Union Budget 2024: ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2,357 ಕೋಟಿ ರೂ.
ಈಶಾನ್ಯ ರಾಜ್ಯಗಳಿಗೆ ಸಂಪರ್ಕವನ್ನು ಸುಧಾರಿಸಲು, ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯವನ್ನು ಒದಗಿಸಲು ಹೊಸ ಯೋಜನೆಯನ್ನು ರೂಪಿಸಲಾಗಿದೆ.;
ಹೊಸದಿಲ್ಲಿ, ಜು.23- ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅನುದಾನವನ್ನು 2,357.14 ಕೋಟಿ ರೂ.ಗೆ ಇಳಿಸಲಾಗಿದೆ. 2023-24ರ ಪರಿಷ್ಕೃತ ಬಜೆಟ್ ನಲ್ಲಿ ಸಚಿವಾಲಯಕ್ಕೆ 2,922.12 ಕೋಟಿ ರೂ. ನೀಡಲಾಗಿತ್ತು.
ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆಗೆ ಮೀಸಲಿಟ್ಟ ಹಣವನ್ನು 850 ಕೋಟಿ ರೂ.ಗಳಿಂದ 502 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಇದು 22 ವಿಮಾನ ನಿಲ್ದಾಣಗಳ ಪುನರುಜ್ಜೀವನ ಮತ್ತು 124 ಆರ್ಸಿಎಸ್ ಮಾರ್ಗಗಳ ಪ್ರಾರಂಭ ಮತ್ತು ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಾರ್ಯಸಾಧ್ಯತೆಯ ಅನುದಾನವಾಗಿದೆ. ಈಶಾನ್ಯ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸಲು, ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯವನ್ನು ಒದಗಿಸಲು ಹೊಸ ಯೋಜನೆಯನ್ನು ರೂಪಿಸಲಾಗಿದೆ.
ಆದರೆ, ಡ್ರೋನ್ ಮತ್ತು ಡ್ರೋನ್ ಘಟಕಕ್ಕಾಗಿ ಉತ್ಪಾದನೆಗೆ ಜೋಡಣೆಯಾದ ಪ್ರೋತ್ಸಾಹಕಗಳು(ಪಿಎಲ್‌ಐ) ಯೋಜನೆಗೆ 2023-24 ರ ಪರಿಷ್ಕೃತ ಅಂದಾಜಿನಲ್ಲಿ ನೀಡಿದ 33 ಕೋಟಿ ರೂ.ಗೆ ಹೋಲಿಸಿದರೆ, ಈ ಹಣಕಾಸು ವರ್ಷದಲ್ಲಿ 57 ಕೋಟಿ ರೂ. ಹೆಚ್ಚುವರಿ ಹಂಚಿಕೆ ಮಾಡಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ 302.64 ಕೋಟಿ ರೂ. ಮತ್ತು ನಾಗರಿಕ ವಾಯುಯಾನ ಭದ್ರತಾ ಬ್ಯೂರೋ( ಬಿಸಿಎಎಸ್)ಗೆ 89 ಕೋಟಿ ರೂ. ಕಡಿತಗೊಳಿಸಲಾಗಿದೆ. ಹೋಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ಗೆ 57.14 ಕೋಟಿ ರೂ. ನಿಗದಿಪಡಿಸಲಾಗಿದೆ.
ಏರ್ ಇಂಡಿಯಾದ ನಿವೃತ್ತ ಉದ್ಯೋಗಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಈ ವರ್ಷದಲ್ಲಿ 85 ಕೋಟಿ ರೂ. ನಿಗದಿಪಡಿಸಲಾಗಿದೆ. ಏರ್ ಇಂಡಿಯಾವನ್ನು ಸರ್ಕಾರ 2022 ರಲ್ಲಿ ಟಾಟಾ ಗ್ರೂಪ್‌ಗೆ ಮಾರಾಟ ಮಾಡಿದೆ. 2023-24ರಲ್ಲಿ ಈ ಮೊತ್ತ 51 ಕೋಟಿ ರೂ. ಇದ್ದಿತ್ತು.