Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಸೇನೆಯಲ್ಲಿ ಬಡ್ತಿ; ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ನೇಮಕ
ನೀರಜ್ ಚೋಪ್ರಾ ಅವರ ಒಲಿಂಪಿಕ್ಸ್ ಸಾಧನೆಗಳ ನಂತರ ಭಾರತದಲ್ಲಿ ಜಾವೆಲಿನ್ ಎಸೆತಕ್ಕೆ ಅಪಾರ ಜನಪ್ರಿಯತೆ ದೊರೆತಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ದೇಶಾದ್ಯಂತ ಮನೆಮಾತಾಗಿದ್ದಾರೆ.;
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತರಾದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಬಡ್ತಿ ನೀಡಲಾಗಿದೆ. ಅವರನ್ನು ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ನೇಮಿಸಲಾಗಿದೆ. ಈ ಬಡ್ತಿಯು 2025ರ ಏಪ್ರಿಲ್ 16 ರಿಂದ ಜಾರಿಗೆ ಬಂದಿದೆ ಎಂದು ರಕ್ಷಣಾ ಸಚಿವಾಲಯವು ಅಧಿಕೃತವಾಗಿ ಪ್ರಕಟಿಸಿದೆ. ಈ ಹಿಂದೆ ಅವರು ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ನೀರಜ್ ಚೋಪ್ರಾ ಅವರ ಒಲಿಂಪಿಕ್ಸ್ ಸಾಧನೆಗಳ ನಂತರ ಭಾರತದಲ್ಲಿ ಜಾವೆಲಿನ್ ಎಸೆತಕ್ಕೆ ಅಪಾರ ಜನಪ್ರಿಯತೆ ದೊರೆತಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ದೇಶಾದ್ಯಂತ ಮನೆಮಾತಾಗಿದ್ದಾರೆ. ನಂತರ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಮುಂದಿನ ಸ್ಪರ್ಧೆಗೆ ಸಜ್ಜಾದ ನೀರಜ್: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎನ್‌ಸಿ ಕ್ಲಾಸಿಕ್ ಅಥ್ಲೆಟಿಕ್ಸ್ ಕೂಟವು ಮುಂದೂಡಲ್ಪಟ್ಟ ಕಾರಣ, ನೀರಜ್ ಚೋಪ್ರಾ ಅವರು ಮೇ 23 ರಂದು ಪೋಲೆಂಡ್‌ನ ಚೋರ್ಜೋವ್‌ನಲ್ಲಿ ನಡೆಯಲಿರುವ 71ನೇ ಓರ್ಲೆನ್ ಜನುಸ್ಜ್ ಕುಸೊಜಿನ್ಸ್ಕಿ ಸ್ಮಾರಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಎನ್‌ಸಿ ಕ್ಲಾಸಿಕ್ ಅನ್ನು ಮುಂದೂಡಲಾಗಿತ್ತು.
ಚೋರ್ಜೋವ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ನೀರಜ್ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಪೋಲೆಂಡ್‌ನ ಮಾರ್ಸಿನ್ ಕ್ರುಕೋವ್ಸ್ಕಿ ಅವರಂತಹ ಪ್ರಮುಖ ಅಥ್ಲೀಟ್‌ಗಳೊಂದಿಗೆ ಸ್ಪರ್ಧಿಸಲಿದ್ದಾರೆ.
ಪೋಲೆಂಡ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯು ಈ ಋತುವಿನಲ್ಲಿ ನೀರಜ್ ಅವರು ಭಾಗವಹಿಸಲಿರುವ ಮೂರನೇ ಟೂರ್ನಿಯಾಗಿದೆ. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು ಮತ್ತು ಇದೀಗ ಮೇ 16 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. 2023 ರಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿದ್ದ ನೀರಜ್, 2024 ರಲ್ಲಿ ಎರಡನೇ ಸ್ಥಾನ ಗಳಿಸಿದ್ದರು ಎಂಬುದು ಗಮನಾರ್ಹ.