Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್ ಮಂಡನೆ ಮುಕ್ತಾಯ
ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನ ಕ್ಷೇತಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನ ಕ್ಷೇತಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ಅನುಮೋದನೆ ಪಡೆದ ವಿತ್ತ ಸಚಿವೆ. ಸಂಪ್ರದಾಯದಂತೆ ಅವರಿಗೆ ದ್ರೌಪದಿ ಮುರ್ಮು ಅವರು ಮೊಸರು ಹಾಗೂ ಸಕ್ಕರೆಯನ್ನು ತಿನ್ನಿಸಿ ಶುಭಹಾರೈಸಿದರು
ಬಜೆಟ್ ಮಂಡನೆಗೆ ಮಾಡಲು ಮುಂದಾದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿ ಪಕ್ಷಗಳ ವಿರೋಧ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ. ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭ.
ಇದು ಗ್ಯಾನ್ ( GYAN) ಬಜೆಟ್ - ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ
ಪ್ರಧಾನಿ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಈ ಬಜೆಟ್ ಸಾಮಾನ್ಯ ಜನರಿಗಿರುವ ಬಜೆಟ್ ಎಂದು ಹೇಳಿದ್ದಾರೆ. ಇದು ಬಡ ರೈತರು, ಮಹಿಳೆಯರು ಮತ್ತು ಯುವಕರ ಆಶೋತ್ತರಗಳ ಬಜೆಟ್. ಇದು ಜ್ಞಾನದ (ಬಡವರು, ಯುವಕರು, ರೈತರು ಮತ್ತು ಮಹಿಳಾ ಶಕ್ತಿ) ಬಜೆಟ್ ಎಂದು ಅವರು ತಿಳಿಸಿದ್ದಾರೆ.
ಬಜೆಟ್‌ಗೆ ಸಂಪುಟ ಸಭೆಯಲ್ಲಿ ಅನುಮೋದನೆ
2025-2026ನೇ ಸಾಲಿನ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು.
ಸಂಸತ್ ಭವನ ತಲುಪಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ತಲುಪಿದ್ದಾರೆ. ಸಚಿವ ಸಂಪುಟ ಸಭೆ ಶೀಘ್ರದಲ್ಲೇ ಆರಂಭವಾಗಲಿದೆ. ಬಜೆಟ್ ಮಂಡನೆಗೂ ಮುನ್ನ ಬೆಳಿಗ್ಗೆ 10:25 ಕ್ಕೆ ಸಂಸತ್ ಭವನದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು,ಇದರಲ್ಲಿ ಬಜೆಟ್ ಮಂಡನೆಗೆ ಅನುಮೋದನೆ ಪಡೆಯಲಾಗುತ್ತದೆ.
ಪದ್ಮಶ್ರೀ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ ಸೀರೆ ಧರಿಸಲಿರುವ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಧರಿಸಿರುವ ಸೀರೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ (2021) ಉಡುಗೊರೆಯಾಗಿ ನೀಡಿದ್ದಾರೆ. ಬಜೆಟ್ ದಿನದಂದು ದುಲಾರಿ ದೇವಿ ಈ ಸೀರೆಯನ್ನು ಧರಿಸಲು ಹಣಕಾಸು ಸಚಿವರನ್ನು ವಿನಂತಿಸಿದ್ದರು.