕ್ಯಾನ್ಸರ್ ಹಾಗೂ ಇತರೆ ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 30 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸುಂಕ ವಿನಾಯಿತಿ
ಡೇ ಕೇರ್ ಕ್ಯಾನ್ಸರ್ ಕೇಂದ್ರಗಳೆಂದರೆ ಏನು?
ಅಲ್ಪಾವಧಿಯ ಚಿಕಿತ್ಸೆ ಅಥವಾ ಕೀಮೋಥೆರಪಿಯಂತಹ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರೆ, ಅಂತಹ ಕ್ಯಾನ್ಸರ್ ರೋಗಿಗಳು ಡೇ ಕೇರ್ ಕ್ಯಾನ್ಸರ್ ಕೇಂದ್ರಗಳಿಗೆ ತೆರಳಿ, ಹಗಲು ಹೊತ್ತಲ್ಲೇ ಚಿಕಿತ್ಸೆ ಪಡೆದು ಮನೆಗೆ ಮರಳಬಹುದು. ಅವರು ರಾತ್ರಿ ಆಸ್ಪತ್ರೆಯಲ್ಲೇ ಉಳಿಯಬೇಕಾಗಿಲ್ಲ ಅಥವಾ ದಾಖಲಾಗಬೇಕಾಗಿಲ್ಲ.
ವಿಮಾ ವಲಯದಲ್ಲಿ ೧೦೦ ಶೇಕಡಾ ವಿದೇಶಿ ಹೂಡಿಕೆ
ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ. ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಸೌಲಭ್ಯಗಳ ವಿಸ್ತರಣೆ