ವಯನಾಡಿನಲ್ಲಿ ಭೂಕಂಪ; ಜನರ ಸ್ಥಳಾಂತರಕ್ಕೆ ಆದೇಶ
ಕುರಿಚಿಯರ್ಮಲ, ಪಿನಂಗೋಡ್, ಮೋರಿಕಪ್ಪ್, ಅಂಪುಕುತಿಮ್ಮಲ, ಎಡಕ್ಕಲ್ ಗುಹೆ ಪ್ರದೇಶಗಳಲ್ಲಿ ವಾಸಿಸುತ್ತಿರುವರು ಸ್ಥಳಾಂತರಗೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.;
ವಯನಾಡ್‌ನ ಎಡಕ್ಕಲ್‌ನಲ್ಲಿ ಭೂಕಂಪದ ಸಾಧ್ಯತೆಯಿರುವುದರಿಂದ, ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕುರಿಚಿಯರ್ಮಲ, ಪಿನಂಗೋಡ್, ಮೋರಿಕಪ್ಪ್, ಅಂಪುಕುತಿಮ್ಮಲ, ಎಡಕ್ಕಲ್ ಗುಹೆ ಪ್ರದೇಶಗಳಲ್ಲಿ ವಾಸಿಸುತ್ತಿರುವರು ಸ್ಥಳಾಂತರ ಮಾಡಬೇಕೆಂದು ಸೂಚಿಸಲಾಗಿದೆ. ಎಡಕ್ಕಲ್ ಮತ್ತು ನೆನ್ಮೇನಿಯಲ್ಲಿ ಭಾರಿ ಶಬ್ದ ಕೇಳಿದ್ದಾಗಿ ಸ್ಥಳೀಯರು ವರದಿ ಮಾಡಿದ ನಂತರ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ನಡುಕ ಮತ್ತು ಶಬ್ದ ಗಮನಾರ್ಹವಾಗಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಭೂಕಂದಿಂದ ಉಂಟಾದ ಭಾರಿ ಶಬ್ದ ಮತ್ತು ಅಡಚಣೆಗಳಿಂದ ಈ ಪ್ರದೇಶದಲ್ಲಿ ಶಾಲೆಗಳನ್ನು ಈಮೊದಲೇ ಮುಚ್ಚಲಾಗಿತ್ತು.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಪ್ರತಿಕ್ರಿಯಿಸಿ, ಇಲಾಖೆಯು ಭೂಕಂಪನದ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಏನಾದರೂ ವ್ಯತ್ಯಯವಿದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ʻಭೂಕಂಪನ ದಾಖಲೆಗಳು ಯಾವುದೇ ಸೂಚನೆಗಳನ್ನು ತೋರಿಸುತ್ತಿಲ್ಲ,ʼ ಎಂದು ಕೆಎಸ್‌ಡಿಎಂಎ ಮೂಲಗಳು ದ ಫೆಡರಲ್‌ಗೆ ತಿಳಿಸಿವೆ.