Union Budget 2025: ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ; ಇಲ್ಲಿದೆ ಎಲ್ಲ ವಿವರ

Union Budget 2025:ರಕ್ಷಣಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಗೃಹ ವ್ಯವಹಾರಗಳು, ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಹಲವು ಇಲಾಖೆಗಳಿಗೆ ಅನುದಾನ ಘೋಷಿಸಿದ್ದಾರೆ.;

Update: 2025-02-01 10:21 GMT
ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರತಿ ಪ್ರದರ್ಶಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ 2025-26ನೇ ಆರ್ಥಿಕ ವರ್ಷದ ಬಜೆಟ್‌ ಮಂಡನೆ ಮಾಡಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ ಎಂದು ನಿರ್ಮಲಾ ಅವರು ಬಜೆಟ್‌ ಮಂಡನೆಯುದ್ದಕ್ಕೂ ಹೇಳಿದ್ದರು. ಹೀಗಾಗಿ ತೆರಿಗೆ ವಿನಾಯಿತಿ ಸೇರಿದಂತೆ ಬಂಪರ್‌ ಬಜೆಟ್‌ ಘೋಷಣೆ ಮಾಡಿದ್ದಾರೆ.

ರಕ್ಷಣಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಗೃಹ ವ್ಯವಹಾರಗಳು, ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಹಲವು ಇಲಾಖೆಗಳಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ವಲಯವಾರು ಅನುದಾದ ವಿವರ? (ಕೋಟಿಗಳಲ್ಲಿ)

ರಕ್ಷಣಾ ಇಲಾಖೆ: ₹4.91 ಲಕ್ಷ ಕೋಟಿ ರೂಪಾಯಿ

ಗ್ರಾಮೀಣ ಅಭಿವೃದ್ಧಿ: ₹2.66 ಲಕ್ಷ ಕೋಟಿ ರೂಪಾಯಿ

ಗೃಹ ಇಲಾಖೆ: ₹2.33 ಲಕ್ಷ ಕೋಟಿ ರೂಪಾಯಿ

ಕೃಷಿ & ರೈತರ ಕಲ್ಯಾಣ: ₹1.71 ಲಕ್ಷ ಕೋಟಿ ರೂಪಾಯಿ

ಶಿಕ್ಷಣ: ₹1.28 ಲಕ್ಷ ಕೋಟಿ ರೂಪಾಯಿ

ಆರೋಗ್ಯ: ₹98,311 ಕೋಟಿ ರೂಪಾಯಿ

ನಗರಾಭಿವೃದ್ಧಿ: ₹96,777 ಕೋಟಿ ರೂಪಾಯಿ

ಮಾಹಿತಿ ತಂತ್ರಜ್ಞಾನ: ₹95,298 ಕೋಟಿ ರೂಪಾಯಿ

ಇಂಧನ: ₹81,174 ಕೋಟಿ ರೂಪಾಯಿ

ವಾಣಿಜ್ಯ ಮತ್ತು ಕೈಗಾರಿಕೆ: ₹68,553 ಕೋಟಿ ರೂಪಾಯಿ

ಸಮಾಜ ಕಲ್ಯಾಣ ಇಲಾಖೆ: ₹60,052 ಕೋಟಿ ರೂಪಾಯಿ

ವಿಜ್ಞಾನ ಕ್ಷೇತ್ರ: ₹55,679 ಕೋಟಿ ರೂಪಾಯಿ

ಕಳೆದ ಬಜೆಟ್‌ನಲ್ಲಿ ಎಷ್ಟು ನೀಡಲಾಗಿತ್ತು?

ಕಳೆದ ಬಾರಿ ರಕ್ಷಣಾ ಇಲಾಖೆಗೆ ₹5.94 ಲಕ್ಷ ಕೋಟಿ, ಗೃಹ ಇಲಾಖೆ ₹1.96 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿ ₹1.60 ಲಕ್ಷ ಕೋಟಿ, ರಸ್ತೆ ಹಾಗೂ ಹೆದ್ದಾರಿ 2.70 ಲಕ್ಷ ಕೋಟಿ, ರೈಲ್ವೆ ₹2.41 ಲಕ್ಷ ಕೋಟಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ₹2.06 ಲಕ್ಷ ಕೋಟಿ, ರಾಸಾಯನಿಕ ಹಾಗೂ ರಸಗೊಬ್ಬರ ₹1.78 ಲಕ್ಷ ಕೋಟಿ, ಕೃಷಿ & ರೈತರ ಕಲ್ಯಾಣ ₹1.25 ಲಕ್ಷ ಕೋಟಿ, ದೂರ ಸಂಪರ್ಕ ₹1.2 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.

Tags:    

Similar News