ರಣಥಂಬೋರ್ ಬಳಿ ಕುರಿಗಾಹಿಯನ್ನು ಕೊಂದ ಹುಲಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಗ್ರಾಮಸ್ಥರು
ಟಿ -86 ಎಂದು ಗುರುತಿಸಲಾದ ಹುಲಿಯ ಕಳೇಬರ ಭಾನುವಾರ ಮಧ್ಯಾಹ್ನ ಉಲಿಯಾನಾದಲ್ಲಿ ಪತ್ತೆಯಾಗಿದ್ದು, ಅದರ ಮೇಲೆ ದಾಳಿಯ ಗುರುತುಗಳು ಕಂಡಿವೆ ಅವರು ಹೇಳಿದ್ದಾರೆ.
ರಾಜಸ್ಥಾನದ ರಣಥಂಬೋರ್ ಹುಲಿ ಮೀಸಲು ಪ್ರದೇಶದ ಬಳಿಯ ಉಲಿಯಾನಾ ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರನ್ನು ಕೊಂದಿದೆ ಎಂದು ಶಂಕೆಯ ಮೇರೆಗೆ ಗ್ರಾಮಸ್ಥರು 12 ವರ್ಷದ ಹುಲಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಟಿ -86 ಎಂದು ಗುರುತಿಸಲಾದ ಹುಲಿಯ ಕಳೇಬರ ಭಾನುವಾರ ಮಧ್ಯಾಹ್ನ ಉಲಿಯಾನಾದಲ್ಲಿ ಪತ್ತೆಯಾಗಿದ್ದು, ಅದರ ಮೇಲೆ ದಾಳಿಯ ಗುರುತುಗಳು ಕಂಡಿವೆ ಅವರು ಹೇಳಿದ್ದಾರೆ.
ಹುಲಿಯ ಮುಖದ ಮೇಲಿನ ಗಾಯದ ಗುರುತುಗಳಿವೆ. ಅದರ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ ಮತ್ತು ಕೊಡಲಿಗಳಂತಹ ಹರಿತವಾದ ವಸ್ತುಗಳಿಂದ ದಾಳಿ ಮಾಡಲಾಗಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ ಹಳೆಯ ಗಾಯವೊಂದಿದ್ದು ಮತ್ತೊಂದು ಹುಲಿಯೊಂದಿಗಿನ ಹೋರಾಟದಲ್ಲಿ ಗಾಯಗೊಂಡಿರಬಹುದು ಎಂದು ಹೇಳಿದ್ದಾರೆ.
ಹುಲಿ ದಾಳಿಯಲ್ಲಿ 51 ವರ್ಷದ ಭರತ್ ಲಾಲ್ ಮೀನಾ ಎಂಬುವರು ಮೃತಪಟ್ಟ ನಂತರ, ಸುಮಾರು ಎರಡು ಡಜನ್ ಗ್ರಾಮಸ್ಥರು ಭಾನುವಾರ ಮಧ್ಯಾಹ್ನ ಟಿ -86 ಹುಲಿ ಮೇಲೆ ದಾಳಿ ಮಾಡಿದ್ದರು. ಹಿಂದಿನ ದಿನ ಭರತ್ ಲಾಲ್ ದೇಹ ಸಿಕ್ಕಿದ ಅದೇ ಸ್ಥಳದಲ್ಲಿ ಕಾಡು ಪ್ರಾಣಿಯ ಶವ ಪತ್ತೆಯಾಗಿದೆ.
ಕೊಟ್ವಾಲಿ ಎಸ್ಎಚ್ಒ ರಾಜ್ವೀರ್ ಸಿಂಗ್ ಅವರ ಪ್ರಕಾರ, ಮೀನಾ ಶನಿವಾರ ಹುಲಿ ಮೀಸಲು ಪ್ರದೇಶದ ಪಕ್ಕದ ಉಲಿಯಾನಾ ಗ್ರಾಮದಲ್ಲಿ ಆಡುಗಳನ್ನು ಮೇಯಿಸುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿತ್ತು.
ಗ್ರಾಮಸ್ಥರು ಬಂದು ಕೂಗಲು ಪ್ರಾರಂಭಿಸುವವರೆಗೂ ಹುಲಿ ಮೀನಾ ಅವರ ದೇಹದ ಪಕ್ಕದಲ್ಲಿ ಕುಳಿತಿತ್ತು. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಸವಾಯಿ ಮಾಧೋಪುರ-ಕುಂಡೇರಾ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ಈ ಹಿಂದೆ, ಟಿ -86 ಮತ್ತೊಂದು ಹುಲಿಯೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡಿತ್ತು ಮತ್ತು ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಪ್ರಸ್ತುತ, ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ" ಎಂದು ರಣಥಂಬೋರ್ ಹುಲಿ ಮೀಸಲು ಪ್ರದೇಶದ ಕ್ಷೇತ್ರ ನಿರ್ದೇಶಕ ಅನೂಪ್ ಕೆ ಆರ್ ಹೇಳಿದ್ದಾರೆ. ಪಿಟಿಐ